Honeymoon: ಮದುವೆ ಹನಿಮೂನ್ ಗಾಗಿ ಇಲೊಬ್ಬನ ಖತರ್ನಾಕ್ ಪ್ಲಾನ್! ತನ್ನ ಕಂಪನಿಗೆ ಬರೋಬ್ಬರಿ 10.6 ಕೋಟಿ ರೂ ಪಂಗನಾಮ ಹಾಕಿದ ಕಿಲಾಡಿ ಕೊನೆಗೂ ಅರೆಸ್ಟ್ !

Honeymoon: ಎಷ್ಟೇ ಬಡವ ಆಗಿದ್ರು ತನ್ನ ಮದುವೆ ಮಾತ್ರ ಅದ್ದೂರಿಯಾಗಿ ನಡಿಬೇಕು ಅನ್ನೋ ಕನಸು ಇರುತ್ತೆ. ಅದರಲ್ಲೂ ತನ್ನ ವೈವಾಹಿಕ ಜೀವನದ ಆರಂಭವನು ಖುಷಿಯಾಗಿ ಕಳೆಯಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಏನೇ ಆಗ್ಲಿ ತನ್ನ ಮಿತಿಯನ್ನು ಮೀರಿ ಆಸೆ ಪಡೋದು ಅಪಾಯಕ್ಕೆ ದಾರಿ ಅನ್ನೋದನ್ನು ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ಮದುವೆ ಮತ್ತು ಹನಿಮೂನ್‌ಗಾಗಿ ಒಂದಲ್ಲ ಎರಡಲ್ಲ ಕಂಪನಿಗೆ 10.6 ಕೋಟಿ ರೂ.ಗಳನ್ನು ಪಂಗ ನಾಮ ಹಾಕಿದ್ದಾನೆ.

 

Heart Attack: ಚೆಸ್‌ ಆಡುತ್ತಿರುವಾಗಲೇ ಕುಸಿದು ಸಾವಿಗೀಡಾದ ಗ್ರ್ಯಾಂಡ್‌ ಮಾಸ್ಟರ್‌

ಹೌದು, ವರದಿಯ ಪ್ರಕಾರ, 32 ವರ್ಷದ ವ್ಯಕ್ತಿ ತನ್ನ ಕಂಪನಿಯಿಂದ 10.6 ಕೋಟಿ ರೂಪಾಯಿಗಳನ್ನು ಮೋಸದಿಂದ ಪಡೆಯಲು ಪ್ರೀ ಪ್ಲಾನ್ ಮಾಡಿದ್ದು ಅಲ್ಲದೇ, ಅದಕ್ಕಾಗಿ ತನ್ನ ಸಹೋದರಿ, ಸ್ನೇಹಿತ ಮತ್ತು ಹೆಂಡತಿಯ ಖಾತೆಗಳನ್ನು ಬಳಸಿದ್ದಾನೆ.

ಈ ಭೂಪ ಮೋಸದಿಂದ ದೋಚಿದ ಹಣವನ್ನು ಬಿಂದಾಸ್ ಆಗಿ ಖರ್ಚು ಮಾಡಿದ್ದಾನೆ. ಆತ ಈ ಹಣದಿಂದ ಅವನು ಮೊದಲು ತನ್ನ ಸಾಲವನ್ನು ತೀರಿಸಿದ್ದಾನೆ. ಬಳಿಕ ಉಳಿದ ಹಣವನ್ನು ತನ್ನ ಮದುವೆ ಮತ್ತು ಹನಿಮೂನ್‌ಗಾಗಿ (Honeymoon) ಬಳಸಿದ್ದಾನೆ. ಅಂದರೆ ಈ ಹಣದಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಎರಡು ಸಾಲವನ್ನು ತೀರಿಸಿದ್ದಾನೆ ಎಂದು ವರದಿ ತಿಳಿಸಿದೆ. ಇಷ್ಟೇ ಅಲ್ಲ, ಉಳಿದ ಹಣ 15 ಲಕ್ಷ ರೂ.ಗಳನ್ನು ಷೇರು ಮತ್ತು ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ 15 ಲಕ್ಷ ರೂ. ಅಷ್ಟೇ ಅಲ್ಲ, ಈ ಹಣದಿಂದ 16 ಲಕ್ಷ ರೂಪಾಯಿ ಖರ್ಚು ಮಾಡಿ ಆ ವ್ಯಕ್ತಿ ಮದುವೆ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಹನಿಮೂನ್ ಗೆ 3.5 ಲಕ್ಷ ರೂ. ಖರ್ಚು ಮಾಡಿದ್ದಾನೆ. ಹೀಗೆ ಬೇಕಾಬಿಟ್ಟಿ ಹಣವನ್ನು ಖರ್ಚು ಮಾಡಿದ್ದಾನೆ.

ಈ ವಂಚನೆ ಪ್ರಕರಣದಲ್ಲಿ ಈತನನ್ನು ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿದ್ದು,ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಅಲ್ಲಿ ತನ್ನ ದುರಾಸೆಯಿಂದ ಕಂಪನಿಗೆ ನಷ್ಟ ಉಂಟು ಮಾಡಿ ಕಂಪನಿಯಿಂದ ಇಷ್ಟು ದೊಡ್ಡ ಕಳ್ಳತನ ಮಾಡಿದ್ದೇನೆ ಎಂದು ಬಾಯಿ ಬಿಟ್ಟಿದ್ದಾನೆ . ಸದ್ಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Divya Vasantha: ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಐಷರಾಮಿ ಜೀವನವೇ ಮುಳುವಾಯ್ತೇ?

Leave A Reply

Your email address will not be published.