Divya Vasantha: ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಐಷರಾಮಿ ಜೀವನವೇ ಮುಳುವಾಯ್ತೇ?

Share the Article

Divya Vasantha: ಕನ್ನಡದ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ದಿವ್ಯ ವಸಂತ ಹನಿ ಟ್ರಾಪ್‌ ಮಾಡಿ ಸುಲಿಗೆ ಯತ್ನ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಆರು ತಿಂಗಳ ಹಿಂದಷ್ಟೇ ತಾನು ಕೆಲಸ ಮಾಡುತ್ತಿದ್ದ ಸುದ್ದಿ ವಾಹಿನಿಯಲ್ಲಿ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದಿವ್ಯಾ ವಸಂತ, ನಂತರ ಸೋಷಿಯಲ್‌ ಮೀಡಿಯಾದಲ್ಲಿ ಆಕ್ವಿವ್‌ ಆಗಿದ್ದಲ್ಲದೇ, ಐಷರಾಮಿ ಜೀವನ ನಡೆಸಲು ಈ ಕಳ್ಳದಾರಿ ಹಿಡಿದರೇ ಎನ್ನಲಾಗುತ್ತಿದೆ.

ಗಿಚ್ಚಿಗಿಲಿಗಿಲಿ ಎಂಬ ಶೋ ಮೂಲಕ ಕಿರುತೆರೆಗೆ ಬಂದಿದ್ದ ದಿವ್ಯಾ ವಸಂತ ಅಲ್ಲಿ ಸ್ಪರ್ಧಿಸಿದ ನಂತರ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದ್ದು, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪಾದನೆ ಶುರು ಮಾಡಿಕೊಂಡಿದ್ದರು.

ಈಕೆ ಕೆಲಸ ಮಾಡುತ್ತಿದ್ದ ಖಾಸಗಿ ಸುದ್ದಿ ವಾಹಿನಿಯಲ್ಲಿ 15 ಸಾವಿರ ಸಂಬಳ ಪಡೆದುಕೊಳ್ಳುತ್ತಿದ್ದು, ಯಾವಾಗ ಈಕೆ ಸೋಷಿಯಲ್‌ ಮೀಡಿಯಾದಲ್ಲಿ ಮಿಂಚಲು ಪ್ರಾರಂಭವಾಯಿತೋ ಅಲ್ಲಿ ಇವರ ವೈಯಕ್ತಿಕ ಜೀವನದ ಸುದ್ದಿ ಹರಡಲು ಶುರು ಮಾಡಿದ್ದವು.

72000 ಇನ್‌ಸ್ಟಾಗ್ರಾ ಫಾಲೋವರ್ಸ್‌ ಹೊಂದಿರುವ ದಿವ್ಯಾ ವಸಂತ್‌ ಯಾವುದೇ ಬ್ರ್ಯಾಂಡ್‌ ಸಂಪರ್ಕ ಮಾಡಿದರೂ ಅವರ ಜೊತೆ ಕೊಲಾಬರೇಷನ್‌ ಮಾಡಿಕೊಳ್ಳುತ್ತಿದ್ದರು. ಆದರೂ ಐಶರಾಮಿ ಬದುಕಿಗೆ ಇದು ಸಾಕಾಗುತ್ತಿರಲಿಲ್ಲ.

ದಿವ್ಯಾ ವಸಂತ ಅವರ ಇನ್‌ಸ್ಟಾಗ್ರಾಂ ಖಾತೆ ನೋಡಿದಾಗ ಇವರು ಹಾಕುವ ಬಟ್ಟೆ ಒಮ್ಮೆ ಹಾಕಿದರೆ ಇನ್ನೊಮ್ಮೆ ಹಾಕಿಲ್ಲ. ಇವರಿಗೆ ಇಷ್ಟು ದುಡ್ಡು ಬರುವುದು ಎಲ್ಲಿಂದ ಎಂಬುವುದು ಮಾತ್ರ ನಿಗೂಢ.

ಆದರೆ ದಿವ್ಯಾವಸಂತ ಐಷರಾಮಿ ಜೀವನಕ್ಕೆ ಮನ ಸೋತಿದ್ದರಿಂದ ಸುಲಭವಾಗಿ ಹಣ ಮಾಡಲು ಅಡ್ಡ ದಾರಿ ತುಳಿದು ಸಂಕಷ್ಟಕ್ಕೆ ತುತ್ತಾಗಿದ್ದಾಳೆ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಇದೀಗ ಇದರ ಮುಂದುವರಿದ ಭಾಗವಾಗಿಯೇ ಕೆಲವು ಸ್ನೇಹಿತರ ಜೊತೆ ಸೇರಿ ಸ್ಪಾ ಹಾಗೂ ಪ್ರತಿಷ್ಠಿತ ವೈದ್ಯರನ್ನು ವಂಚಿಸಿ, ಸುಲಿಕೆ ಮಾಡಲು ಯತ್ನ ಮಾಡಿದ ಆರೋಪವನ್ನು ಈಕೆ ಹೊತ್ತಿದ್ದಾಳೆ.

Bangalore: ರಾಜ್ಯಕ್ಕೇ ಖುಷಿ ಸುದ್ದಿ ಕೊಟ್ಟವಳ ಕಹಿ ಸುದ್ದಿ; ದಿವ್ಯಾ ವಸಂತ ಗ್ಯಾಂಗ್‌ನಿಂದ 100 ಜನರಿಗೆ ಸುಲಿಗೆ; ದಿವ್ಯಾ ವಸಂತ ನಾಪತ್ತೆ

Leave A Reply

Your email address will not be published.