Chandrababu Naidu: ಪ್ರಧಾನಿ ಮೋದಿ ಭೇಟಿ ಮಾಡಿದ ಚಂದ್ರಬಾಬು ನಾಯ್ಡು- ಇಟ್ಟ ಹೊಸ ಬೇಡಿಕೆ ಏನು?

Chandrababu Naidu: ಪ್ರಧಾನಿ ಮೋದಿ 3 ನೇ ಅವಧಿಗೆ ಪ್ರಧಾನಿ ಆಗುವ ಮೂಲಕ NDA ಸರ್ಕಾರದ ರಚನೆಗೆ ಪ್ರಮುಖ ಕಾರಣ ಆಗಿರೋ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿ ಭೇಟಿಯಾಗಿಯಾಗಿ, ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಹೌದು, NDA ಸರ್ಕಾರ ರಚನೆಯಾಗುವಾಗ ಬೆಂಬಲ ಘೋಷಿಸಿದ್ದ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು(Chandrababu Naidu) ಅವರು ಯಾವುದೇ ಷರತ್ತುಗಳಿಲ್ಲದೆ, ನಗುನಗುತ್ತಾ ಬಂದು ಮೋದಿ ಕೈ ಕುಲುಕಿ ನಮ್ಮ ಬೆಂಬಲ ನಿಮಗೆ, ಯಾವತ್ತೂ ಯಾವುದಕ್ಕೂ ಹಸ್ತಕ್ಷೇಪ ಮಾಡಲ್ಲ ಎಂದು ಹೇಳಿದ್ದರು. ಅಂತೆಯೇ ಇದೀಗ ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ. ಆದರೆ ಮುಂದೇನು ಎಂಬುದು ಬಲ್ಲವರು ಯಾರು ಅಲ್ಲವೇ? ಈ ಮಧ್ಯೆ ನಿನ್ನೆ(ಜು 4) ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.

Ajilamogaru: ಗಾಳ ಹಾಕಿ ಮೀನು ಹಿಡಿಯಲು ಹೋಗಿ ನೀರು ಪಾಲಾದ ಸುರತ್ಕಲ್‌ ಕಾನ ನಿವಾಸಿ ವ್ಯಕ್ತಿಯ ಮೃತದೇಹ ಪತ್ತೆ

ಭೇಟಿ ಬಳಿಕ ಟ್ವೀಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಾಯ್ಡು ‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುರುವಾರ ರಚನಾತ್ಮಕವಾಗಿ ಮಾತುಕತೆ ನಡೆಸಲಾಯಿತು. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಆಂಧ್ರಪ್ರದೇಶ ಮತ್ತೆ ಶಕ್ತಿ ಕೇಂದ್ರವಾಗಲಿದೆ’ ಎಂದು ನಾಯ್ಡು ಹಂಚಿಕೊಂಡಿದ್ದಾರೆ.

3ನೇ ಅವಧಿಯಲ್ಲಿ ಪ್ರಧಾನಿ ಮೋದಿಗೆ ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಮಿತ್ರ ಪಕ್ಷಗಳ ನಾಯಕರು ಯಾವಾಗ ಬೇಕಾದರೂ ಆಟ ಶುರು ಮಾಡಬಹುದು. ಅಂತೆಯೇ ಕೆಲವು ದಿನಗಳ ಹಿಂದೆ NDA ಮಿತ್ರ ಪಕ್ಷವಾದ JDU ನಾಯಕ, ಮೋದಿ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್(Nithish Kumar) ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಇಟ್ಟು ಆಟ ಶುರು ಮಾಡಿದ್ದರು.

Electric Bike Taxi Ban: ವಾಹನ ಸವಾರರೇ ಇತ್ತ ಗಮನಿಸಿ; ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್‌ ಬೈಕ್‌, ಟ್ಯಾಕ್ಸಿ ನಿಷೇಧ- ರಾಜ್ಯ ಸರಕಾರದಿಂದ ಖಡಕ್‌ ಆದೇಶ

Leave A Reply

Your email address will not be published.