Agniveer: ಅಗ್ನಿವೀರರು ಯೂಸ್ ಅಂಡ್‌ ಥ್ರೋ ಇದ್ದಂತೆ, ಇದೊಂದು ಮೋಸದ ಜಾಲ – ಸಂಸತ್ತಿನಲ್ಲಿ ಗುಡುಗಿದ ರಾಹುಲ್

Share the Article

Agniveer: ಸೇನಾಪಡೆಗಳಿಗೆ ಯೋಧರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ‘ಅಗ್ನಿವೀರ’ ಯೋಜನೆಯ ಬಗ್ಗೆ ಈಗಾಗಲೇ ನೀವು ಕೇಳಿರಬಹುದು. ಆದರೆ ‘ಅಗ್ನಿವೀರ’ ಯೋಜನೆಯ ವಿಚಾರದಲ್ಲಿ ಈಗಾಗ್ಲೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್‌ ಗಾಂಧಿ, ಇದೀಗ ಲೋಕಸಭೆಯ ಪ್ರತಿಪಕ್ಷ ನಾಯಕನಾದ ಬಳಿಕ ಮಾಡಿದ ಮೊದಲ ಭಾಷಣದಲ್ಲೂ ರಾಹುಲ್ ಗಾಂಧಿ ಅವರು ‘ಅಗ್ನಿವೀರ’ (Agniveer) ಯೋಜನೆಯ ಬಗ್ಗೆ ಧ್ವನಿ ಎತ್ತಿದ್ದಾರೆ.

Belthangady: ಹಿರಿಯ ಸಾಹಿತಿ ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಎನ್. ಜಿ ಪಟವರ್ಧನ್ ನಿಧನ

ರಾಹುಲ್ ಗಾಂಧಿ ಪ್ರಕಾರ, ‘ಅಗ್ನಿವೀರರು ಯೂಸ್‌ ಅಂಡ್‌ ಥ್ರೋ ಕಾರ್ಮಿಕರಿದ್ದಂತೆ. ಸೇನಾಪಡೆಯಲ್ಲಿ ಒಬ್ಬ ಸೈನಿಕನಿಗೆ ಪಿಂಚಣಿ ಸಿಗುತ್ತದೆ, ಇನ್ನೊಬ್ಬ ಸೈನಿಕನಿಗೆ ಪಿಂಚಣಿ ಸಿಗುವುದಿಲ್ಲ, ಅಷ್ಟೇ ಅಲ್ಲ ನೀವು ಯೋಧರನ್ನು ವಿಭಜನೆ ಮಾಡಿದ್ದೀರಿ’ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಕಿಡಿಕಾರಿದ್ದಾರೆ. ಅದಲ್ಲದೆ ಅಗ್ನಿವೀರ ಯೋಜನೆಯನ್ನು ಸರಿಯಾದ ಚರ್ಚೆಯಿಲ್ಲದೆ ಜಾರಿಗೊಳಿಸಲಾಗಿದೆ. ಕೇವಲ ಪ್ರಧಾನಿ ಕಚೇರಿಯ ಆದೇಶದಂತೆ ಅದನ್ನು ಜಾರಿಗೊಳಿಸಲಾಗಿದೆ’ ಎಂದೂ ಕಿಡಿಕಾರಿದರು.

ಆದ್ರೆ ರಾಹುಲ್‌ ಮಾಡಿದ ಈ ಎಲ್ಲಾ ಆರೋಪದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ‘ರಾಹುಲ್‌ ಗಾಂಧಿ ತಪ್ಪು ಮಾಹಿತಿ ಜನರಿಗೆ ಹರಡುತ್ತಿದ್ದಾರೆ. ನಿಯಮ ಪ್ರಕಾರ ಒಂದುವೇಳೆ ಅಗ್ನಿವೀರರು ಹುತಾತ್ಮರಾದರೆ ಆತನ ಕುಟುಂಬಕ್ಕೆ 1 ಕೋಟಿ ರು. ಪರಿಹಾರ ನೀಡಲಾಗುತ್ತದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

Dakshina Kannada: ಉಳ್ಳಾಲ; ಟಿಪ್ಪರ್‌-ಸ್ಕೂಟರ್‌ ಅಪಘಾತ; ಚಿಕಿತ್ಸೆ ಫಲಕಾರಿಯಾಗದೆ ಸ್ಕೂಟರ್‌ ಸವಾರ ಸಾವು

 

Leave A Reply