Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌; ನಟ ದರ್ಶನ್‌ ವಿರುದ್ಧ ಹೇಳಿಕೆ ನೀಡಿದ ಪವಿತ್ರಾಗೌಡ

Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್‌ ಅವರ ಗೆಳತಿ ಪವಿತ್ರ ಅವರು ಈ ಕೊಲೆ ಪ್ರಕರಣದಲ್ಲಿ ಎ1 ಆರೋಪಿ. ಇದೀಗ ಅವರ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ದರ್ಶನ್‌ ನನ್ನ ಮುಂದೆಯೇ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ಪವಿತ್ರಾಗೌಡ ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

 

New Law implementation: ಜುಲೈ 1 ರಿಂದ ದೇಶದಾದ್ಯಂತ ಮೂರು ಹೊಸ ಕಾನೂನು ಜಾರಿ : ಅವು ಯಾವುವು ಗೊತ್ತಾ? : ಇಲ್ಲಿ ನೋಡಿ

ನಟ ದರ್ಶನ್‌ ಆಂಡ್‌ ಗ್ಯಾಂಗ್‌ ಅವರು ರೇಣುಕಾಸ್ವಾಮಿಯನ್ನು ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಮಾಡಿದ್ದಕ್ಕೆ ಚಿತ್ರದುರ್ಗದಿಂದ ಕಿಡ್ನ್ಯಾಪ್‌ ಮಾಡಿ ಕರೆದುಕೊಂಡು ಬಂದಿದ್ದು, ನಂತರ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿ ನಂತರ ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ದೊಡ್ಡ ಸಾಕ್ಷಿ ದೊರಕಿದೆ.

17 ಜನ ಆರೋಪಿಗಳನ್ನು ಈ ಕೇಸಿನಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿರಸಲಾಗಿದೆ. ಪವಿತ್ರಾ ಗೌಡ ಅವರು ಒಂದು ವಾರದಲ್ಲೇ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಮೂಲಕ ನಟ ದರ್ಶನ್‌ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿಹಾಕಿದ್ದು, ನಂತರ ನಾನು ಒಂದು ಏಟು ಚಪ್ಪಲಿಯಲ್ಲಿ ಹೊಡೆದಿದ್ದು, ಅನಂತರ ನನ್ನ ಎದುರಿನಲ್ಲಿಯೇ ರೇಣುಕಾಸ್ವಾಮಿಯ ಮೇಲೆ ನಟ ದರ್ಶನ್‌ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಮೂಲಕ ನಟ ದರ್ಶನ್‌ ವಿರುದ್ಧವಾಗಿಯೇ ನಟಿ ಪವಿತ್ರಾ ಗೌಡ ಹೇಳಿಕೆ ನೀಡಿದ್ದಾಳೆ.

ದರ್ಶನ್‌ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದು ನಿಜ, ನಾನು ಶೆಡ್‌ಗೆ ಹೋಗುವುದಕ್ಕೂ ಮೊದಲೇ ದರ್ಶನ್‌ ಶೆಡ್‌ನಲ್ಲಿದ್ದನು ಎಂದು ಪೊಲೀಸರ ಮುಂದೆ ಪವಿತ್ರಾ ಗೌಡ ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

Darshan Matter: ದರ್ಶನ್ ವಿಚಾರವಾಗಿ ಸುಮಲತಾ, ರಾಕ್ ಲೈನ್ ಮೌನವೇಕೆ ?! ಅಚ್ಚರಿ ಹೇಳಿಕೆ ಕೊಟ್ಟ ಸಾರಾ ಗೋವಿಂದ್

Leave A Reply

Your email address will not be published.