Water Bill Hike: ರಾಜ್ಯದ ಜನರ ಜೇಬಿಗೆ ಬೀಳಲಿದೆ ಮತ್ತೆ ಕತ್ತರಿ – ಸದ್ಯದಲ್ಲೇ ಇದರ ಬೆಲೆಯೂ ಏರಿಕೆ !!

Water Bill Hike: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಬೆನ್ನಲ್ಲೇ ನಂದಿನಿ ಹಾಲಿನ(Nandini Milk) ಪ್ರತೀ ಪಾಕೆಟ್ ನಲ್ಲಿ 50 ML ಹಾಲನ್ನು ಹೆಚ್ಚಿಗೆ ಸೇರಿಸಿ 2 ರೂ ಹೆಚ್ಚಳ ಮಾಡಿ KMF ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬರೆ ಬೀಳಲಿದ್ದು ಸದ್ಯದಲ್ಲೇ ಇದರ ಬೆಲೆಯೂ ಏರಿಕೆ ಆಗುತ್ತದೆ ಎನ್ನಲಾಗಿದೆ.

ಗ್ಯಾರಂಟಿ ಯೋಜನೆಗಳನ್ನು(Congress Guarantees) ಜಾರಿಗೆ ತಂದು ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಪಿರುವ ರಾಜ್ಯ ಸರ್ಕಾರ ಇದೀಗ ಜನರಿಗೆ ಅನಿವಾರ್ಯ ಆಗಿರುವ, ಸಿಕ್ಕ ಸಿಕ್ಕ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇದುವರೆಗೂ ಮದ್ಯದ ದರ ಏರಿಸಿ ಏರಿಸಿ ಮದ್ಯ ಪ್ರಿಯರ ಶಾಪಕ್ಕೆ ಗುರಿಯಾಗಿತ್ತು. ಬಳಿಕ ಸರ್ಕಾರದ ಕಣ್ಣು ಪೆಟ್ರೋಲ್, ಡೀಸೆಲ್(Petrol-Diesel ) ಹಾಗೂ ಹಾಲಿನ ಮೇಲೆ ಬಿದ್ದಿತ್ತು. ಆದರೀಗ ನೀರಿನ ದರವೂ ಏರಿಕೆಯಾಗುತ್ತದೆ ಎನ್ನಲಾಗಿದೆ.

ಹೌದು, ಗ್ಯಾರಂಟಿ(Guarantee) ಯೋಜನೆಗಳಿಗೆ ದುಡ್ಡು ಸಂಗ್ರಹಿಸಲು ಸರ್ಕಾರ ಯೋಜನೆ ರೂಪಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ನೀರಿನ ದರವೂ(Water Bill Hike) ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕಳೆದ 14 ವರ್ಷಗಳಿಂದ ದರ ಏರಿಸಲಾಗಿಲ್ಲ. ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಇತ್ತೀಚಿಗೆ ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದರು. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೊಂದು ಬರೆ ಜನ ಸಾಮಾನ್ಯರ ಮೇಲೆ ಬೀಳುವುದು ಗ್ಯಾರಂಟಿ. ಈಗಾಗಲೇ ಬೆಂಗಳೂರಿನ ಜಲಮಂಡಳಿ ದರ ಪರಿಷ್ಕರಣೆಯ ಪ್ರಸ್ತಾವನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.

Ujire: ಬೆಳಾಲು ಕ್ರಾಸ್‌ ಹತ್ತಿರ ಡಿವೈಡರಿಗೆ ಡಿಕ್ಕಿ ಹೊಡೆದ ಬೆಂಝ್‌ ಕಾರು- ವ್ಯಕ್ತಿ ಸಾವು

Leave A Reply

Your email address will not be published.