Arecanut: PMFBY ಅಡಿಕೆಗೆ ಬೆಳೆ ವಿಮೆ; ಹಣಪಾವತಿಗೆ ಇಂದೇ ಕೊನೆ ದಿನ

Arecanut: ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯಲ್ಲಿ ಅಡಿಕೆ ಬೆಳೆ, ಕಾಳುಮೆಣಸು ಬೆಳೆ ವಿಮೆ ನೋಂದಣಿಗೆ ಉಡುಪಿಯಲ್ಲಿ ಬೆಳೆಗಾರರು ನೋಂದಣಿ ಮಾಡಲು ಇಂದು ಕೊನೆಯ ದಿನ ಎಂದು ವರದಿಯಾಗಿದೆ.
Amith Shah: ಯತ್ನಾಳ್ ಬರೆದ ಪತ್ರಕ್ಕೆ ರಿಪ್ಲೇಕೊಟ್ಟ ಅಮಿತ್ ಶಾ – ರಾಜ್ಯದಲ್ಲಿ ಇವರೆಲ್ಲರಿಗೂ ಶುರುವಾಯ್ತು ನಡುಕ !!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.31 ರವರೆಗೆ ಅವಕಾಶವಿದೆ. ಉಡುಪಿ, ಹಾಸನ, ತುಮಕೂರು, ದಾವಣಗೆರೆ ಹಾಗೂ ವಿಜಯಪುರದ ಪ್ರಾದೇಶಿಕ ಬೆಳೆಗಳಿಗೆ ಜೂ.30 ರ ಗಡುವು ವಿಧಿಸಿರುವುದು ರೈತರಿಗೆ ಸಮಸ್ಯೆ ಉಂಟಾಗಿದೆ.
ಪ್ರತಿ ವರ್ಷ ನೋಂದಣಿ ಮಾಡಲು ಒಂದು ತಿಂಗಳ ಕಾಲಾವಧಿ ಇರುತ್ತದೆ. ಕಂತಿನ ಹಣ ತುಂಬಲು 15-30 ದಿನಗಳು ಇರುತ್ತಿತ್ತು. ಈ ವರ್ಷ ನಾಲ್ಕು ದಿನಗಳಾಗಿದ್ದು, ಇದೀಗ ಹಣ ಪಾವತಿ ಹಾಗೂ ನೋಂದಣಿಗೆ ತೊಂದರೆಯಾಗುತ್ತಿದೆ.
ಜೂ.26 ರಂದು ಆದೇಶವಾಗಿದ್ದು, ಜು.1 ಕೊನೆಯ ದಿನವಾಗಿದೆ. ಕಚೇರಿ ನಿರ್ವಹಣೆ ಮೂರೇ ದಿನ ಇರುವುದು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ವಿಮೆ ಕಂಪೆನಿ ಬೇರೆಯಾಗಿರುವುದು ಸಮಸ್ಯೆ ಕಾರಣ. ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ 1.28 ಲಕ್ಷ ರೂ, ವಿಮೆಗೆ ರೈತರಿಗೆ ರೂ.6400, ಕಾಳು ಮೆಣಸಿಗೆ 47 ಸಾವಿರ ರೂ, ವಿಮೆಗೆ 2350 ರೂ. ಪಾವತಿಸಬೇಕು.