Kodagu: ಕೆಲಸಕ್ಕೆಂದು ರೆಡಿಯಾಗುತ್ತಿದ್ದ ವೇಳೆ ಹಠಾತ್ ಹೃದಯಾಘಾತ; ಕುಸಿದು ಸಾವು ಕಂಡ 24ರ ಹರೆಯದ ಯುವತಿ

Kodagu: ಮಡಿಕೇರಿಯಲ್ಲಿ ಕೆಲಸಕ್ಕೆಂದು ಹೊರಡಲೆಂದು ರೆಡಿಯಾಗುತ್ತಿದ್ದ ಯುವತಿಯೋರ್ವಳು ಹೃದಯಾಘಾತಕ್ಕೆ ಬಲಿಯಾದ ಘಟನೆಯೊಂದು ನಡೆದಿದೆ.
ಈ ದಾರುಣ ಘಟನೆ ನಡೆದಿರುವುದು ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದದೆ.
ನಿಲಿಕಾ ಪೊನ್ನಪ್ಪ (24) ಎಂಬಾಕೆಯೇ ಮೃತ ಯುವತಿ. ಮಡಿಕೇರಿಯಲ್ಲಿನ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಇವರು ಕೆಲಸ ಮಾಡುತ್ತಿದ್ದರು.
ಎಂದಿನಂತೆ ಇಂದು ಕೂಡಾ ಕೆಲಸಕ್ಕೆಂದು ಹೊರಡಲು ರೆಡಿಯಾಗುತ್ತಿದ್ದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಯುವತಿ ವಾಪಸ್ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ. ತಾಯಿ ಏನಾಯಿತೆಂದು ಹಿಂದಿನಿಂದ ಬಂದು ಕೇಳುವಷ್ಟರಲ್ಲಿ ನಿಲಿಕಾ ಪ್ರಾಣ ಕಳೆದುಕೊಂಡಿದ್ದರು. ಆಸ್ಪತ್ರೆಗೆ ಸಾಗಿಸಿದರೂ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.