Ayodhya Rama Mandir: ಅಯೋಧ್ಯೆಯ ಗರ್ಭಗುಡಿಯಲ್ಲಿ ಎದುರಾಯ್ತು ದೊಡ್ಡ ಸಮಸ್ಯೆ- ಇಂಜಿನಿಯರ್ ಗಳೇ ಕಕ್ಕಾಬಿಕ್ಕಿ !!
Ayodhya Rama mandir: ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರವನ್ನು(Ayodhya Rama mandir) ಲೋಕಾರ್ಪಣೆ ಮಾಡಿ, ರಾಮಲಲ್ಲನ ಪ್ರಾಣ ಪ್ರತಿಷ್ಠೆ ನೆರವೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ(PM Modi)ಯವರು ಕೋಟ್ಯಾಂತರ ಹಿಂದೂಗಳ ಕನಸನ್ನು ನೆರವೇರಿಸುತ್ತಿದ್ದಾರೆ. ಈ ಬಳಿಕ ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಭಕ್ತರು ಬರುತ್ತಿದ್ದಾರೆ. ಆದರೆ ಈ ನಡುವೆ ಅಯೋಧ್ಯೆಯ ಗರ್ಭಗುಡಿಯಲ್ಲಿ ದೊಡ್ಡ ಸಮಸ್ಯೆ ಎದುರಾಗಿದ್ದು, ಇಂಜಿನಿಯರ್ ಗಳೇ ಕಕ್ಕಾಬಿಕ್ಕಿಯಾಗಿದ್ದಾರೆ.
ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಯೋಧ್ಯೆ ರಾಮಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ (sanctum sanctorum) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅರ್ಚಕರಿಗೆ ತಲೆನೋವಾಗಿ ಪರಿಣಮಿಸಿದೆ. ಅದೇನೆಂದರೆ ಶ್ರೀರಾಮನಿಗೆ ಸ್ನಾನ, ಅಭಿಷೇಕವನ್ನು ಮಾಡಿದ ನೀರು ಹೊರ ಹೋಗಲು ಯಾವುದೇ ಕಾಲುವೆ, ಚರಂಡಿಯ ವ್ಯವಸ್ಥೆಯನ್ನೇ ಮಾಡಿಲ್ಲ. ಹೀಗಾಗಿ ನೀರೆಲ್ಲಾ ಒಳಗೇ ನಿಂತುಬಿಡತ್ತದೆ. ಒಟ್ಟಿನಲ್ಲಿ ಕೆಲಸ ಕಾರ್ಯಗಳ ನಡುವೆ ದೇವಾಲಯಯದ ಇಂಜಿನಿಯರ್ ಗಳು ಶ್ರೀರಾಮನ ಸ್ನಾನದ ವಿಷಯವನ್ನೇ ಮರೆತಂತಿದೆ.
Masala Panipuri: ಮಸಾಲ-ಪಾನಿಪೂರಿ ಶೀಘ್ರದಲ್ಲೇ ನಿಷೇಧ? ಕೆಮಿಕಲ್ ಸಾಸ್ ಬಳಕೆ ಮಕ್ಕಳಿಗೆ ಹಾನಿಕಾರಕ
ಹೌದು, ನಿತ್ಯದ ಪೂಜಾ ಕೈಂಕರ್ಯಗಳಿಗೆ ಬಳಸುವ ನೀರು ಹರಿದು ಹೋಗದೇ ಇರುವುದು ಅರ್ಚಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ ತಂದಿದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಅಲಂಕಾರ ಸಮಾರಂಭದ ಮೊದಲು ರಾಮ್ ಲಲ್ಲಾನಿಗೆ ಪ್ರತಿದಿನ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಯಲ್ಲಿ ಮೊದಲು ಸರಯು ನದಿಯ ನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಬಳಿಕ ಹಾಲು, ಮೊಸರು, ತುಪ್ಪ ಮತ್ತು ಜೇನುತುಪ್ಪವನ್ನು ಒಳಗೊಂಡಿರುವ ಮಧು ಪರ್ಕ್ ಎಂದು ಕರೆಯಲ್ಪಡುವ ಮಿಶ್ರಣವನ್ನು ಹಾಕಲಾಗುತ್ತದೆ. ಇದರ ಅನಂತರ ರಾಮ್ ಲಲ್ಲಾನನ್ನು ಸರಯುವಿನ ನೀರಿನಿಂದ ಮತ್ತೆ ಸ್ನಾನ ಮಾಡಿಸಲಾಗುತ್ತದೆ. ಈ ಆಚರಣೆಗಳ ಅನಂತರ ನೆಲದ ಮೇಲೆ ಸಂಗ್ರಹವಾಗುವ ನೀರನ್ನು ಹರಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು. ಪ್ರಸ್ತುತ, ನೀರನ್ನು ಹಿಡಿಯಲು ದೊಡ್ಡ ಪ್ಲೇಟ್ ಅನ್ನು ಇರಿಸಲಾಗುತ್ತದೆ. ಅನಂತರ ಅದನ್ನು ಸಸ್ಯಗಳಿಗೆ ಬಿಡಲಾಗುತ್ತದೆ. ಉಳಿದ ನೀರನ್ನು ಕೈಯಾರೆ ಒರೆಸಿ ಒಣಗಿಸಲಾಗುತ್ತದೆಯಂತೆ.
ಇನ್ನು ಮಾಡುವುದು ಕಷ್ಟ ಸಾದ್ಯ:
ದೇವಾಲಯವನ್ನು ನಿರ್ಮಿಸಿದಾಗ ಯಾವುದೇ ಎಂಜಿನಿಯರ್ ಭಗವಾನ್ ರಾಮನ ‘ಸ್ನಾನ’ದ ಬಗ್ಗೆ ಯೋಚಿಸಲಿಲ್ಲ ಮತ್ತು ಆದ್ದರಿಂದ ಗರ್ಭಗುಡಿಯಲ್ಲಿ ಯಾವುದೇ ಔಟ್ಲೆಟ್ ಅನ್ನು ರಚಿಸಲಾಗಿಲ್ಲ. ಒಳಚರಂಡಿ ವ್ಯವಸ್ಥೆಯನ್ನು ರಚಿಸಲು ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕಲ್ಲುಗಳನ್ನು ಒಡೆಯುವುದು ಗರ್ಭಗುಡಿಯ ಸೌಂದರ್ಯವನ್ನು ಹಾಳುಮಾಡುವುದು ಮಾತ್ರವಲ್ಲದೆ ತಾಂತ್ರಿಕವಾಗಿಯೂ ಇದು ಸವಾಲಾಗಿದೆ. ಏಕೆಂದರೆ ನಿರ್ಮಾಣವು ಸುಲಭವಾಗಿ ಹಾಳುಮಾಡಲು ಸಾಧ್ಯವಾಗದ ಇಂಟರ್ ಲಾಕ್ ಕಲ್ಲುಗಳನ್ನು ಒಳಗೊಂಡಿದೆ. ರಾಮಮಂದಿರದ ಎಂಜಿನಿಯರ್‌ಗಳು ಸಹ ಈ ಸಮಸ್ಯೆಗೆ ಪರಿಹಾರವನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ ಎಂದು ಅರ್ಚಕರು ಉಲ್ಲೇಖಿಸಿದ್ದಾರೆ.