Nandini Milk Price: ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ; ನಂದಿನಿ ಹಾಲಿನ ದರ ಹೆಚ್ಚಳ- ಕೆಎಂಎಫ್‌

Share the Article

Nandini Milk Price: ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್‌ ಮಹತ್ವದ ನಿರ್ಧಾರವನ್ನು ಪ್ರಕಟ ಮಾಡಿದೆ. ಒಂದು ಲೀಟರ್‌ ನಂದಿನಿ ಹಾಲಿನ ಪ್ಯಾಕೆಟ್‌ಗೆ 50 ಎಂಎಲ್‌ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಈಗಿರುವ ಲೀಟರ್‌ ಹಾಲಿನ ದರ ರೂ.42 ನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು. ಈ ದರ ನಾಳೆ ಅನ್ವಯವಾಗಲಿದೆ.

Upcoming Bikes: ನೀವು ಹೊಸ ಬೈಕ್ ಖರೀದಿಯ ಯೋಚನೆಯಲ್ಲಿದ್ದೀರಾ? ಸ್ವಲ್ಪ ಸಮಯ ಕಾಯಿರಿ, ಈ ಬೈಕ್‌ಗಳು ಜುಲೈನಲ್ಲಿ ಬಿಡುಗಡೆ

ಅರ್ಧ ಲೀಟರ್‌ ಹಾಲಿನ ಪ್ಯಾಕೆಟ್‌ ದರ 22 ರಿಂದ 24 ರೂ ಏರಿಕೆ ಆಗಿದೆ. ಮೊಸರು ಹಾಗೂ ಇನ್ನಿತರ ಹಾಲಿನ ಉತ್ಪನ್ನದ ದರ ಏರಿಕೆ ಆಗಿಲ್ಲ.

15% ಹಾಲು ಸಂಗ್ರಹ ಹೆಚ್ಚಳ ಆಗಿದ್ದು, ಮಾರಾಟ ಮಾಡುವ ದೃಷ್ಟಿಯಿಂದ ಪ್ರತಿ ಪ್ಯಾಕೇಟ್‌ಗೆ 50 ಎಂಎಲ್‌ ಹೆಚ್ಚುವರಿ ಹಾಲು ನೀಡಲಿದ್ದು, ಹಾಗಾಗಿ ದರ ಹೆಚ್ಚಳ ಮಾಡಿ ರೂ.2 ಏರಿಕೆ ಆಗಿದೆ. ಪ್ರತಿ ಪ್ಯಾಕೆಟ್‌ಗೆ ಹೆಚ್ಚುವರಿ ಹಾಲು ಸೇರಿಸಿ ದರ ಏರಿಕೆ ಮಾಡಿದ್ದು ಎಂದು ಕೆಎಂಎಫ್‌ ಹೇಳಿದೆ

ಹೊಸ ದರ ಪಟ್ಟಿ ವಿವರ ಇಲ್ಲಿದೆ.
ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

 

Rama Mandir: ಸೋರುತಿಹುದು ಅಯೋಧ್ಯೆಯ ರಾಮ ಮಂದಿರ, ಮೊದಲ ಮಳೆಗೆ ಗರ್ಭಗುಡಿಯಲ್ಲಿ ತುಂಬಿ ತುಳುಕುತಿಹುದು ಮಾಳಿಗೆಯ ನೀರು !!

Leave A Reply