Home News DOPT: ಸರ್ಕಾರಿ ನೌಕರರಿಗೆ ಕಟ್ಟೆಚ್ಚರ – ಬೆಳಿಗ್ಗೆ 9.15 ಕ್ಕೆ ಆಫೀಸ್ ಗೆ ಬರದಿದ್ದರೆ ಅರ್ಧ...

DOPT: ಸರ್ಕಾರಿ ನೌಕರರಿಗೆ ಕಟ್ಟೆಚ್ಚರ – ಬೆಳಿಗ್ಗೆ 9.15 ಕ್ಕೆ ಆಫೀಸ್ ಗೆ ಬರದಿದ್ದರೆ ಅರ್ಧ ದಿನದ ಸಂಬಳ ಕಟ್ !!

DOPT

Hindu neighbor gifts plot of land

Hindu neighbour gifts land to Muslim journalist

DOPT: ಕೇಂದ್ರದಲ್ಲಿ ಹೊಸದಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೊಸ ಹೊಸ ಕಠಿಣ ಕಾನೂನು ಜಾರಿಗೊಳಿಸುತ್ತಿದೆ. ಅಂತೆಯೇ ಇದೀಗ ಕೇಂದ್ರ ಸರ್ಕಾರಿ ನೌಕರರ ಬೇಜವಾಬ್ದಾರಿತನಕ್ಕೆ ಬ್ರೇಕ್ ಹಾಕಲು ಹೊಸ ಆದೇಶ ಹೊರಡಿಸಿದೆ.

 GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ; ನಿರ್ಮಲ ಸೀತಾರಾಮ್ ಮಹತ್ವದ ಹೇಳಿಕೆ !!ಸದ್ಯದಲ್ಲೇ ಗುಡ್ ನ್ಯೂಸ್ ?!

ಸರ್ಕಾರಿ ಕಚೇರಿಗಳಿಗೆ ಕೆಲ ನೌಕರರು (Govt Employees) ತಡವಾಗಿ ಬರುತ್ತಾರೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಚಾಟೀ ಬೀಸಿದೆ. ಅಂತಹವರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಂಡಿದೆ.

ಹೌದು, ಕೇಂದ್ರ ಸರ್ಕಾರಿ ನೌಕರರು ಕಚೇರಿಗೆ ಬೆಳಗ್ಗೆ 9.15ರೊಳಗೆ ಕಚೇರಿ ತಲುಪಿ, ಬಯೋಮೆಟ್ರಿಕ್‌ ನೀಡದಿದ್ದರೆ ಅಂತಹವರಿಗೆ ಅರ್ಧ ದಿನ ಸಾಂದರ್ಭಿಕ ರಜೆ (casual leave) ಎಂದು ಪರಿಗಣಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ಆದೇಶ ನೀಡಿದೆ. ಅಲ್ಲದೆ ಒಂದು ವೇಳೆ ವಿವಿಧ ಕಾರಣಗಳಿಂದ ನೌಕರರು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಒಂದು ದಿನ ಮೊದಲೇ ಕಚೇರಿಯಲ್ಲಿ ತಿಳಿಸಿ ಸಾಂದರ್ಭಿಕ ರಜೆ (CL) ಚೀಟಿ ಸಲ್ಲಿಸಬೇಕು ಎಂದು ನೌಕರರಿಗೆ ಸೂಚಿಸಲಾಗಿದೆ.

ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆ ವರೆಗೆ ತೆರೆದಿರುತ್ತವೆ. ಆದರೆ ಕಿರಿಯ ಹಂತದ ಉದ್ಯೋಗಿಗಳು ತಡವಾಗಿ ಬರುವುದು ಮತ್ತು ಬೇಗನೆ ಹೊರಡುವುದು ಸಹಜವಾಗಿದೆ. ಇದರಿಂದ ಸಾರ್ವಜನಿಕ ಕೆಲಸಗಳು (Public Work) ಸೇರಿದಂತೆ, ಜನರಿಗೆ ಅನಾನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು (Government Employees) ಬೆಳಗ್ಗೆ 9.15ಕ್ಕೆ ಕಚೇರಿಗೆ ಹಾಜರಾಗಿ, ಹಾಜರಾತಿಯನ್ನು ದಾಖಲಿಸಲು ಸುತ್ತೊಲೆಯಲ್ಲಿ ತಿಳಿಸಿದೆ. ಜೊತೆಗೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಪುಸ್ತಕದ ಬದಲಾಗಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಬಳಸಬೇಕು ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ.

ಅಯೋಧ್ಯೆಯ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಅರ್ಚಕ ನಿಧನ !!