Men Health: ಮೊಬೈಲ್ ನ್ನು ಈ ರೀತಿ ಇಟ್ಟುಕೊಳ್ಳುವುದು ನಿಮ್ಮ ನಾಶಕ್ಕೆ ನೀವೇ ದಾರಿ ಮಾಡಿದಂತೆ!
Men Health: ದಿನ ಕಳೆಯೋದೆ ಮೊಬೈಲ್ ಫೋನ್ ನಿಂದ ಅನ್ನೋ ಕಾಲ ಇದು. ಹಾಗಿರುವಾಗ ಕೈಯಲ್ಲಿ, ಪೊಕೆಟ್ ಒಳಗೆ ಎನಿ ಟೈಮ್ ಮೊಬೈಲ್ ಇರುತ್ತೆ. ಈ ಮೊಬೈಲ್ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ ಆಗಿದೆ. ಅದರಲ್ಲೂ ಪುರುಷರು ಈ ಶಾಕಿಂಗ್ ವಿಚಾರ ತಿಳಿಯಲೇ ಬೇಕು.
ಹೌದು, ಅತಿಯಾದ ಮೊಬೈಲ್ ಬಳಕೆಯು ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ಮೊಬೈಲ್ (Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ (Men Health) ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಹಾಗಿದ್ದರೆ ಎಲ್ಲೆಲ್ಲಿ ಫೋನ್ ಇಟ್ಟುಕೊಳ್ಳಬಾರದು ಎಂದು ಇಲ್ಲಿ ತಿಳಿಯಿರಿ.
ಪ್ಯಾಂಟ್‌ನ ಮುಂಬದಿಯ ಜೇಬಿನಲ್ಲಿ ತುಂಬಾ ಮಂದಿ ಪೋನ್ ಇಟ್ಟುಕೊಳ್ಳುತ್ತಾರೆ. ವಿಶೇಷವಾಗಿ ಇದರಿಂದ ಪುರುಷರ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ ಗುಣಮಟ್ಟವು ತೀವ್ರವಾಗಿ ಕುಸಿಯುತ್ತದೆ. ಇದು ಪುರುಷನ ಲೈಂಗಿಕ ಆರೋಗ್ಯವನ್ನು ಹಾಳುಮಾಡುವ ಮೂಲಕ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು. ಅಲ್ಲದೇ ಪುರುಷನ ಲೈಂಗಿಕ ಸಾಮರ್ಥ್ಯ ಕುಸಿಯಬಹುದು.
ಇನ್ನು ಪ್ಯಾಂಟ್ ಹಿಂದಿನ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಅನುಭವಿಸಬಹುದು.
ಇನ್ನು ಅಂಗಿಯ ಎದೆ ಬಳಿಯ ಪಾಕೆಟ್‌ನಲ್ಲಿ ಕೆಲವರು ಇಟ್ಟುಕೊಳ್ಳುತ್ತಾರೆ. ಫೋನ್ ಅನ್ನು ಈ ಸ್ಥಳದಲ್ಲಿ ಇಡುವ ಮೂಲಕ ಅದರಿಂದ ಹೊರಹೊಮ್ಮುವ ಹಾನಿಕಾರಕ ವಿದ್ಯುತ್ಕಾಂತೀಯ ವಿಕಿರಣವು ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು. ಮುಖ್ಯವಾಗಿ ವಯಸ್ಸಾದವರಿಗೆ ಹೃದಯ ಆಘಾತ ಸಂಭವ ಹೆಚ್ಚು.
ಇನ್ನು ಮಲಗುವಾಗ ತಲೆ ದಿಂಬಿನ ಕೆಳಗೆ ಕೆಲವರು ಮೊಬೈಲ್ ಇಡುತ್ತಾರೆ. ಒಂದು ವೇಳೆ ಮೊಬೈಲ್ ಅನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ, ದೀರ್ಘ ಕಾಲ ಅದು ಬೀರುವ ರೇಡಿಯೇಶನ್ ಮೆದುಳಿನ ಸೆಲ್ ಅನ್ನು ಹಾಳು ಮಾಡುವುದು ಖಚಿತ. ಆದುದರಿಂದ ಇಡೀ ಆರೋಗ್ಯ ಕುಸಿತ ಉಂಟಾಗುತ್ತದೆ.
ಒಟ್ಟಿನಲ್ಲಿ ಮೊಬೈಲ್ ನ ವಿದ್ಯುತ್ಕಾಂತೀಯ ವಿಕಿರಣವನ್ನು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ಆದಷ್ಟು ದೂರವಿರುವಂತೆ ನೋಡಿಕೊಳ್ಳಿ. ಫೋನ್ ನ್ನು ಪಾಕೆಟ್ ಬದಲು ಬ್ಯಾಗ್ ನಲ್ಲಿ ಇರಿಸಿಕೊಳ್ಳಿ. ಇನ್ನು ಮಲಗುವಾಗ ಆದಷ್ಟು ದೂರದಲ್ಲಿ ಮೊಬೈಲ್ ಇದ್ದರೆ ಉತ್ತಮ.
ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೇ?ಹಾಗಿದ್ದರೆ ಈ ಮಾಹಿತಿ ತಿಳಿಯಿರಿ!