Kerala: ರೋಗವನ್ನು ಗುರುತಿಸಲು ಹೆಣಗಾಡಿದ ಖ್ಯಾತ ವೈದ್ಯ – ಸೆಕೆಂಡಿನಲ್ಲಿ ಕಂಡುಹಿಡಿದ ಕೆಲಸದ ಮಹಿಳೆ!!

Kerala: ನಾವು ಯಾವುದಾದರೂ ಒಂದು ಕ್ಷೇತ್ರದಲ್ಲಿ ಎಷ್ಟೇ ಪರಿಣಿತರಾಗಿದ್ದರು(Expert)ಕೂಡ ಕೆಲವೊಮ್ಮೆ ತುಂಬಾ ಬ್ಲಾಂಕ್ ಆಗಿಬಿಡುತ್ತೇವೆ. ಅಂದರೆ ನಾವು ನಮ್ಮ ನುರಿತ ಕ್ಷೇತ್ರದಲ್ಲಿ ಒಂದು ವಿಚಾರವನ್ನು ತಿಳಿದುಕೊಳ್ಳಲು, ಏನನ್ನಾದರೂ ಕಂಡು ಹಿಡಿಯಲು ಅಥವಾ ಅದಕ್ಕೆ ಸಂಬಂಧಿಸಿದಂತೆ ವಿಚಾರ ಮಾಡಲು ವಿಫಲವಾಗಿ ಬಿಡುತ್ತೇವೆ. ಎಷ್ಟೇ ಪ್ರಯತ್ನಿಸಿದರೂ ಅದು ನಮಗೆ ಅರಿವಿಗೇ ಬರುವದಿಲ್ಲ. ಹೊಳೆಯುವುದೂ ಇಲ್ಲ.

Karnataka Government: ರಾಜ್ಯದ ಶಾಲೆಗಳಲ್ಲಿ ಇನ್ನು ಹುಟ್ಟುಹಬ್ಬ ಆಚರಣೆ ಮಾಡುವಂತಿಲ್ಲ – ಸರ್ಕಾರದ ಹೊಸ ಆದೇಶ !!

ಈ ರೀತಿ ಅನೇಕರಿಗೆ ಅನುಭವ ಆಗಿರುತ್ತದೆ. ಮನುಷ್ಯ ಎಂದಮೇಲೆ ಇದೆಲ್ಲದೂ ಸಹಜ. ಆದರೆ ಅಂತಹ ಸಂದರ್ಭದಲ್ಲಿ ಯಾರೋ ಪರಿಚಿತರೋ ಇಲ್ಲ ಅಪರಿಚಿತರೋ, ಅಥವಾ ಅದರ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲದವರೋ ಅದಕ್ಕೆ ಕ್ಷಣಮಾತ್ರದಲ್ಲಿ ಪರಿಹಾರವನ್ನು ಕಂಡುಕೊಡುತ್ತಾರೆ. ಇದೀಗ ಅಂತಹುದೇ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಇದನ್ನು ಕೇಳಿದ್ರೆ ನೀವೂ ಅಚ್ಚರಿ ಪಡಬಹುದು. ಅದೇನೆಂದರೆ ಖ್ಯಾತ ವೈದ್ಯರೊಬ್ಬರು ಒಂದು ಕಾಯಿಲೆಯನ್ನು ಪತ್ತೆ ಮಾಡಲು ಬಾರೀ ಹೆಣಗಾಟ ನಡೆಸಿದ್ದಾರೆ. ಆದರೆ ಅವರಿಗೆ ಅದು ತಿಳಿದೇ ಇಲ್ಲ. ಆದರೆ ಮನೆ ಕೆಲಸದ ಮಹಿಳೆ ಮಾತ್ರ ಕ್ಷಣಮಾತ್ರದಲ್ಲಿ ಪತ್ತೆಮಾಡಿದ್ದಾಳೆ.

ಹೌದು, ಕೇರಳದ (kerala) ಹೆಪಟಾಲಜಿಸ್ಟ್ (hepatologist) ಒಬ್ಬರು ಎಕ್ಸ್ ನಲ್ಲಿ (x) ಹಂಚಿಕೊಂಡಿರುವ ವಿಚಾರವೊಂದು ಭಾರಿ ವೈರಲ್ (Viral News) ಆಗಿದೆ. ಕುಟುಂಬದ ಸದಸ್ಯರಿಗೆ ಇದ್ದ ರೋಗವನ್ನು ಗುರುತಿಸಲು ಸ್ವತಃ ವೈದ್ಯರು ಹೆಣಗಾಡುತ್ತಿದ್ದರು. ಕೊನೆಗೆ ವೈದ್ಯರಿಗೆ ಹತಾಶೆ ಉಂಟಾಯಿತು. ಎಲ್ಲ ವೈದ್ಯಕೀಯ ಪುಸ್ತಕಗಳನ್ನು ನೋಡಿದರು. ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಮನೆಗೆ ಬಂದ ಮನೆ ಕೆಲಸದಾಕೆ ಇದನ್ನು ಪತ್ತೆ ಮಾಡಿದ್ದಾಳೆ ಎಂದು ಅವರು ತಿಳಿಸಿದ್ದಾರೆ.


ಅಷ್ಟಕ್ಕೂ ಆದದ್ದೇನು?
ಲಿವರ್ ಡಾಕ್ (Liver Doc) ಎಂದು ಜನಪ್ರಿಯವಾಗಿರುವ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ವಯಸ್ಕರೊಬ್ಬರಿಗೆ ಬಿಟ್ಟು ಬಿಟ್ಟು ಬರುತ್ತಿದ್ದ ಜ್ವರ, ಶೀತ, ಆಯಾಸ, ಸಂಧಿವಾತದಂತಹ ಲಕ್ಷಣಗಳನ್ನು ಕಂಡು ಎಲ್ಲ ಪರೀಕ್ಷೆಗಳನ್ನು ನಡೆಸಿದರು. ಆದರೆ ಎಲ್ಲವೂ ನಕಾರಾತ್ಮಕ ಫಲಿತಾಂಶ ನೀಡಿತ್ತು. ವೈರಲ್ ಹೆಪಟೈಟಿಸ್‌, ಕೋವಿಡ್ -19, ಇನ್ ಫ್ಲೂ ಯೆನ್ಸ್, ಡೆಂಗ್ಯೂ, ಎಬ್‌ಸ್ಟೈನ್ ಬಾರ್ ವೈರಸ್‌ ಎಲ್ಲವನ್ನೂ ಪರೀಕ್ಷಿಸಿದರು. ಆದರೆ ಎಲ್ಲವೂ ನೆಗೆಟಿವ್ ವರದಿ ನೀಡಿತ್ತು. ಇದಾವುದಪ್ಪಾ ವಿಚಿತ್ರ ಕಾಯಿಲೆ ಎಂದ ವೈದ್ಯರೇ ರೋಸಿ ಹೋದರು.

ಆದರೆ ಒಂದು ದಿನ ಮನೆಯ ಕೆಲಸದವಳು ಇದನ್ನು ಗಮನಿಸಿ ತ’ಮ್ಮ ಮೊಮ್ಮಕ್ಕಳಲ್ಲಿ ಈ ದದ್ದು ಕಾಣಿಸಿಕೊಂಡಿದೆ. ಇದನ್ನು ಸ್ಥಳೀಯ ಭಾಷೆಯಲ್ಲಿ ‘ಅಂಜಂಪಣಿ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಭಯಪಡಬೇಡಿ’ ಎಂದಳು. ಬಳಿಕ ಪಾರ್ವೊವೈರಸ್ ಬಿ 19 ಗಾಗಿ ಪರಿಶೀಲಿಸಿದಾಗ ಅದು ಪಾಸಿಟಿವ್ ಬಂದಿದೆ ಎಂದು ಡಾ. ಫಿಲಿಪ್ಸ್ ಹೇಳಿದ್ದಾರೆ. ವಯಸ್ಸಾದ ಸೇವಕಿಯೊಬ್ಬರು 10 ಸೆಕೆಂಡುಗಳಲ್ಲಿ ರೋಗವನ್ನು ಗುರುತಿಸಿದ್ದು ಇದೇ ಮೊದಲು ಎಂದು ಅವರು ತಿಳಿಸಿ ಹೆಮ್ಮೆಯಿಂದ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರೀ ವೈರಲ್ ಆಗಿದ್ದು 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಏನಿದು ಅಂಜಂಪಣಿ ರೋಗ?
ಇದನ್ನು ಐದನೇ ರೋಗ ಎಂದು ಕರೆಯಲಾಗುತ್ತದೆ. ಇದು ಪಾರ್ವೊವೈರಸ್ B19 ನಿಂದ ಉಂಟಾಗುತ್ತದೆ. ಇದು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಮೂಗು ಮತ್ತು ಬಾಯಿಯಲ್ಲಿರುವ ದ್ರವಗಳ ಮೂಲಕ ರೋಗ ಹರಡುತ್ತದೆ. ಕೆನ್ನೆಗಳ ಮೇಲೆ ಕೆಂಪು ದದ್ದುಗಳನ್ನು ಹೊಂದಿರುತ್ತದೆ. ದೇಹಕ್ಕೂ ಹರಡುತ್ತದೆ.

Renukaswamy Murder Case: ‘ಸತ್ಯಮೇವ ಜಯತೆ’ – ಮೌನ ಮುರಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೇಳಿದ್ದಿಷ್ಟು !!

Leave A Reply

Your email address will not be published.