Pakisthan: 12 ವರ್ಷದ ಮಗಳನ್ನು 5 ಲಕ್ಷಕ್ಕೆ ಮಾರಿ, 72ರ ಮುದುಕನಿಗೆ ಮದುವೆ ಮಾಡಲು ಮುಂದಾದ ತಂದೆ !!

Pakisthan: ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಿ 72 ವರ್ಷದ ವ್ಯಕ್ತಿಗೆ ಮದುವೆ ಮಾಡಲು ಯತ್ನಿಸಿದ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ.

 

ಹೌದು, ಪಾಕಿಸ್ತಾನದ(Pakistan) ಖೈಬರ್ ಪಖ್ತುಂಖ್ವಾದಲ್ಲಿ( Khyber Pakhtunkhwa) ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳನ್ನು 72 ವರ್ಷದ ವ್ಯಕ್ತಿಗೆ ಮದುವೆ ಮಾಡಲು ಯತ್ನಿಸಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮದುವೆಯನ್ನು ನಿಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ 72ರ ಮುದುಕನನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ತಂದೆಯನ್ನು ಆಲಂ ಸೈಯದ್(Alam Saiyad) ಎಂದು ಗುರುತಿಸಲಾಗಿದೆ. ಈ ಸಂಬಂಧ ಬಾಲಕಿಯ ತಂದೆ ಸೈಯದ್ ತನ್ನ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಗೆ ಮುನ್ನ ಇಷ್ಟು ಹಣ ಸಿಗದಿದ್ದರೆ ಮದುವೆ ಮಾಡಿಕೊಡುವುದಿಲ್ಲ ಎಂದು ಸೈಯದ್ ಹೇಳಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಮದುವೆಗೂ ಮುನ್ನ ತಡೆದಿದ್ದಾರೆ.

ಈ ಪ್ರಕರಣಕ್ಕೆ ಪೊಲೀಸರು ಎಂಟ್ರಿಯಾಗುತ್ತಿದ್ದಂತೆ ಬಾಲಕಿಯ ತಂದೆ ಸೈಯದ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರಿಂದ ಬಾಲಕಿ ತಂದೆ, ವರ ಮತ್ತು ನಿಕಾಹ್ ಖಾವಾನ್ ವಿರುದ್ಧ ಬಾಲ್ಯ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಾಲ್ಯವಿವಾಹದ ವಿರುದ್ಧ ಕಾನೂನುಗಳಿದ್ದರೂ ಪಾಕಿಸ್ತಾನದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ, ರಾಜನ್‌ಪುರ ಮತ್ತು ಥಟ್ಟಾದಲ್ಲಿ ನಡೆದ ಇದೇ ರೀತಿಯ ಘಟನೆಗಳು ನಡೆದಿದ್ದವು. ರಾಜನ್‌ಪುರದಲ್ಲಿ 11 ವರ್ಷದ ಬಾಲಕಿಯ ವಿವಾಹವನ್ನು 40 ವರ್ಷದ ವ್ಯಕ್ತಿಯೊಂದಿಗೆ ನಿಶ್ಚಯಿಸಲಾಗಿತ್ತು. ಇದನ್ನೂ ಪೋಲೀಸರು ತಡೆದಿದ್ದರು.

Leave A Reply

Your email address will not be published.