Darshan Thoogudeepa: ದೊಡ್ಮನೆ ಡಾ.ರಾಜ್‌ಕುಮಾರ್‌ ಕುಟುಂಬದ ಮೇಲೆ ದರ್ಶನ್‌ ಗೆ ಇದೇ ಕಾರಣಕ್ಕೆ ವೈರತ್ವವಂತೆ! ಸುಳ್ಳು ಮತ್ತು ಸ್ವಾರ್ಥ ದರ್ಶನ್ ಹುಟ್ಟುಗುಣವಾಗಿತ್ತಾ!?

Darshan Thoogudeepa: ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ದರ್ಶನ್‌ ವೈಯಕ್ತಿಕ ವರ್ತನೆ ಬಗ್ಗೆ ಹಲವರಿಗೆ ಅಸಮಾಧಾನವಿತ್ತು.

ಆದರೆ ಹೊರಗಡೆ ಬಿದ್ದಿರಲಿಲ್ಲ. ಇದೀಗ ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan Thoogudeepa) ಬಂಧನವಾಗಿರುವ ಸಂದರ್ಭದಲ್ಲಿ ದರ್ಶನ್ ಬಗೆಗಿನ ಶಾಕಿಂಗ್ ಮಾಹಿತಿಗಳು ಒಂದೊಂದೇ ಬೆಳಕಿಗೆ ಬರುತ್ತಿದೆ.

ದರ್ಶನ್ ಎಲ್ಲೇ ಹೋದರು ತನ್ನನು ತಾನು “ಸದಾ ನಾನು ಲೈಟ್‌ ಬಾಯ್‌ ಆಗಿದ್ದವನು ಹೀರೋ ಆದೆ” ಎನ್ನುವ ಪಾಸಿಟಿವ್ ಮತ್ತು ಹಾರ್ಡ್ ವರ್ಕ್ ವೈಬ್ ಹುಟ್ಟಿಸಲು ಈ ರೀತಿ ಮಾತುಗಳನ್ನು ಹೇಳುತ್ತಿದ್ದರು. ಆದ್ರೆ ದರ್ಶನ್‌ ಲೈಟ್ ಬಾಯ್ ಆಗಿ ಕೆಲಸ ಮಾಡಿಲ್ಲ ಎನ್ನುವ ವಿಚಾರವನ್ನು ನಿರ್ದೇಶಕರೊಬ್ಬರು ಬಹಿರಂಗ ಪಡಿಸಿದ್ದಾರೆ.

“ನಾನು “ಜನುಮದ ಜೋಡಿ” ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ, ದರ್ಶನ್ ಅದೇ ಸಿನಿಮಾದಲ್ಲಿ ಛಾಯಾಗ್ರಹಕರಾದ ಬಿ.ಸಿ ಗೌರಿಶಂಕರ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇದಕ್ಕೆ ಅರ್ಥ ದರ್ಶನ್  ಕ್ಯಾಮೆರಾಮೆನ್ ಅಸ್ಟೆಂಟ್ ಆಗಿದ್ದರು. ಒಟ್ಟಿನಲ್ಲಿ ಕ್ಯಾಮೆರಾಮೆನ್ ಅಸ್ಟೆಂಟ್ ಮತ್ತು ಲೈಟ್ ಬಾಯ್ಸ್ ಗೆ ವ್ಯತ್ಯಾಸ ಇದೆ.

ಇನ್ನು ದರ್ಶನ್ ಬಗ್ಗೆ ಪಾಸಿಟಿವ್ ಆಗಿ ಕಾಳಜಿ ತೋರಿಸಿದ್ರು ಸಹ ಅವರು ಅದನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ತನ್ನ ಸ್ವಾರ್ಥ ಆಲೋಚನೆಯಲ್ಲೇ ಬದುಕುತ್ತಿದ್ದರು. ಕಾಳಜಿ ವಹಿಸುವ ವ್ಯಕ್ತಿಗಳನ್ನೇ ದ್ವೇಷ ಮಾಡಲು ಮುಂದಾಗುತ್ತಾರೆ. ಉದಾಹರಣೆ ಅವರ ಪತಿಯನ್ನು ಈಗಾಗಲೇ ಥಲಿಸಿ ಜೈಲಿಗೆ ಹೋಗಿ ಬಂದವರು.

ಇನ್ನೊಂದು ಉದಾಹರಣೆ “ಜನುಮದ ಜೋಡಿ” ಸಿನಿಮಾ ಬಿಡುಗಡೆಯಾಗಿ ಸೂಪರ್-ಡೂಪರ್ ಆಗಿರುವ ಆ ಸಮಯಕ್ಕೆ ಭಾರತಕ್ಕೆ Zimmi Zib” ಅನ್ನುವ ಒಂದು ಕ್ಯಾಮೆರಾ ಯಂತ್ರ ಹೊಸದಾಗಿ ಬಂದಿತ್ತು ಅದನ್ನು ವಜ್ರೇಶ್ವರಿಗೆ ತರಿಸಬೇಕೆನ್ನುವುದು ಅಪ್ಪು ಅವರ ಆಸೆಯಾಗಿತ್ತು. ಪಾರ್ವತಮ್ಮ ಅವರು ಆ ಕ್ಯಾಮೆರಾ ತರಿಸುವ ನಿರ್ಧಾರ ಮಾಡಿ ಅದರ ಬಗ್ಗೆ ಮಾಹಿತಿ ಪಡೆದರು.

ಆ Zimmi ಯನ್ನು ಮಾಮೂಲಿ ಕ್ಯಾಮೆರಾ ಮನ್‌ಗಳು ಆಪರೇಟ್ ಮಾಡಲು ಸಾಧ್ಯವಿಲ್ಲ ಅದಕ್ಕೇ ಸಪರೇಟಾಗಿ ಟ್ರೈನಿಂಗ್ ಆಗಬೇಕು ಅದಕ್ಕಾಗಿ ಬಾಂಬೆಯಲ್ಲಿ ಕೆಲವು ತಿಂಗಳು ಟ್ರೈನಿಂಗ್ ಕೊಡಲಾಗುವುದು ಅನ್ನುವ ವಿಷಯ ತಿಳಿದ ಅಮ್ಮ, ಕ್ಯಾಮೆರಾ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಅವರನ್ನು ಕರೆಸಿ ಜಿಮ್ಮಿ ವಿಷಯ ಹೇಳಿ, “ಬಾಂಬೆಗೆ ಕಳುಹಿಸಿಕೊಡುತ್ತೇನೆ, ತರಬೇತಿ ಪಡೆದು ಬಂದು ಆ ಜಿಮ್ಮಿಯನ್ನು ನೀನೆ ನೋಡಿಕೋ” ಅಂತ ಹೇಳಿದರು. ಅಮ್ಮ ಅವರ ಉದ್ದೇಶ ದರ್ಶನ್ ಅವರಿಗೆ ಒಂದು ಉದ್ಯೋಗದ ಆಸರೆ ಆಗಲಿ ಅನ್ನುವುದಾಗಿತ್ತೆ ವಿನಃ ಮತ್ತೇನೂ ಅಲ್ಲ.

ಆದರೆ ನಾನು ಪುನೀತ್ಗೆ ಪ್ರತಿಸ್ಪರ್ಧಿಯಾಗುತ್ತೇನೆ ಎಂದು ಪಾರ್ವತಮ್ಮ ಹೀಗೆ ಪ್ಲಾನ್ ಮಾಡಿದ್ದಾರೆ ಎಂದು ದರ್ಶನ್ ಅಂದುಕೊಂಡಿದ್ದರು. ಇದಕ್ಕಾಗಿ ನಟ ದರ್ಶನ್‌ ಚಿತ್ರರಂಗದ ದೊಡ್ಮನೆ ಡಾ.ರಾಜ್‌ಕುಮಾರ್‌ ಕುಟುಂಬದ ಮೇಲೆ ಅಸಮಾಧಾನಗೊಂಡಿದ್ದರು.  ಎಂದು ನಿರ್ದೇಶಕರು ಒಬ್ವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

 

Leave A Reply

Your email address will not be published.