Darshan Manager: ನಾಪತ್ತೆಯಾದ ದರ್ಶನ್​ ಮಾಜಿ ಮ್ಯಾನೇಜರ್​ ಬರೆದ ಪತ್ರ ವೈರಲ್​ !! ಏನಿದೆ ಇದರಲ್ಲಿ?

Darshan Manager: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ನಡುವೆ ದರ್ಶನ್ ಅವರ ಮಾಜಿ ಮ್ಯಾನೇಜರ್‌(Darshan Manager)ಮಲ್ಲಿಕಾರ್ಜುನ್ ವಿಚಾರ ಮುನ್ನಲೆಗೆ ಬಂದಿದೆ. ಅವರು 2018ರಿಂದ ಕಾಣೆಯಾಗಿದ್ದು, ಈವರೆಗೂ ಅವರು ಪತ್ತೆಯಾಗಿಲ್ಲ. ಈ ನಿಗೂಡವಾದ ನಾಪತ್ತೆ ಹೇಗಾಯಿತು ? ದರ್ಶನ್ ಅವರದ್ದೇ ಕಿತಾಪತಿಯೇ? ಎಂಬ ಚರ್ಚೆಗಳು ಶುರುವಾಗಿವೆ. ಈ ಬೆನ್ನಲ್ಲೇ ಮ್ಯಾನೇಜರ್ ಮಲ್ಲಿಕಾರ್ಜುನ್(Mallikharjun) ಬರೆದ ಪತ್ರವೊಂದು(Letter)  ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

 

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ(Renukaswamy Murder Case) ಬಳಿಕ ಆರೋಪಿ ದರ್ಶನ್ ಅವರ ಒಂದೊಂದೇ ಕರಾಳ ಮುಖಗಳು ಹೊರಬರುತ್ತಿವೆ. ಅದರೊಂದಿಗೆ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವಿಚಾರ ಕೂಡ. ಮ್ಯಾನೇಜರ್‌ ಮಲ್ಲಿಕಾರ್ಜುನ್ 2018ರಿಂದ ಕಾಣೆಯಾಗಿದ್ದು, ಈವರೆಗೂ ಅವರು ಪತ್ತೆಯಾಗಿಲ್ಲ. 2018ರಿಂದಲೂ ನಾಪತ್ತೆಯಾಗಿರುವ ಈ ಮ್ಯಾನೇಜರ್​ಗೂ ದರ್ಶನ್​ ಮತ್ತು ಅವರ ಗ್ಯಾಂಗ್​ಗೂ ಸಂಬಂಧವಿದೆಯೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ಇದಾಗಲೇ ತನಿಖೆ ಶುರುವಿಟ್ಟುಕೊಂಡಿದ್ದಾರೆ. ಈ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ‘’ರೇಣುಕಾಸ್ವಾಮಿ ತರಹ ಅವರೂ ಮೋರಿ ಪಾಲಾದ್ರಾ?’’ – ಇದು ಸೋಷಿಯಲ್‌ ಮೀಡಿಯಾದಲ್ಲಿ ಜನ ಕೇಳ್ತಿರುವ ಪ್ರಶ್ನೆ. ಈ ಮಧ್ಯೆ ಭಾವನಾ ಬೆಳಗೆರೆ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಈ ಬೆನ್ನಲ್ಲೇ ಈ ಹಿಂದೆ ಮಲ್ಲಿಕಾರ್ಜುನ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹಲ್​ಚಲ್​ ಸೃಷ್ಟಿಸಿತ್ತಿದೆ.

 

ಏನಿದೆ ಪತ್ರದಲ್ಲಿ?

ಪ್ರೀತಿಯ ತೇಜಸ್ವಿನಿಗೆ , ಮೊದಲನೆಯದಾಗಿ ದಯವಿಟ್ಟು ನನ್ನನ್ನು ಕ್ಷಮಿಸು.  ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್​ ಬಂದು ಸಾಲ ತೀರಿಸಿ ನನಗಂಟಿರೋ ಕಳಂಕನಾ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯೆತ್ತಿ ಎಲ್ಲರ ಮುಂದೆ ಜೀವನ ನಡೆಸುಬೇಕೆಂದುಕೊಂಡಿದ್ದೇನೆ. ಅಲ್ಲಿಯವರೆಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಈ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ . ದಯವಿಟ್ಟು ನನ್ನನ್ನು ಕ್ಷಮಿಸಿ. ಇಂತಿ ನಿಮ್ಮ ಪ್ರೀತಿಯ ಮಲ್ಲಿಕಾರ್ಜುನ ಎಂದು ಬರೆದು ಸಹಿ ಹಾಕಲಾಗಿದೆ.

 

ಅಷ್ಟಕ್ಕೂ ಈ ಪತ್ರ ಖುದ್ದು ಮಲ್ಲಿಕಾರ್ಜುನ ಅವರು ಬರೆದದ್ದೇ ಅಲ್ಲವೇ ಗೊತ್ತಿಲ್ಲ. ತನಿಖೆಯ ಬಳಿಕ ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ.

ಯಾರು ಈ ಮಲ್ಲಿಕಾರ್ಜುನ್?

ದಶಕದ ಹಿಂದೆ ದರ್ಶನ್‌ಗೆ ಮಲ್ಲಿಕಾರ್ಜುನ್ ಅಲಿಯಾಸ್‌ ಮಲ್ಲಿ ಎಂಬುವರು ಮ್ಯಾನೇಜರ್ ಆಗಿದ್ದರು. ದರ್ಶನ್‌ ಡೇಟ್ಸ್‌ ಅನ್ನು ಮಲ್ಲಿಕಾರ್ಜುನ್‌ ಮ್ಯಾನೇಜ್ ಮಾಡುತ್ತಿದ್ದರು. ದರ್ಶನ್‌ಗೆ ಸಂಬಂಧಿಸಿದ ಕೆಲ ವ್ಯವಹಾರಗಳನ್ನೂ ಮಲ್ಲಿಕಾರ್ಜುನ್ ನೋಡಿಕೊಳ್ಳುತ್ತಿದ್ದರು. ಕೆಲವು ಸಿನಿಮಾಗಳನ್ನೂ ಮಲ್ಲಿಕಾರ್ಜುನ್ ವಿತರಣೆ ಮಾಡಿದ್ದರು.

ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು.  ಈ ಬಗ್ಗೆ ಅರ್ಜುನ್​ ಸರ್ಜಾ ದೂರು ನೀಡಿ, ತಮಗೆ ಒಂದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದಿದ್ದರು. ಈ ಘಟನೆ ಬಳಿಕ ದರ್ಶನ್​ ಅವರು  ಮಲ್ಲಿಕಾರ್ಜುನ ಮೇಲೆ ಗರಂ ಆಗಿದ್ದರು ಎನ್ನಲಾಗಿದೆ. ಇಂತಿಪ್ಪ ಮಲ್ಲಿಕಾರ್ಜುನ್‌ 2018ರಿಂದ ಏಕಾಏಕಿ ನಾಪತ್ತೆಯಾಗಿಬಿಟ್ಟರು.

Leave A Reply

Your email address will not be published.