Mumbai: ಬಕ್ರೀದ್ ಗೆ ಬಲಿ ಕೊಡಲು ತಂದ ಕುರಿಯ ಮೇಲೆ ರಾಮನ ಹೆಸರು – ಅಂಗಡಿ ಮಾಲೀಕನ ಬಂಧನ !!

Mumbai: ನಾಳೆ ಜಗತ್ತಿನೆಲ್ಲೆಡೆ ಮುಸ್ಲಿಂ(Musli ಬಾಂಧವರು ಬಕ್ರೀದ್(Bakrid) ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಬಕ್ರೀದ್ ಹಬ್ಬದಂದು ಪ್ರಾಣಿಗಳನ್ನು ಬಲಿ ಕೊಡುವ ಸಂಪ್ರದಾಯವಿದೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿ ಕೆಲವು ಕಿಡಿಗೇಡಿಗಳು ಕೋಮು, ದ್ವೇಷವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ.

ಬಕ್ರೀದ್ ವೇಳೆ ಪ್ರಾಣಿಗಳನ್ನು ಬಲಿಕೊಡಲಾಗುವುದು. ಕುರುಬಾನಿ ಎಂದು ಕರೆಯಲ್ಪಡುವ ಈ ಸಂಪ್ರದಾಯವನ್ನು ಬಹುತೇಕ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಹೀಗೆ ಬಕ್ರೀದ್‌ಗೆ ಬಲಿ ಕೊಡಲು ತಂದಿದ್ದ ಮೇಕೆಯ(Sheep) ದೇಹದ ಮೇಲೆ ರಾಮ್(Rama) ಎಂದು ಬರೆಯುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಣಕಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಹೌದು, ಮುಂಬೈನಲ್ಲಿ ಬಕ್ರೀದ್‌ಗೆ ಬಲಿ ನೀಡಲು ತಂದಿದ್ದ ಬಿಳಿ ಬಣ್ಣದ ಮೇಕೆಯ ಮೈ ಮೇಲೆ ರಾಮ್ ಎಂದು ಹಿಂದಿ ಭಾಷೆಯಲ್ಲಿ ಬರೆಯಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೇಗ ವೈರಲ್ ಆಗಿದೆ. ಆ ಕೂಡಲೇ ಸ್ಥಳಕ್ಕೆ ಹಿಂದೂ ಸಂಘಟನೆಯವರು ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮ ಹಿಂದೂಗಳ ಆರಾಧ್ಯ ದೈವ ಆಗಿದ್ದು, ಬಲಿಕೊಡಲು ತಂದ ಮೇಕೆಯ ಮೇಲೆ ರಾಮನ ನಾಮ ನೋಡಿದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಈ ಮೇಕೆಯನ್ನು ಮಾರಾಟ ಮಾಡಿದ ಮಾಂಸದಂಗಡಿಯ ಮಾಲೀಕನ್ನು ಬಂಧಿಸಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.