Shobha Karandlaje: ಯಡಿಯೂರಪ್ಪ ವಿರುದ್ಧ ಫೋಕ್ಸೋ ಪ್ರಕರಣ- ಪರಮಾಪ್ತೆ ಶೋಭಕ್ಕ ಹೇಳಿದ್ದಿಷ್ಟು !!

Share the Article

Shobha Karandlaje: ಕರ್ನಾಟಕದ ಮಾಜಿ ಸಿಎಂ, ಬಿಜೆಪಿಯ ವರಿಷ್ಠ ಬಿ ಎಸ್ ಯಡಿಯೂರಪ್ಪರು (B S Yadiyurappa) ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಫೋಕ್ಸೋ ಪ್ರಕರಣ (Pocso Case) ದಾಖಲಿಸಲಾಗಿತ್ತು. ಇದೀಗ ಈ ಬಗ್ಗೆ ಯಡಿಯೂರಪ್ಪರ ಪರಮಾಪ್ತೆ ಶೋಭಾ ಕರಂದ್ಲಾಜೆ(Shobha Karandlaje) ಅವರು ಪ್ರತಿಕ್ರಿಯೆ ನೀಡಿದ್ದಾರೆ.

Nikitha Thukral: ದರ್ಶನ್ ತಪ್ಪಿದ್ದರೂ ಕನ್ನಡದಿಂದ ಬ್ಯಾನ್ ಆಗಿದ್ದು ಮಾತ್ರ ನಿಕಿತಾ !! ಅಷ್ಟಕ್ಕೂ ಅಂದು ಆಗಿದ್ದೇನು?

ತಮ್ಮ ರಾಜಕೀಯ ಗುರು ಬಗ್ಗೆ ಬಂದಿರುವ ಆಪಾದನೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ‘ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ಬಗ್ಗೆ ಮಾಹಿತಿ ಗೊತ್ತಿಲ್ಲ. ಮಾಧ್ಯಮಗಳ ಮೂಲಕ ನೋಡಿದೆ. ಯಡಿಯೂರಪ್ಪ ಅವರ ದೀರ್ಘ ಕಾಲದ ರಾಜಕಾರಣ ನೋಡಿದ್ದೇನೆ. ಇಂತಹ ಆರೋಪಗಳು ಯಾವತ್ತೂ ಕೇಳಿಬಂದಿರಲಿಲ್ಲ. ಹಿಂದೆ ಎಂದೂ ಬರದಿದ್ದ ಪ್ರಕರಣಗಳು ಈಗ ಯಾಕೆ ಬರ್ತಿವೆ? ಇದರಲ್ಲಿ ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ಪಾತ್ರ ಇದೆಯಾ? ಇದರ ಬಗ್ಗೆ ಗೊತ್ತಿಲ್ಲ’ ಎಂದು ಹೇಳಿದರು.

ಅಲ್ಲದೆ ಹಿರಿಯ ನಾಯಕ ಯಡಿಯೂರಪ್ಪ ವಿರುದ್ಧ ಈ ಆರೋಪ ಯಾಕೆ ಬಂತು ಅಂತ ಜನ ಗಮನಿಸ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸ್ ಹಾಕುವಂತಹ ಪ್ರಕರಣಗಳನ್ನು ಕೂಡಾ ಜನ ಗಮನಿಸ್ತಿದ್ದಾರೆ. ಏನೇನು ಆಗುತ್ತದೆ ಕಾದು ನೋಡೋಣ ಎಂದರು.

ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್‌ ಆದೇಶ:
ಬಿಎಸ್‌ವೈ (82 ವರ್ಷ) ಅವರ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಯು ನಿನ್ನೆ (ಜೂ.14) ರಂದು ನಡೆದಿದ್ದು, ಪೋಕ್ಸೋ ಕೇಸ್‌ನಲ್ಲಿ ಬಿಎಸ್‌ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್‌ ಆದೇಶ ನೀಡಿದೆ. ಸೋಮವಾರ ವಿಚಾರಣೆಗೆ ಹಾಜರಾಗಲು ಬಿಎಸ್‌ವೈಗೆ ಹೈಕೋರ್ಟ್‌ ಆದೇಶಿಸಿ ಮಧ್ಯಂತರ ತೀರ್ಪನ್ನು ನೀಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಅಂದರ್‌

Leave A Reply

Your email address will not be published.