Saptami Gowda: ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸಲು ಮುಂದಾದ ನಟಿ ಸಪ್ತಮಿ ಗೌಡ

Share the Article

Saptami Gowda: ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌  ಪತ್ನಿ ಶ್ರೀದೇವಿ  ಅವರ ಮೇಲೆ ನಟಿ ಸಪ್ತಮಿ ಗೌಡ ಕುಟುಂಬಸ್ಥರು ಮಾನಹಾನಿ ಕೇಸು ದಾಖಲಿಸಲು ಮುಂದಾಗಿದ್ದಾರೆ.

ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ ದಯಾನಂದ್‌ ದರ್ಶನ್‌ ಅರೆಸ್ಟ್‌ ಬಗ್ಗೆ ಹೇಳಿದ್ದೇನು?

ಕಾಂತಾರ ಬೆಡಗಿ ಸಪ್ತಮಿ ಗೌಡ ಜೊತೆ ಯುವ ರಾಜ್‌ಕುಮಾರ್‌ ಸಂಬಂಧ ಇದೆ ಎಂದು ಪತ್ನಿ ಶ್ರೀದೇವಿ ಆರೋಪ ಮಾಡಿದ್ದರು. ಹಾಗಾಗಿ ಸಪ್ತಮಿಗೌಡ ಕುಟುಂಬಸ್ಥರು ಮಾನಹಾನಿ ಕೇಸ್‌ ದಾಖಲಿಸಲು ಮುಂದಾಗಿರುವ ಕುರಿತು ವರದಿಯಾಗಿದೆ.

ನಟ ಯುವ ರಾಜ್‌ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್‌ ವಿಷಯ ಇದೀಗ ಜಗಜ್ಜಾಹೀರಾಗಿದ್ದು, ಇಬ್ಬರ ನಡುವಿನ ಆರೋಪ-ಪ್ರತ್ಯಾರೋಪಗಳು ಜಾಸ್ತಿಯಾಗಿದೆ.

ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಅವರು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದು, ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಇನ್ನು ಇತ್ತ ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಶ್ರೀದೇವಿ ಅವರು ಯುವ ರಾಜ್‌ಕುಮಾರ್‌ ಹಾಗೂ ಸಪ್ತಮಿ ಗೌಡ ರೂಮ್‌ನಲ್ಲಿ ಇದ್ದರು ಎಂದು ಉಲ್ಲೇಖ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುವ ಬಗ್ಗೆ ಸಪ್ತಮಿ ಗೌಡ ಕುಟುಂಬದವರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸಪ್ತಮಿ ಗೌಡ ತಂದೆ ಎಸ್‌ಕೆ ಉಮೇಶ್‌ ಖಾಸಗಿ ವಾಹಿನಿಗೆ ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ.

BJP National President: ಯಾರಾಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು?! ಈ ಸಲ ಮಹಿಳೆಯ ಮುಡಿಗೇರುತ್ತಾ ‘ಕಮಲ’?!

Leave A Reply