Darshan Pavithra Gowda: ನಟ ದರ್ಶನ್‌, ಪವಿತ್ರಾ ಸೇರಿ ಎಲ್ಲಾ ಆರೋಪಿಗಳಿಗೆ ಪೊಲೀಸ್‌ ಕಸ್ಟಡಿ; ಕೋರ್ಟ್‌ ಆದೇಶ

Darshan Pavithra Gowda: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ಪೊಲೀಸರ ಅತಿಥಿಯಾಗಿದ್ದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 6 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ.

ಇದೇ ವೇಳೆ ದರ್ಶನ್‌ ಗೆಳತಿ ಎಂದು ಹೇಳಲಾದ ಪವಿತ್ರಾ ಗೌಡ ಅವರನ್ನೂ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ದರ್ಶನ್‌ ಸೇರಿ ಉಳಿದವರನ್ನು 14 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಪೊಲೀಸರ ಮನವಿ ಮೇರೆಗೆ ಆರೋಪಿಗಳನ್ನು 6 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ನೀಡಿದೆ.

NEET ವಿವಾದ ಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ ಎಂದ Supreme Court; ಮರು ಪರೀಕ್ಷೆ ಖಚಿತ ?

ನಟ ದರ್ಶನ್‌ ಅಭಿಮಾನಿಯಾದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಕರೆದುಕೊಂಡು ಹೋಗಿದ್ದು, ಕೊಲೆಯಾದ ಸ್ಥಳ, ಶವ ಎಸೆದ ಜಾಗದಲ್ಲಿ ಮಹಜರು ಮಾಡಬೇಕಿದೆ. ಮೊಬೈಲ್‌ ಡೇಟಾ ಸಂಗ್ರಹ ಮಾಡಬೇಕು. ಆಯುಧ ಜಪ್ತಿ ನಡೆಯಬೇಕಿದೆ. ದರ್ಶನ್‌ ಸೆಲೆಬ್ರಿಟಿ ಆಗಿರುವುದರಿಂದ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಹೆಚ್ಚಿರುವುದರಿಂದ ಪೊಲೀಸರು 14 ದಿನಗಳ ಕಸ್ಟಡಿಗೆ ಮನವಿ ಮಾಡಿದ್ದರು.

ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಇಸಿಜಿ, ಬಿಪಿ, ಶುಗರ್‌ ಇನ್ನಿತರ ಟೆಸ್ಟ್‌ನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆ ಯಾರಲ್ಲೂ ಕಂಡು ಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು, ಎಫ್‌ಎಸ್‌ಎಲ್‌ ತಂಡ ಭೇಟಿ ನೀಡಿ ಕೆಲ ವಸ್ತುಗಲನ್ನು ಸಂಗ್ರಹಿಸಿದೆ. ಹಾಗೂ ವಸ್ತುಗಳನ್ನು ಸೀಜ್‌ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ.

ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2 ಆಗಿದ್ದಾರೆ. ಕೆ.ಪವನ್‌ ಎ3 ಆಗಿದ್ದಾರೆ.

ನಿಮ್ಮನ್ನು ಎಲ್ಲಿ? ಎಷ್ಟು ಗಂಟೆಗೆ ಬಂಧನ ಮಾಡಲಾಯಿತು ಜಡ್ಜ್‌ ಪ್ರಶ್ನೆ ಮಾಡಿದರು. ಮಧ್ಯಾಹ್ನ 3 ಗಂಟೆಗೆ ಎಂದು ಪವಿತ್ರಾ ಗೌಡ ಹೇಳಿದ್ದು, ದರ್ಶನ್‌ ತಮ್ಮನ್ನು ಮಧ್ಯಾಹ್ನ 2.30 ಕ್ಕೆ ಪೊಲೀಸ್‌ ಠಾಣೆಯಲ್ಲಿ ಬಂಧನ ಮಾಡಿದರು ಎಂದು ಹೇಳಿದರು. ಪೊಲೀಸರು ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಕೂಡಾ ಹೇಳಿದರು. ವಕೀಲರನ್ನು ನೇಮಿಸ್ತೀರಾ ಎಂದು ಜಡ್ಜ್‌ ಕೇಳಿದಾಗ ಹೌದು ಎಂದು ಹೇಳಿದ್ದಾರೆ ನಟ ದರ್ಶನ್‌.

ಕೋರ್ಟ್‌ನಲ್ಲಿ ವಾದ ಪ್ರತಿವಾದ ನಡೆದ ಸಂದರ್ಭದಲ್ಲಿ ಪವಿತ್ರಾ ಗೌಡ ಹಾಗೂ ದರ್ಶನ್‌ ಕಣ್ಣೀರಿಟ್ಟಿದ್ದಾರೆ. ಪೊಲೀಸರು ದರ್ಶನ್‌ ಸೇರಿ ಈ ಕೊಲೆ ಪ್ರಕರಣದ ಎಲ್ಲಾ 13 ಆರೋಪಿಗಳನ್ನು ಕೋರ್ಟ್‌ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಮುಂದೆ ಕೈ ಕಟ್ಟಿ ನಿಂತಿದ್ದ ಪವಿತ್ರಾ ಗೌಡ, ದರ್ಶನ್‌ ಇಬ್ಬರೂ ಕಣ್ಣೀರಿಟ್ಟಿದ್ದಾರೆ.

ಅರ್ಜುನ ಸಾವಿನ ಬೆನ್ನಲ್ಲೇ ವಿದ್ಯುತ್‌ ಶಾಕ್‌ಗೆ ಆನೆ ʼಅಶ್ವತ್ಥಾಮʼ ಸಾವು

Leave A Reply

Your email address will not be published.