Yuva Rajkumar Divorce: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಖ್ಯಾತ ನಟಿಯೇ ಕಾರಣ?

ನಟಿಯ ಜೊತೆ ಆಪ್ತತೆ ಸಂಸಾರದಲ್ಲಿ ಬಿರುಕು ತಂದಿತೇ?

Yuva Rajkumar Divorce: ಡಾ.ರಾಜ್‌ಕುಮಾರ್‌ ಮೊಮ್ಮಗ ಯುವ ದಂಪತಿಗಳ ಸಂಸಾರದಲ್ಲಿ ಬಿರುಕು ಮೂಡಿದ್ದು, ತನಗೆ ತನ್ನ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನಕ್ಕೆ ಅರ್ಜಿ ಬೇಕೆಂದು ನಟ ಯುವ ಅವರು ಅರ್ಜಿ ಸಲ್ಲಿಸಿದ್ದಾರೆ.

 

ಅಣ್ಣಾವ್ರ ಕುಟುಂಬದಲ್ಲಿ ಆಗುತ್ತಿರುವ ಮೊದಲ ವಿಚ್ಛೇದನ ಪ್ರಕರಣ ಇದಾಗಿದ್ದು, ಇದು ನಿಜಕ್ಕೂ ವರನಟನನ್ನು ಆರಾಧಿಸುವ ಅಭಿಮಾನಿ ವರ್ಗಕ್ಕೆ ಶಾಕಿಂಗ್‌ ನ್ಯೂಸ್‌ ಆಗಿದೆ.

ಇಲ್ಲಿ ಅಷ್ಟಕ್ಕೂ ಕಾಡು ಪ್ರಶ್ನೆ ಏನೆಂದರೆ ದಂಪತಿಗಳ ಮಧ್ಯೆ ಮನಸ್ತಾಪ ಮೂಡಲು ಕಾರಣವೇನೆಂದು? ಇದೀಗ ವಿಚ್ಛೇದನ ವಿಷಯ ಬಹಿರಂಗ ಆಗುತ್ತಿದ್ದಂತೆ ಗಾಂಧಿನಗರದಲ್ಲಿ ಕೇಳಿ ಬರುವ ಗಾಸಿಪ್‌ ಪ್ರಕಾರ ಪ್ರಸಿದ್ಧ ನಟಿಯ ಜೊತೆ ಯುವ ರಾಜ್‌ಕುಮಾರ್‌ ಆಪ್ತತೆ ಹೆಚ್ಚಿಸಿಕೊಂಡಿದ್ದೇ ದಂಪತಿಗಳ ಕಲಹಕ್ಕೆ ಕಾರಣ ಎನ್ನಲಾಗಿದೆ.

2019 ರಲ್ಲಿ ಮದುವೆಯಾಗಿದ್ದ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ, ಇವರಿಬ್ಬರದ್ದು ಪ್ರೇಮ ವಿವಾಹ. ಆದರೆ ಇತ್ತೀಚೆಗೆ ಎಲ್ಲವೂ ಸರಿ ಇರಲಿಲ್ಲ. ಮನಸ್ತಾಪ ಹೆಚ್ಚಳ ಹೊರಗೆ ಕಾಣಿಸದಿದ್ದರೂ ಆಪ್ತ ವಲಯದಲ್ಲಿ ಈ ಸುದ್ದಿ ಕೇಳಿ ಬರುತ್ತಿತ್ತು. ಕೊನೆಗೂ ಸಂಸಾರದ ಬಿರುಕು ಹೊರಬಿದ್ದಿದೆ.

ಕನ್ನಡದ ಖ್ಯಾತ ನಟಿಯೊಬ್ಬರ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ ನಟ ಯುವ ಎಂದು ಹೇಳಲಾಗಿದ್ದು, ಇದು ಅವರ ಸಂಸಾರದಲ್ಲಿ ಸಮಸ್ಯೆ ಉಂಟು ಮಾಡಲು ಕಾರಣವಾಗಿದೆ ಎನ್ನಲಾಗಿದೆ.

ಶ್ರೀದೇವಿ ಅವರು ವಿಚ್ಛೇದನದ ಕುರಿತು ಇನ್ನೂ ಏನೂ ಪ್ರತಿಕ್ರಿಯೆ ನೀಡಿಲ್ಲ. ಈ ಕುತೂಹಲ ಎಲ್ಲರಲ್ಲೂ ಇದೆ.

Yuvaraj Kumar And Shridevi; ಯುವ ರಾಜ್‌ ಕುಮಾರ್‌-ಶ್ರೀದೇವಿ ದಾಂಪತ್ಯ ಅಂತ್ಯ; ವಿಚ್ಛೇದನಕ್ಕೆ ಅರ್ಜಿ

Leave A Reply

Your email address will not be published.