Vitla: ಹಳೆ ದ್ವೇಷದ ಹಿನ್ನೆಲೆ; ಕೋಳಿಬಾಳ್‌ನಿಂದ ಹಲ್ಲೆಗೆ ಮುಂದಾದ ವ್ಯಕ್ತಿ; ಪ್ರಕರಣ ದಾಖಲು

Share the Article

Vitla: ಹಳೆಯ ದ್ವೇಷದ ಕಾರಣ ಚಿಕ್ಕಪ್ಪನ ಮಗ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಘಟನೆಯೊಂದು ವಿಟ್ಲದಲ್ಲಿ ನಡೆದಿದೆ. ಕೇಪು ಗ್ರಾಮದ ಕೆ.ಗಣೇಶ್‌ ಎಂಬುವವರು ಈ ಕುರಿತು ಆರೋಪಿಸಿ ವಿಟ್ಲ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ತುಟ್ಟಿಭತ್ಯೆ ಹೆಚ್ಚಳದ ಬೆನ್ನಲ್ಲೇ ಗ್ರಾಚ್ಯುಟಿ ಹೆಚ್ಚಳ! 

ಕೇಪು ಗ್ರಾಮದ ಬಡೆಕೋಡಿ ಎಂಬಲ್ಲಿ ಜೂ.3 ರಂದು ಮನೆಯ ಬಳಿ ಬಂದ ಚಿಕ್ಕಪ್ಪನ ಮಗ ಚಂದ್ರ ಯಾನೆ ಚಂದ್ರಹಾಸ ಯಾವುದೋ ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದಿದ್ದು, ಕೊಲ್ಲುವ ಉದ್ದೇಶದಿಂದ ಕೋಳಿ ಬಾಳ್‌ನಿಂದ ಹಲ್ಲೆ ಮಾಡಿರುತ್ತಾನೆ. ಈ ಸಂದರ್ಭದಲ್ಲಿ ಪತ್ನಿ, ತಾಯಿ ಬರುವುದನ್ನು ಗಮನಿಸಿ ಚಂದ್ರಹಾಸ, ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ ಎMದು ಗಣೇಶ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: iPhone ಕೊಂಡುಕೊಳ್ಳುವವರಿಗೆ ಗುಡ್ ನ್ಯೂಸ್!ಈ ಆಫರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ

Leave A Reply