UP: ಇಂಡಿಯಾ ಕೂಟಕ್ಕೆ ಸಿಹಿ ಸುದ್ದಿ – ಉತ್ತರ ಪ್ರದೇಶದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ !!

Share the Article

UP: ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಪ್ರಾರಂಭದಲ್ಲಿಯೇ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಅಂತೆಯೇ ಬಿಜೆಪಿ(BJP) ಭದ್ರಕೋಟೆ ಆಗಿರುವ ಉತ್ತರ ಪ್ರದೇಶದಲ್ಲಿ ಇಂಡಿಯಾ ಕೂಟ(INDIA) 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನುಡೆ ಸಾಧಿಸಿದೆ.

ಉತ್ತರ ಪ್ರದೇಶ(Uttar Pradesh) ದೇಶದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ. ಈ ರಾಜ್ಯದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಅದು ದೇಶದ ಅಧಿಕಾರ ಹಿಡಿಯುತ್ತದೆ ಎಂಬ ಮಾತಿದೆ. ಅಂತೆಯೇ ಇತ್ತೀಚಿನ ಕೆಲವು ಅವಧಿಯಲ್ಲಿ ಇದು ಬಿಜೆಪಿ ಭದ್ರಕೋಟೆ ಆಗಿ ಮಾರ್ಪಟ್ಟತ್ತು. ಸುಮಾರು 70ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಪಾಲಾಗಿತ್ತು. ಆದರೀಗ ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿ ಕೇವಲ 50ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಂಡಿಯಾ ಕೂಟ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಭಾರಿಸಿದೆ.

ಸದ್ಯ ಉತ್ತರ ಪ್ರದೇಶದ ಮತ ಎಣಿಕೆಯಲ್ಲಿ ಕಂಡು ಬಂದ ಸದ್ಯದ ಮುನ್ನಡೆ ಇಂಡಿಯಾ ಕೂಟಕ್ಕೆ ದೊಡ್ಡ ಶುಭ ಸುದ್ದಿ ಆಗಲಿದೆ. ಯಾಕೆಂದರೆ ಬಿಜೆಪಿ ಮಣಿಸುವಲ್ಲಿ ಇದು ತುಂಬಾ ದೊಡ್ಡ ಸಂಖ್ಯೆ ಆಗಿಯೂ ಪರಿಣಮಿಸಬಹುದು. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

Leave A Reply

Your email address will not be published.