Satta Bazar: ಕೊನೆಗೂ ನಿಜವಾಯ್ತು ಸಟ್ಟಾ ಬಜಾರ್ ಫಲಿತಾಂಶ- ಬಿಜೆಪಿ ಬಗ್ಗೆ ನುಡಿದ ಭವಿಷ್ಯ ಏನಾಗಿತ್ತು ?!

Satta Bazar: ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದ, ಈಗಾಗಲೇ ಗೆದ್ದೇ ತೀರಿದ್ದೇನೆ ಎಂದು ಬೀಗುತ್ತಿದ್ದ, 400 ಸೀಟುಗಳು ತನ್ನದೆಂದು ಸಾರಿ ಹೇಳುತ್ತಿದ್ದ ಬಿಜೆಪಿ(BJP)ಗೆ ಕನಸಿಗೆ ದೊಡ್ಡ ಏಟು ಬಿದ್ದಿದೆ. 400 ಅಲ್ಲ 300 ಸೀಟ್ ಗೆಲ್ಲಲೂ NDA ಹೆಣಗಾಡುತ್ತಿದೆ. ಈ ನಡುವೆ ಸಟ್ಟಾ ಬಜಾರ್ ಫಲಿತಾಂಶ ನಿಜವಾಯ್ತು ಅನ್ನೋ ಮಾತೂ ಕೇಳಿಬರುತ್ತಿದೆ.

ಹೌದು, ದೇಶದ ಹಲವು ವಿದ್ಯಾಮಾನಗಳ ಕುರಿತು ಭವಿಷ್ಯ ನುಡಿಯವ ಸಟ್ಟಾ ಬಜಾರ್(Satta Bazar) ಹೊಸ ಭವಿಷ್ಯ ಕೆಲ ದಿನಗಳ ಹಿಂದೆಯೇ ಬಿಜೆಪಿಗೆ ತಣ್ಣೀರೆರಚಿತ್ತು. ಸಟ್ಟಾ ಬಜಾರ್ ಭವಿಷ್ಯ ಕಂಡು ಬಿಜೆಪಿ ಕೂಡ ಕಂಗಾಲಾಗಿ ಹೋಗಿತ್ತು. ಅದೇನೆಂದರೆ ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿತ್ತು. ಅಂತೆಯೇ ಇದೀಗ ಬಿಜೆಪಿ 290 ಗಡಿಯಲ್ಲಿ ಹಾವು ಏಣಿ ಆಟ ಆಡುತ್ತಿದೆ.

ಬಿಜೆಪಿ ಕುರಿತ ನುಡಿದ ಭವಿಷ್ಯವೇನು?
ಚುನಾವಣೆಗೂ ಮುನ್ನ ಬಿಜೆಪಿಗೆ 315 ಸೀಟ್‌ಗಳ ಅಂದಾಜು ನೀಡಿದ ಸಟ್ಟಾ ಬಜಾರ್‌, 6ನೇ ಹಂತದ ಚುನಾವಣೆ ಮುಗಿದ ಬಳಿಕ ಬಿಜೆಪಿ 290 ಸೀಟ್‌ ಗೆಲ್ಲಬಹುದು ಎಂದು ಅಂದಾಜು ಮಾಡಿತ್ತು. ಹಂತದಿಂದ ಹಂತಕ್ಕೆ ಬಿಜೆಪಿ ಗೆಲುವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಹೇಳಿತ್ತು. ಸಟ್ಟಾ ಬಜಾರ್ ನಿಂದ ಹೊರ ಬಿದ್ದ ಭವಿಷ್ಯಗಳು ಹೆಚ್ಚು ನಿಖರವಾಗಿಯೇ ಇದ್ದು ನಿಜ ಕೂಡ ಆಗಿವೆ. ಸಟ್ಟಾ ಬಜಾರ್ ಭವಿಷ್ಯ ನುಡಿದಂತೆ ಆಗಿದೆ ಎನ್ನಲಾಗಿದೆ.

Leave A Reply

Your email address will not be published.