Curry leaves Benefits: ಕರಿಬೇವು ಎಲೆಯನ್ನು ಈ ರೀತಿ ಸೇವಿಸಿ ನೋಡಿ! ನಿಮ್ಮ ದೇಹದ ಹತ್ತು ಹಲವು ಸಮಸ್ಯೆ ನಿವಾರಣೆ ಆಗಲಿದೆ!

Curry leaves Benefits: ಕರಿಬೇವಿನ ಎಲೆಗಳು (Curry Leaves), ಅಡುಗೆಯಲ್ಲಿ ಪರಿಮಳಕ್ಕೆ (Aroma) ಹೆಸರುವಾಸಿ. ಜೊತೆಗೆ ಕರಿಬೇವಿನ ಪ್ರಯೋಜನಗಳ ಬಗ್ಗೆ ನೀವು ತಿಳಿದರೆ ಹಸಿಯಾಗಿಯೇ ಸೇವಿಸುತ್ತೀರಿ. ಹೌದು, ನಿಮಗೆ ಕರಿಬೇವಿನ ಎಲೆಗಳನ್ನು ತಿನ್ನುವ ಅಭ್ಯಾಸ ಇಲ್ಲ ಅಂದರೆ ಕೂಡಲೇ ಅಭ್ಯಾಸ ಮಾಡಿಕೊಳ್ಳಿ.

ಹೌದು, ಕರಿಬೇವು ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ಕರಿಬೇವು ಉತ್ತಮವಾಗಿ (Curry leaves Benefits) ಕೆಲಸ ಮಾಡುತ್ತದೆ. ಮುಖ್ಯವಾಗಿ ಕೊಲೆಸ್ಟ್ರಾಲ್ ಕರಗಿಸಲು ಇದು ಸಹಕಾರಿಯಾಗಿದೆ. ಬೊಜ್ಜು ತುಂಬಿರುವವರು ಪ್ರತಿನಿತ್ಯ ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್‌ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳಲ್ಲಿನ ಕೊಬ್ಬಿನ ಪ್ರಮಾಣ ಕರಗುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ದ್ರಾವಿಡರ ನಾಡಿನಲ್ಲಿ ಕಮಲೋತ್ಪತ್ತಿ; ಬಿಜೆಪಿಯಿಂದ ಐತಿಹಾಸಿಕ ಸಾಧನೆ!

ಮುಖ್ಯವಾಗಿ ಇಂದಿನ ಆಧುನಿಕ ಜಗತ್ತಿನಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಯು ಅನೇಕರಲ್ಲಿ ಹೆಚ್ಚಾಗಿದೆ. ಕೊಲೆಸ್ಟ್ರಾಲ್‌ ಅನ್ನು ಅನೇಕ ಔಷಧಿಗಳಿಂದ ನಿಯಂತ್ರಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ ನೀವು ಕರಿಬೇವಿನ ಎಲೆಗಳನ್ನು ಅವಲಂಬಿಸಬಹುದು. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್‌ ಕರಗುತ್ತದೆ.

ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಹೇರಳವಾಗಿದೆ. ಕಣ್ಣುಗಳನ್ನು ಆರೋಗ್ಯವಾಗಿ ಇಡಲು ಈ ವಿಟಮಿನ್ ತುಂಬಾ ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ದೃಷ್ಟಿ ಸುಧಾರಿಸುತ್ತದೆ. ವಿವಿಧ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.

ಇನ್ನು ಕರಿಬೇವಿನ ಎಲೆಗಳು ಕೂದಲಿಗೆ ತುಂಬಾ ಒಳ್ಳೆಯದು. ಕೂದಲು ಉದುರುವ ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ.

ಜೊತೆಗೆ ಲಿವರ್ ಅನ್ನು ಸುಸ್ಥಿತಿಯಲ್ಲಿಡಲು ಕರಿಬೇವಿನ ಎಲೆಗಳನ್ನು ಸೇರಿಸಬೇಕು. ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಹಾನಿಯನ್ನು ತಡೆಯುತ್ತದೆ. ಇದಲ್ಲದೆ, ಕರಿಬೇವು ಯಕೃತ್ತನ್ನು ಒತ್ತಡದಿಂದ ರಕ್ಷಿಸುತ್ತದೆ.

ಕರಿಬೇವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪರಿಣಾಮವಾಗಿ, ದೇಹವು ವಿವಿಧ ರೋಗಗಳಿಂದ ರಕ್ಷಿಸಲ್ಪಡುತ್ತದೆ. ಪ್ರತಿದಿನ ಕರಿಬೇವಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯವೂ ಸುಧಾರಿಸುತ್ತದೆ. ಹೊಟ್ಟೆಯಲ್ಲಿನ ಉರಿಯೂತದಿಂದ ಉಪಶಮನವನ್ನು ಪಡೆಯಬಹುದು. ರಕ್ತಹೀನತೆಯ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಜೊತೆಗೆ ಮಹಿಳೆಯರಿಗೆ ರಕ್ತಹೀನತೆಯ ಸಮಸ್ಯೆಗಳು ದೂರವಾಗುತ್ತವೆ. ಮುಟ್ಟಿನ ಸಮಯದಲ್ಲಿ ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಕೇರಳಕ್ಕೆ ಬಿಜೆಪಿ ಗ್ರಾಂಡ್ ಎಂಟ್ರಿ; ಕಾಂಗ್ರೆಸ್ ನೇತೃತ್ವದ ಇಂಡಿಯ ಬಣಕ್ಕೆ 15-18 ಸ್ಥಾನ

Leave A Reply

Your email address will not be published.