Madhu Bangarappa: ಹಳೆಯ ಕತ್ತರಿಗೆ ಹೊಳಪಿನ ಸಾಣೆ ಕೊಡಿಸಿ ಶಿಕ್ಷಣ ಸಚಿವರ ಹೇರ್ ಸ್ಟೈಲ್ ಬದಲಿಸಲು ಸವಿತ ಸಮಾಜ ರೆಡಿ, ಬಿಜೆಪಿಯಿಂದ ದೇಣಿಗೆ ಸಂಗ್ರಹ ಬೇರೆ !
Madhu Bangarappa: ಚಿತ್ರದುರ್ಗಕ್ಕೆ ಬರುವ ಮಧು ಬಂಗಾರಪ್ಪ ಅವರು ಕಟಿಂಗ್ ಮಾಡಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು, ತಲೆ ಬಾಚಿಕೊಂಡು ಚಿತ್ರದುರ್ಗಕ್ಕೆ ಬರಲಿ ಎಂದು ಬಿಜೆಪಿ ರಾಜ್ಯದ್ಯಕ್ಷರ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ಕಲಬುರಗಿ ಯಲ್ಲಿ ಉತ್ತರ ನೀಡಿದ್ದು ಪುರುಸೊತ್ತಿದ್ದರೆ ನನ್ನ ಕಟ್ಟಿಂಗ್ ಮಾಡಲಿ ಎಂದಿದ್ದ ಹೇಳಿಕೆ ಬೆನ್ನಲ್ಲೆ ಸವಿತ ಸಮಾಜ ತನ್ನ ಕತ್ತರಿಗಳಿಗೆ ಸಾಣೆ ಹಾಕಿ ನಿಂತಿದೆ. ಶಿಕ್ಷಣ ಸಚಿವರ ಹೇಳಿಕೆಗೆ ತೀವೃ ವಿರೋಧ ವ್ಯಕ್ತ ಪಡಿಸಿದ್ದಾರೆ ಸವಿತಾ ಸಮಾಜದ ಮುಖ್ಯಸ್ಥರು.
ಇದನ್ನೂ ಓದಿ: Gauri Khan: ಶಾರುಖ್ ಖಾನ್’ನ ಮದ್ವೆ ಆಗಿ 30 ವರ್ಷ ಆದ್ರೂ ಪತ್ನಿ ಗೌರಿ ಖಾನ್ ಪಾಲಿಸೋ ಧರ್ಮ ಯಾವುದು?
ಮಧು ಬಂಗಾರಪ್ಪ ಅವರ ಹೇಳಿಕೆಯಿಂದ ನಮ್ಮ ಸಮಾಜಕ್ಕೆ ನೋವಾಗಿದೆ ಎಂದು ಸವಿತಾ ಸಮಾಜದವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾಗಿರುವ ನರೇಶ್ ಕುಮಾರ್, ” ಮಾನ್ಯ ಮಧು ಬಂಗಾರಪ್ಪನವರೇ, ನಿಮ್ಮ ಕ್ಷೌರಿಕನಿಗೆ ಕೂದಲು ಕತ್ತರಿಸಲು ಬಿಡುವಿಲ್ಲ ಎಂದು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರನ್ನು ಕರೆದಿದ್ದೀರಿ. ಆದ ಕಾರಣ ನಿಮ್ಮ ಕೂದಲು ಕತ್ತರಿಸಲು ರಾಜ್ಯಾದ್ಯಂತ ವೃತ್ತಿಪರ ಸಮುದಾಯದ ಬಂಧುಗಳು ಬಾಜಾ ಭಜಂತ್ರಿಯೊಂದಿಗೆ ನಿಮ್ಮ ಮನೆಯ ಬಾಗಿಲಿಗೆ ಬಂದು ಕತ್ತರಿಸಲು ಸಿದ್ಧರಿದ್ದೇವೆ” ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: PM Modi: ಲೋಕಸಭೆಯ ಪ್ರಚಾರದ ನಂತರ ಧ್ಯಾನಕ್ಕಾಗಿ ಕನ್ಯಾಕುಮಾರಿ ರಾಕ್ ಸ್ಮಾರಕ ತಲುಪಲಿರುವ ಪ್ರಧಾನಿ ಮೋದಿ .
“ಮಧು ಬಂಗಾರಪ್ಪಗೆ ಹಣದ ಸಮಸ್ಯೆ ಇದ್ರೆ ನಮ್ಮ ಕಾರ್ಯಕರ್ತರಿಗೆ ಹೇಳುತ್ತೇನೆ. ನಮ್ಮ ಯುವ ಮೋರ್ಚಾದವರಿಗೆ ತಿಂಗಳಿಗೆ ಇಂತಿಷ್ಟು ಹಣ ಕೊಡಲು ಹೇಳುತ್ತೇನೆ. ಮಧು ಬಂಗಾರಪ್ಪ ಕಟ್ಟಿಂಗ್ ಗಾಗಿ ತಿಂಗಳಿಗೆ ಇಂತಿಷ್ಟು ಹಣ ಕೊಡ್ತೇವೆ. ಕಟ್ಟಿಂಗ್ ಮಾಡಿ ಶಿಸ್ತಿನಿಂದ ಇರಲಿ. ಅವರು ಶಿಕ್ಷಣ ಸಚಿವರು, ಅವರಿಗೆ ಮೊದಲು ಶಿಸ್ತಿನ ಅರಿವಿರಬೇಕು” ಎಂದು ಬಿ ವೈ ವಿಜಯೇಂದ್ರ ಶಿಕ್ಷಣ ಸಚಿವರ ವಿರುದ್ದ ವ್ಯಂಗವಾಡಿದ್ದಾರೆ.
ಶಾಲಾ ವಿದ್ಯಾರ್ಥಿಗಳ ಹೇರ್ ಕಟಿಂಗ್ ನ ಮೇಲೆ ಶಿಕ್ಷಕರು ಸದಾ ನಿಗಾ ಇಡುತ್ತಾರೆ. ಅದೇ ರೀತಿಯಲ್ಲಿ ಇದೀಗ ಶಿಕ್ಷಣ ಸಚಿವರ ಹೇರ್ ಕಟಿಂಗ್ ಮೇಲೆ ಇಡೀ ರಾಜ್ಯದ ಜನರ ಕಣ್ಣು ಬಿದ್ದಿದೆ. ವಿದ್ಯಾರ್ಥಿಗಳು ಸಾದಾ ಸೀದಾ ಕಟಿಂಗ್ ಮಾಡಿಕೊಂಡು ಹೇಗೆ ಬರಬೇಕೋ, ಅದೇ ರೀತಿ ಶಿಕ್ಷಣ ಸಚಿವರು ಕೂಡ ಕಟಿಂಗ್ ಮಾಡಿಸಿಕೊಳ್ಳಬೇಕಾ ? ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ರಾಜ್ಯದ ಜನತೆ ತಲೆಕೆರೆದುಕೊಳ್ಳುತ್ತಿದ್ದಾರೆ.