Puttur: ಪುತ್ತೂರು; ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Puttur: ನಗರದ ಮರೀಲು ಕಾಡು ಮನೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಿನ್ನೆ (ಮೇ.28) ರಂದು ನಡೆದಿದೆ.

 

ಇದನ್ನೂ ಓದಿ: Pangala Case: ನಿಜವಾಯ್ತು ದೈವದ ಕಾರ್ಣಿಕ ನುಡಿ; ಶರತ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕೋರ್ಟ್‌ಗೆ ಶರಣು

ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್‌ ಅವರ ಪತ್ನಿ ಸಂಧ್ಯಾ ಎಂಬುವವರೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಮನೋಜ್‌ ಅವರು ರಿಕ್ಷಾ ಚಾಲಕರಾಗಿದ್ದು, 20 ವರ್ಷಗಳಿಂದ ಪುತ್ತೂರಿನ ಮರೀಲ್‌ ಬಳಿ ಬಾಡಿಗೆ ಮನೆಯಲ್ಲಿ ತಮ್ಮ ಹೆಂಡತಿ ಹಾಗೂ ಮಗನೊಂದಿಗೆ ವಾಸವಾಗಿದ್ದರು.

ಇದನ್ನೂ ಓದಿ: Belthangady: ಶಾಸಕ ಹರೀಶ್‌ ಪೂಂಜ ವಿರುದ್ಧದ ಪ್ರಕರಣ; ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಮೇ. 27 ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದ ಮನೋಜ್‌ ಅವರು ಮೇ.28 ರಂದು ಬೆಳಗ್ಗೆ ಮನೆಗೆ ಬಂದಾಗ ಪತ್ನಿ ಮನೆಯ ಹಾಲ್‌ನ ಕಿಟಕಿಗೆ ನೇಣುಬಿಗಿದುಕೊಂಡು ಅಸ್ವಸ್ಥ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಸಂಧ್ಯಾ ಅವರು ಅದಾಗಲೇ ಮೃತಪಟ್ಟಿದ್ದರು.

Leave A Reply

Your email address will not be published.