Health Tips: ನಿಮಗಿದು ತಿಳಿದಿರಲಿ! ನೀರಿನ ಬಾಟಲಿಯಲ್ಲಿ ಈ ಬಣ್ಣದ ಮುಚ್ಚಳ ಇದ್ರೆ ನೀರಿನ ಗುಣಮಟ್ಟ ಉತ್ತಮವಾಗಿರುತ್ತಂತೆ!

Health Tips: ಒಂದು ಹೊತ್ತು ಆಹಾರ ಇಲ್ಲದೇ ಇರಬಹುದು ಆದ್ರೆ ನೀರು ಇಲ್ಲದೇ ನಮ್ಮ ದೇಹದ ದಾಹ ತೀರಿಸಲು ಸಾಧ್ಯವಿಲ್ಲ. ಯಾಕೆಂದರೆ ನಿರ್ಜಲೀಕರಣವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅದಕ್ಕಾಗಿ ಹೊರಗಡೆ ಹೋದಲ್ಲಿ ಬಾಯಾರಿಕೆ ಆದಾಗ ಹಿಂದೆ ಮುಂದೆ ನೋಡದೆ ಬಾಟಲಿ ನೀರು ಖರೀದಿಸಿ ಕುಡಿಯುತ್ತೇವೆ.

ಇದನ್ನೂ ಓದಿ: Baba Vanga Predictions: ಪ್ರಪಂಚದ ಅಂತ್ಯ ಯಾವಾಗ? ಬಾಬಾ ವಂಗಾ ಭವಿಷ್ಯ!

ಬಾಟಲಿ ನೀರಿನಲ್ಲೂ ಸಾಕಷ್ಟು ಬ್ರಾಂಡ್ಗಳಿವೆ ಇದು ನಮಗೆ ತಿಳಿದಿರುವ ವಿಚಾರ. ಆದರೆ ಎಚ್ಚರ ಇರಲಿ. ಇವೆಲ್ಲವನ್ನು ನಾವು ನೋಡಿಕೊಂಡು ಖರೀದಿಸಬೇಕು. ಏಕೆಂದರೆ ಕುಡಿಯುವ ನೀರು ಶುದ್ಧವಾಗಿರಬೇಕು. ಇಲ್ಲದಿದ್ದರೆ ನೀರು ಕಲುಷಿತಗೊಂಡಿದ್ದರೆ ಟೈಫಾಯಿಡ್, ಕಾಲರಾದಂತಹ ಮಾರಕ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿ ನೀರು ಶುದ್ಧವಾಗಿದ್ಯಾ ಅಥವಾ ಕಲುಷಿತಗೊಂಡಿದ್ಯಾ ಎಂದು ಕಂಡು ಹಿಡಿಯಲು ಇಲ್ಲಿ ಸುಲಭ ಆರೋಗ್ಯ ಟಿಪ್ಸ್ (Health Tips) ಒಂದನ್ನು ತಿಳಿಸಲಾಗಿದೆ.

ಇದನ್ನೂ ಓದಿ: 7th Pay Commission: ಜೂನ್‌ನಲ್ಲಿ 7ನೇ ವೇತನ ಆಯೋಗ ಜಾರಿ ಸಾಧ್ಯತೆ !!

ಹೌದು, ನೀವು ಬಾಟಲ್ನಲ್ಲಿ ನೀರು ಖರೀದಿಸಿ ಕುಡಿಯಲು ಬಯಸಿದರೆ ಬಾಟಲಿಯ ಮುಚ್ಚಳದ ಬಣ್ಣವನ್ನು ಮೊದಲು ನೋಡಿ. ನಂತರ ಆ ನೀರನ್ನು ಕುಡಿಯಿರಿ. ಹೌದು, ವಿವಿಧ ಬಣ್ಣದ ಕ್ಯಾಪ್ಗಳನ್ನು ಹೊಂದಿರುವ ಬಾಟಲಿಗಳು ವಿಭಿನ್ನ ಗುಣಗಳನ್ನು ಹೊಂದಿರುತ್ತದೆ.

ಬಿಳಿ ಮುಚ್ಚಳಗಳನ್ನು ಹೊಂದಿರುವ ಬಾಟಲ್ ನೀರನ್ನು ಹೆಚ್ಚು ಶುದ್ಧೀಕರಿಸಲಾಗುತ್ತದೆ. ನೀಲಿ ಕ್ಯಾಪ್ಗಳನ್ನು ಹೊಂದಿರುವ ಬಾಟಲಿಗಳು ನದಿಗಳು ಮತ್ತು ಇತರ ಮೂಲಗಳಿಂದ ಸಂಗ್ರಹಿಸಲಾದ ನೀರಾಗಿರುತ್ತದೆ. ಬಾಟಲ್ ಕ್ಯಾಪ್ ಹಸಿರು ಬಣ್ಣದಾಗಿದ್ದರೆ ಅದರ ಸುವಾಸನೆಗಾಗಿ ಪುದೀನ, ನಿಂಬೆ ರಸ ಬೆರೆಸಲಾಗಿರುತ್ತದೆ. ಕೆಂಪು ಕ್ಯಾಪ್ಗಳು ಕಾರ್ಬೊನೇಟೆಡ್ ನೀರು, ಹಳದಿ ಕ್ಯಾಪ್ಗಳು ವಿಟಮಿನ್ಗಳ ನೀರು, ಬ್ಲ್ಯಾಕ್ ಕ್ಯಾಪ್ಗಳು ಕ್ಷಾರೀಯ ನೀರು, ಅದೇ ರೀತಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಗುಲಾಬಿ ಕ್ಯಾಪ್ಗಳನ್ನು ನೀಡಲಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇನ್ನೂ ಈ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಲೇ ಇವೆ.

ವಾಸ್ತವವಾಗಿ ಹೇಳುವುದಾದರೆ ನೀರಿನ ಬಾಟಲಿಯಲ್ಲಿನ ನೀರಿನ ಗುಣಮಟ್ಟಕ್ಕೂ ಹಾಗೂ ಕ್ಯಾಪ್ ಬಣ್ಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಜಗತ್ತಿನ ಯಾವುದೇ ಅಣೆಕಟ್ಟುಗಳು ನೀರಿನ ಗುಣಮಟ್ಟದೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ. ಒಟ್ಟಿನಲ್ಲಿ ಕ್ಯಾಪ್ ಬಣ್ಣಗಳಿಗೂ ನೀರಿನ ಗುಣಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಬಹುದು.

Leave A Reply

Your email address will not be published.