Aarti In Puja: ದೇವರಿಗೆ ಆರತಿ ಮಾಡುವಾಗ ಎಷ್ಟು ಕರ್ಪೂರವನ್ನಿಟ್ಟು ಆರತಿ ಮಾಡಬೇಕು ಗೊತ್ತಾ?

Aarti In Puja: ಪೂಜೆಯ ಸಮಯದಲ್ಲಿ ಕುಂಕುಮ, ಅರಿಶಿನ, ಹೂವು ಇತ್ಯಾದಿಗಳನ್ನು ದೇವರಿಗೆ ಅರ್ಪಿಸುವುದು ವಾಡಿಕೆ. ಇದರೊಂದಿಗೆ ಅಗರಬತ್ತಿಗಳನ್ನು, ಕರ್ಪೂರ ಬೆಳಗಿಸಿ ಆರತಿ ಮಾಡುಲಾಗುತ್ತೆ. ಆದರೆ ನಿಮ್ಮ ಮನಸಿಗೆ ತೋಚಿದಂತೆ ತಪ್ಪು ತಪ್ಪಾಗಿ ಆರತಿಯನ್ನು ಮಾಡುವುದರಿಂದ ಪೂಜೆಯ ಯಾವುದೇ ಫಲ ದೊರೆಯುವುದಿಲ್ಲ. ದೇವರಿಗೆ ಎಷ್ಟು ಬಾರಿ ಆರತಿಯನ್ನು (Aarti In Puja) ಮಾಡಬೇಕು.? ಆರತಿ ಮಾಡುವುದರ ನಿಯಮಗಳಾವುವು.? ಎಂಬುದನ್ನು ನೀವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.

ಇದನ್ನೂ ಓದಿ: Mangaluru: ಹರೇಕಳ-ಅಡ್ಯಾರ್‌ ಸೇತುವೆಯಲ್ಲಿ ಅಪಘಾತ; ಕಾರುಗಳ ಡಿಕ್ಕಿ

ದೇವರಿಗೆ ಆರತಿಯನ್ನು ಮಾಡದೇ ಇದ್ದರೆ ಪೂಜೆ ಪೂರ್ಣವೆಂದು ಪರಿಗಣಿಸಲು ಸಾಧ್ಯವಿಲ್ಲ. ಆರತಿ ಮಾಡುವುದರಿಂದ ದೇವರು ನಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸುತ್ತಾನೆ. ಆರತಿ ಮಾಡುವಾಗ ನಾವು ಕೆಲವೊಂದು ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ದೇವರಿಗೆ ಆರತಿಯನ್ನು ಮಾಡುವಾಗ ನಾವು ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕೆಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: BS Yediyurappa: ಬಿಎಸ್‌ ಯಡಿಯೂರಪ್ಪ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ; ದೂರು ನೀಡಿದ್ದ ಮಹಿಳೆ ಸಾವು

ಶಾಸ್ತ್ರಗಳ ಪ್ರಕಾರ, ನೀವು ಆರತಿ ಮಾಡುವಾಗ, ಧೂಪದ್ರವ್ಯ, ಕರ್ಪೂರ ಅಥವಾ ಬತ್ತಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾದುದ್ದು ತುಂಬಾನೇ ಮುಖ್ಯವಾಗಿರುತ್ತದೆ. ಧರ್ಮಗ್ರಂಥಗಳ ಪ್ರಕಾರ, ನೀವು ಧೂಪ ಅಥವಾ ಧೂಪದ್ರವ್ಯದಿಂದ ದೇವರ ಆರತಿಯನ್ನು ಮಾಡಿದಾಗ, ಅದರ ಸಂಖ್ಯೆ ಯಾವಾಗಲೂ ಬೆಸ ಸಂಖ್ಯೆಯಾಗಿರಬೇಕು. ಇದು 3, 5, 7 ಅಥವಾ 9 ರಂತೆ ಇರಬೇಕು. ನೀವು ದೀಪವನ್ನು ಬೆಳಗಿಸುತ್ತಿದ್ದರೆ ಬೆಸ ಸಂಖ್ಯೆಯಿಂದ ಕರ್ಪೂರವನ್ನು ಇಟ್ಟುಕೊಳ್ಳಿ.

ಶಾಸ್ತ್ರಗಳಲ್ಲಿನ ಉಲ್ಲೇಖದ ಪ್ರಕಾರ, ದೇವರ ಪೂಜೆಯನ್ನು ಮಾಡುವಾಗ ಮೂರು ಬಾರಿ ಆರತಿಯನ್ನು ಅರ್ಪಿಸಬೇಕೆಂದು ಹೇಳಲಾಗಿದೆ. ಮೊದಲನೇಯದಾಗಿ ನಾಲ್ಕು ಬಾರಿ ದೇವರ ಪಾದಗಳಿಗೆ, ಎರಡನೇಯದಾಗಿ ಎರಡು ಬಾರಿ ದೇವರ ಹೊಕ್ಕುಳಿಗೆ, ಮೂರನೇಯದಾಗಿ ಮುಖಕ್ಕೆ ಆರತಿಯನ್ನು ಮಾಡಿ ನಂತರ ತಲೆಯಿಂದ ದೇವರ ಪಾದದವರೆಗೆ ಆರತಿಯನ್ನು ಶ್ರದ್ಧೆಯಿಂದ ಮಾಡಬೇಕು. ಅಂದರೆ ಒಟ್ಟಾರೆಯಾಗಿ ಒಂದು ಪೂಜೆಯಲ್ಲಿ ದೇವರಿಗೆ 14 ಬಾರಿ ಆರತಿಯನ್ನು ಮಾಡಲಾಗುತ್ತದೆ.

ಶಾಸ್ತ್ರಗಳ ಪ್ರಕಾರ, ನೀವು ದೇವರನ್ನು ಪೂಜಿಸಿ ಆರತಿಯನ್ನು ಮಾಡಿದ ನಂತರ ಕೊನೆಯಲ್ಲಿ ನೀರಿನಿಂದ ಆಚಮಾನವನ್ನು ಮಾಡಬೇಕು. ಇದಕ್ಕಾಗಿ ಹೂವು ಅಥವಾ ಚಮಚದ ಸಹಾಯದಿಂದ ದೀಪದ ಸುತ್ತಲೂ 4 ಬಾರಿ ನೀರನ್ನು ತಿರುಗಿಸಿ ನೆಲಕ್ಕೆ ಅಥವಾ ಭೂಮಿಗೆ ಬಿಡಿ.

ಆರತಿಯನ್ನು ಮಾಡುವ ಮೊದಲು ಮತ್ತು ಆರತಿ ಮಾಡಿದ ನಂತರ ಆರತಿಯನ್ನು ಒಂದು ತಟ್ಟೆಯಲ್ಲಿ ಇಡಬೇಕು. ಆರತಿಯ ದೀಪವನ್ನು ಬೆಳಗುವ ಮೊದಲು ನಿಮ್ಮ ಕೈಗಳನ್ನು ತೊಳೆದು ಶುದ್ಧವಾಗಿಟ್ಟುಕೊಂಡು ನಂತರ ಆರತಿಯನ್ನು ಮಾಡಬೇಕು.

Leave A Reply

Your email address will not be published.