Relationship Tips: ಗಂಡಸರು ಮಹಿಳೆಯರಲ್ಲಿ ಈ ವಿಷ್ಯ ಹೇಳಿಕೊಳ್ಳೋದಿಲ್ಲವಂತೆ !
Relationship Tips: ಪತಿ-ಪತ್ನಿಯ ನಡುವೆ ಯಾವುದೇ ರಹಸ್ಯಗಳು ಇರಬಾರದು ಎಂದು ಹೆಚ್ಚಿನ ದಂಪತಿಗಳ ಆಸೆ ಆಗಿರುತ್ತದೆ. ಆದರೆ ಎಷ್ಟೋ ಪುರುಷರು ಹಲವು ವಿಚಾರಗಳನ್ನು ಮಹಿಳೆಯೊಂದಿಗೆ ಚರ್ಚಿಸಲು ಹಿಂಜರಿಯುತ್ತಾರೆ. ಆದರೆ ಈ ರೀತಿಯ ನಡವಳಿಕೆಯನ್ನು ಪುರುಷರು ಬಿಟ್ಟರೆ, ಹೆಂಡತಿಯೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಲು ಸಾಧ್ಯವಾಗುತ್ತದೆ.
ಹೌದು, ದಂಪತಿಗಳು ಇಬ್ಬರೂ ಸಹ ಪರಸ್ಪರ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ಮನ ಬಿಚ್ಚಿ ಮಾತನಾಡಬೇಕು. ಯಾವುದೇ ಸಮಸ್ಯೆಗಳಿದ್ದರೂ ಇಬ್ಬರೂ ಒಟ್ಟಿಗೆ ಕುಳಿತು ಚರ್ಚಿಸಬೇಕು. ಆದರೆ ಕೆಲ ಪುರುಷರು ಈ ಕೆಲಸ ಮಾಡುವುದಿಲ್ಲ. ಹೆಂಡತಿಯೊಂದಿಗೆ ಚರ್ಚೆ ನಡೆಸಲು ಹಿಂಜರಿಯುತ್ತಾರೆ. ಈ ರೀತಿಯ ಪುರುಷರ ಮನಸ್ಥಿತಿಯು ಮಹಿಳೆಯರನ್ನು ಖಿನ್ನತೆಗೆ ಒಳಪಡಿಸುತ್ತದೆ ಮತ್ತು ಪರಿಣಾಮವಾಗಿ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಲೇಷನ್ ಶಿಪ್ (Relationship Tips) ತಜ್ಞರಾದ ಜೀವಿಕಾ ಶರ್ಮಾ ತಿಳಿಸಿದ್ದಾರೆ.
ಪುರುಷರು ತಮ್ಮ ದೌರ್ಬಲ್ಯಗಳನ್ನು ಹೆಚ್ಚು ವಾದಿಸಿದರೆ ಅಥವಾ ಚರ್ಚಿಸಿದರೆ ತಮ್ಮ ದೌರ್ಬಲ್ಯಗಳು ಬಹಿರಂಗಗೊಳ್ಳುತ್ತವೆ ಎಂದು ಭಯಪಡುತ್ತಾರೆ. ಅವರ ಬಗ್ಗೆ ಪೂರ್ಣವಾಗಿ ಹೇಳುವುದು ಅವರ ನ್ಯೂನತೆಗಳನ್ನು ಬಹಿರಂಗಪಡಿಸುತ್ತದೆ ಮತ್ತು ಅವರನ್ನು ಅಗೌರವಗೊಳಿಸುತ್ತದೆ ಎಂಬ ಕಾರಣಕ್ಕಾಗಿ ಪುರುಷರು ಈ ಬಗ್ಗೆ ಚರ್ಚೆ ನಡೆಸಲು ಹಿಂಜರಿಯುತ್ತಾರೆ.
ಪುರುಷರು ಚರ್ಚೆಯಿಂದ ದೂರವಿರಲು ಅಹಂ ಕೂಡ ಒಂದು ಕಾರಣ. ಅನೇಕ ಪುರುಷರು ಇತರರಿಂದ ಸಲಹೆ ಪಡೆಯಲು ಇಷ್ಟಪಡುವುದಿಲ್ಲ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಜ್ಞೆ ತಮಗಿದೆ ಎಂದು ಭಾವಿಸುತ್ತಾರೆ. ಹೀಗಾಗಿ ಮಹಿಳೆಯರೊಂದಿಗೆ ಚರ್ಚೆ ನಡೆಸಲು ಮುಂದಾಗುವುದಿಲ್ಲ.
ಮನೆಯಲ್ಲಿನ ಜವಾಬ್ದಾರಿಗಳ ಭಯ, ಹೆಂಡತಿ ಮತ್ತು ಪತಿ ಸಮಾನವಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು. ಆದರೆ, ಪುರುಷರು ಕೆಲವು ರೀತಿಯ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಇಂತಹ ಸಮಯ ಬಂದಾಗ ಈ ವಿಚಾರವನ್ನು ಪ್ರಶ್ನಿಸುತ್ತಾರೆ ಎಂಬ ಭಾವನೆಯಿಂದ ಮಹಿಳೆಯರ ಬಳಿ ಚರ್ಚೆಗೆ ಇಳಿಯುವುದಿಲ್ಲ.
ಕೆಲವು ಪುರುಷ ಪ್ರಧಾನ ಕುಟುಂಬಗಳಾಗಿರುತ್ತದೆ. ಅಂತಹ ವಾತಾವರಣದಲ್ಲಿ ಬೆಳೆದ ಗಂಡು ಮಕ್ಕಳು ಅದೇ ರೀತಿಯ ನಡವಳಿಕೆಯನ್ನು ಹೊಂದಿರುವುದು ಸಹಜ. ಇವರ ಮುಂದೆ ಹೆಚ್ಚು ಮಾತನಾಡುವುದು ತಮ್ಮ ಹೆಮ್ಮೆಗೆ ಧಕ್ಕೆ ತರುತ್ತದೆ ಎಂದು ಅವರು ಭಾವಿಸುತ್ತಾರೆ. ಅದು ಅವರಲ್ಲಿ ಆಳವಾಗಿ ಬೇರೂರಿದೆ. ಈ ನಡವಳಿಕೆಯನ್ನು ಬದಲಾಯಿಸುವುದು ಕಷ್ಟ.
ಕೆಲವೊಮ್ಮೆ ಹೆಂಗಸರು ತಮ್ಮ ಗಂಡನ ನಂಬಿಕೆಯನ್ನು ಕಳೆದುಕೊಂಡಿರುತ್ತಾರೆ. ಪುರುಷರನ್ನು ಇತರರ ಮುಂದೆ ಕೀಳಾಗಿ ಹೀಯಾಳಿಸುವುದು ಮತ್ತು ತಮ್ಮ ನ್ಯೂನತೆಗಳನ್ನು ಪ್ರಚಾರ ಮಾಡಲು ಇಷ್ಟಪಡದೇ ಇರುವುದು. ಇದರ ಪರಿಣಾಮ ಸಂಬಂಧ ಗಟ್ಟಿಯಾಗಿರುವುದಿಲ್ಲ. ಹಾಗಾಗಿ ಇಂತಹ ವೇಳೆ ಪುರುಷರು ಚರ್ಚೆ ನಡೆಸಲು ಇಷ್ಟಪಡುವುದಿಲ್ಲ.
ಇದನ್ನೂ ಓದಿ: Vitla: ಬೀಗ ಹಾಕಿದ ಮನೆಯಲ್ಲಿ ಕಳ್ಳರ ಕೈ ಚಳಕ; ಎ.ಸಿ.ಚಾಲು ಮಾಡಿ ರಾಡೋ ವಾಚ್, ಡಿವಿಆರ್ ಕಳ್ಳತನ