Uddhav Thackeray : BJP ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ – ಉದ್ಧವ್ ಠಾಕ್ರೆ !!

Uddhav Thackeray: ಬಿಜೆಪಿ(BJP) ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್(RSS) ನಿಷೇಧ ಮಾಡುತ್ತಾರೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray) ಹೇಳಿದ್ದಾರೆ.

ಇದನ್ನೂ ಓದಿ: Election Commission: ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆ: ನಿರ್ಮಾಣ ಕಾಮಗಾರಿಗಳಿಗೆ ಚುನಾವಣಾ ಆಯೋಗ ಅಸ್ತು

ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ(J P Nadda), ಬಿಜೆಪಿ, RSS ಒಂದನ್ನೊಂದು ಅವಲಂಬಿಸಿಯೇ ಇರಬೇಕೆಂದೇನಿಲ್ಲ, ಸ್ವತಂತ್ರವಾಗಿ ಚಿಂತಿಸುವ ರೀತಿ ಎರಡೂ ಬೆಳೆದು ನಿಂತಿದೆ’ ಎಂದು ಹೇಳಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಉದ್ಧವ್ ಠಾಕ್ರೆ ಅವರು ‘ಶಿವಸೇನೆಯನ್ನು ಬಳಸಿ ಬಿಸಾಡಲು ಯತ್ನಿಸಿದ ರೀತಿಯ ಆಟವನ್ನು ಪ್ರಧಾನಿ ಮೋದಿಯವರು ಮುಂದಿನ ದಿನಗಳಲ್ಲಿ RSSನ ಜೊತೆಗೂ ಆಡಲಿದ್ದಾರೆ. ಹೀಗಾಗಿ ಮುಂದೆ ಮೋದಿ ಅಧಿಕಾರಕ್ಕೆ ಬಂದರೆ RSS ಬ್ಯಾನ್ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bengaluru: ಧೋನಿ ಬಾರಿಸಿದ ಸಿಕ್ಸರ್ CSK ಸೋಲಿಗೆ ಮತ್ತು ರಾಯಲ್ ಚಾಲೆಂಜರ್ಸ್ ಗೆಲುವಿಗೆ ಕಾರಣವೇ ? ಆಶ್ಚರ್ಯ ಆದ್ರೂ ಇದು ಸತ್ಯ !

ಅಲ್ಲದೆ ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ RSS ನಿಷೇಧಿಸಿದ್ದರು. ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ RSS ನಿಷೇಧಿಸುವುದು ಖಚಿತವೆಂದು ಹೇಳಿದ್ದಾರೆ. ಒಟ್ಟಾರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಕಾರ್ಯಕರ್ತರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿದ್ದಾರೆ.

1 Comment
  1. […] ಇದನ್ನೂ ಓದಿ: Uddhav Thackeray : BJP ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ &#82… […]

Leave A Reply

Your email address will not be published.