Home News Actor Chetan Kumar Ahimsa: ಸಿಎಂ ಸಿದ್ದರಾಮಯ್ಯ “ಸೋಮಾರಿ” ಎಂದ ಕನ್ನಡ ನಟ!‌

Actor Chetan Kumar Ahimsa: ಸಿಎಂ ಸಿದ್ದರಾಮಯ್ಯ “ಸೋಮಾರಿ” ಎಂದ ಕನ್ನಡ ನಟ!‌

Actor Chetan Kumar Ahimsa

Hindu neighbor gifts plot of land

Hindu neighbour gifts land to Muslim journalist

Actor Chetan Kumar: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು “ಸೋಮಾರಿ” ಟ್ವೀಟ್‌ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತರಾಗಿರುವ ನಟ ಚೇತನ್‌ (Actor Chetan Kumar ahimsa) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು “ಸೋಮಾರಿ” ಎಂದು ಕರೆದಿದ್ದಾರೆ. ಆದರೆ ಸಿದ್ದು ಅಭಿಮಾನಿಗಳು ಇದರಿಂದಾಗಿ ಆಕ್ರೋಶ ಗೊಂಡಿದ್ದಾರೆ.

https://x.com/ChetanAhimsa/status/1792079240441041049

ಈಗಾಗಲೇ “ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಟಾಪರ್‌ಗಳಿಗೆ ಬಾಬಾಸಾಹೇಬ್ ಅವರ ‘ಅನೀಹಿಲೇಷನ್ ಆಫ್ ಕಾಸ್ಟ್ʼ ಕೃತಿಯ ಪ್ರತಿಯನ್ನು ಸಿಎಂ ʼಸೋಮಾರಿ’ ಸಿದ್ದು ನೀಡಿದ್ದಾರೆ. ಎಷ್ಟು ವಿಪರ್ಯಾಸ” ಎಂದು ಚೇತನ್‌ ಟ್ವೀಟ್ ಮಾಡಿದ್ದಾರೆ.‌

ಇದನ್ನೂ ಓದಿ: School Fees Hike: 30% ವರೆಗೆ ಶುಲ್ಕ ಏರಿಸಲು ಮುಂದಾದ ಖಾಸಗಿ ಶಾಲೆಗಳು !!

ಅಂಬೇಡ್ಕರ್ (Dr. BR Ambedkar) ಅವರ ಕಾಲದಲ್ಲಿ ಅವರ ಅತಿದೊಡ್ಡ ರಾಜಕೀಯ ಶತ್ರು ಕಾಂಗ್ರೆಸ್ ಪಕ್ಷ. ಆದರೆ ಈಗ ಅಂಬೇಡ್ಕರ್ ಅವರನ್ನು ಚುನಾವಣಾ ಲಾಭಕ್ಕಾಗಿ ಪ್ರಯತ್ನಿಸುತ್ತಾರೆ. ಅದರ ಬದಲು ಗಾಂಧಿಯವರ 36 ಬ್ರಾಹ್ಮಣ್ಯದ ಪುಸ್ತಕಗಳಲ್ಲಿ ಒಂದನ್ನು ಸಿಎಂ ಈ ಇಬ್ಬರು ವಿದ್ಯಾರ್ಥಿಗಳಿಗೆ ನೀಡಬೇಕಿತ್ತು. ಇದು ಸೈದ್ಧಾಂತಿಕವಾಗಿ ಉತ್ತಮ ಉಡುಗೊರೆಯಾಗಿರುತ್ತಿತ್ತು ಎಂದು ಚೇತನ್ ತಮ್ಮ ಅಭಿಪ್ರಾಯ ವನ್ನು ವ್ಯಂಗ್ಯ ವಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral News: ಮೇಲಿಂದ ಬಿದ್ದ ಮಗುವನ್ನು ರಕ್ಷಣೆ ಮಾಡಿದ ವಾರಗಳ ನಂತರ ಇದೀಗ ತಾಯಿ ಸುಸೈಡ್‌; ಕಾರಣವೇನು?