Driving: ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿ ಜಾಲಿ ರೈಡ್ ಮಾಡಿದ ಪ್ರಿಯಕರ

Share the Article

Driving: ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಕೊಡಿಗೇಹಳ್ಳಿ ಮೇಲ್ಲೇತುವೆಯಲ್ಲಿ ಬೈಕ್ ಸವಾರಿ ಮಾಡಿ ಹುಚ್ಚಾಟ ಮೆರೆದಿದ್ದ ಯುವಕನನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Bengaluru: ಧೋನಿ ಬಾರಿಸಿದ ಸಿಕ್ಸರ್ CSK ಸೋಲಿಗೆ ಮತ್ತು ರಾಯಲ್ ಚಾಲೆಂಜರ್ಸ್ ಗೆಲುವಿಗೆ ಕಾರಣವೇ ? ಆಶ್ಚರ್ಯ ಆದ್ರೂ ಇದು ಸತ್ಯ !

ಕಾವಲ್ ಬೈರಸಂದ್ರ ಎಂ.ವಿ.ಲೇಔಟ್‌ನ ಸಿಲಂಬರಸನ್, ಮೇ 17ರಂದು ರಾತ್ರಿ ತನ್ನ ಪ್ರೇಯಸಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಯಲಹಂಕದಿಂದ ಹೆಬ್ಬಾಳ ಕಡೆಗೆ ಬೈಕ್ ಚಾಲನೆ ಮಾಡಿಕೊಂಡು ಹೋಗಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ವಾಹನ ಸವಾರರು ಸಿಲಂಬರಸನ್ ಮತ್ತು ಆತನ ಪ್ರೇಯಸಿಯ ಹುಚ್ಚಾಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಇದನ್ನೂ ಓದಿ: Uddhav Thackeray : BJP ಅಧಿಕಾರಕ್ಕೆ ಬಂದ್ರೆ RSS ಬ್ಯಾನ್ – ಉದ್ಧವ್ ಠಾಕ್ರೆ !!

ಅಜಾಗರೂಕ ಚಾಲನೆ ಮತ್ತು ಅನುಚಿತ ವರ್ತನೆಗಾಗಿ ಬೈಕ್ ಸವಾರ ಸಿಲಂಬರಸನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನೆಟ್ಟಿಗರು ಆಗ್ರಹಿಸಿದ್ದರು. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆ ಕುರಿತು ನೆಟ್ಟಿಗರು ಚರ್ಚಿಸಿದ್ದರು. ಸಿಲಂಬರಸನ್ ಮತ್ತು ಆತನ ಪ್ರೇಯಸಿ ಹೆಲೈಟ್ ಧರಿಸದೆ ಬೈಕ್‌ನಲ್ಲಿ ಜಾಲಿ ರೈಡ್ ಮಾಡಿದ್ದರು. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಿಲಂಬರಸನ್ ನನ್ನು ಬಂಧಿಸಿದ್ದಾರೆ.

ಸಿಲಂಬರಸನ್, ಕ್ಯಾಬ್ ಚಾಲಕನಾಗಿದ್ದಾನೆ. ಆತನ ವಿರುದ್ಧ ಇತರೆ ವಾಹನ ಸವಾರರ ಜೀವಕ್ಕೆ ಅಪಾಯವಾಗುವಂತೆ ಅಜಾಗರೂಕತೆಯಿಂದ ಚಾಲನೆ ಮಾಡಿದ. ಹೆಲೈಟ್ ಧರಿಸದ, ಅತಿ ವೇಗದ ಚಾಲನೆ ಆರೋಪದಡಿ ಕೇಸ್ ದಾಖಲಿಸಲಾಗಿದೆ ಮತ್ತು ಬೈಕ್ ಜಪ್ತಿ ಮಾಡಲಾಗಿದೆ. ಚಾಲನಾ ಪರವಾನಗಿ ರದ್ದುಪಡಿಸುವಂತೆ ಆರ್‌ಟಿಒಗೆ ಶಿಫಾರಸು ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply