Moodabidre: ಗುಡ್ಡದಲ್ಲಿ ಕಟ್ಟಿಹಾಕಿದ 12 ಹೋರಿ ಸೇರಿದಂತೆ‌ 14 ಜಾನುವಾರುಗಳನ್ನು ವಶಪಡಿಸಿಕೊಂಡ ಪೊಲೀಸರು

Share the Article

Moodabidre: ಗುಡ್ಡದಲ್ಲಿ ಅಕ್ರಮವಾಗಿ 14 ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯವ ಉದ್ದೇಶದಿಂದ ಕಟ್ಟಿ ಹಾಕಲಾಗಿದೆ ಎಂಬ ಸಾರ್ವಜನಿಕರ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೂಡುಬಿದಿರೆ ಪೊಲೀಸರು ಜಾನುವಾರುಗಳನ್ನು ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ಶನಿವಾರ ನಡೆದಿದೆ.

ಮೂಡುಬಿದಿರೆ ತೋಡಾರಿನ ಹಿದಾಯತ್ ನಗರದ ಪೆರಾಡಿ ಕಂಪೌಂಡ್ ನ ಅಬುಸಾಲಿ ಎಂಬವರ ಮನೆಯ ಜಾಗದಲ್ಲಿ ಹಂಡೇಲಿನ ಹಸನ್ ಬಾವಾ ಎಂಬವರು 12 ಹೋರಿ ಮತ್ತು 2 ಕೋಣಗಳನ್ನು ಅಕ್ರಮವಾಗಿ ಕಟ್ಟಿ ಹಾಕಿದ್ದರು.

ಈ ಕುರಿತು ಮಾಹಿತಿಯನ್ನು ಪಡೆದುಕೊಂಡ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು ಸಿಬಂದಿಗಳು ದಾಳಿ ನಡೆಸಿದ್ದರು.
ಆರೋಪಿಗಳಾದ ಹಸನ್ ಬಾವಾ ಮತ್ತು ಅಬುಸಾಲಿ ತಪ್ಪಿಸಿಕೊಂಡಿದ್ದು, ರಕ್ಷಿಸಿದ ಜಾನುವಾರುಗಳನ್ನು ಕೆಂಜಾರಿನ ಗೋಶಾಲೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

Leave A Reply