Kadaba: ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಶಿಕ್ಷಕಿ ಮೃತ್ಯು

Share the Article

Kadaba : ನೂಜಿಬಾಳ್ತಿಲ ಗ್ರಾಮದ ಅಡಿಂಜೆ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಏಲಿಯಮ್ಮ. ಪಿ.ಸಿ ಅವರು ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: Moodabidre: ಗುಡ್ಡದಲ್ಲಿ ಕಟ್ಟಿಹಾಕಿದ 12 ಹೋರಿ ಸೇರಿದಂತೆ‌ 14 ಜಾನುವಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಮೇ 14 ರಂದು ಸಂಜೆ ಮನೆಯಲ್ಲಿ ಯಾವುದೋ ವಿಷಪದಾರ್ಥವನ್ನು ಸೇವನೆ ಮಾಡಿ ಮನೆಯ ಕೊಟ್ಟಿಗೆಯಲ್ಲಿ ಬಿದ್ದಿದ್ದು ಏಲಿಯಮ್ಮ ಅವರ ಗಂಡನ ಅಣ್ಣನ ಪತ್ನಿಯು ನೋಡಿ ವಿಚಾರಿಸಿದಾಗ ಯಾವುದೇ ಕಾರಣವನ್ನು ಹೇಳದೇ ನಾನು ಸಾಯುತ್ತೇನೆ ಎಂದು ಹೇಳುತ್ತಿದ್ದರು ಎನ್ನಲಾಗಿದೆ.

ಕೂಡಲೇ ಮನೆಯಲ್ಲಿದ್ದವರು ಅಸ್ವಸ್ಥಗೊಂಡಿದ್ದ ಏಲಿಯಮ್ಮ ಅವರನ್ನು ವಾಹನವೊಂದರಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಮೇ 16 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತ ಎಲಿಯಮ್ಮ ಅವರು ಸುಮಾರು ಮೂರು ವರ್ಷ ಹಿಂದಿನಿಂದಲೂ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಯಲ್ಲಿದ್ದು ಖಿನ್ನತೆಗೆ ಒಳಗಾಗಿ ಜಿಗುಪ್ಸೆಗೊಂಡು ಯಾವುದೋ ವಿಷಪದಾರ್ಥವನ್ನು ಸೇವನೆ ಮಾಡಿರುವುದಾಗಿರುತ್ತದೆ. ಮೃತರ ಮರಣದಲ್ಲಿ ಬೇರೆ ಯಾವುದೆ ಸಂಶಯವಿರುವುದಿಲ್ಲ ಎಂದು ಮೃತರ ಅತ್ತೆ ಸೋಸಮ್ಮ ಎಂಬರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Rona: ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರ ಸಾವು; ಓರ್ವನಿಗೆ ಗಾಯ

Leave A Reply