Bengaluru: ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ವರದಿ ಬಹಿರಂಗ ! ಐವರ ಸಾವಿಗೆ ಇದೇ ಕಾರಣ!

Share the Article

Bengaluru: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ ನಿದ್ರೆ ಮಾತ್ರೆ ಸೇವನೆಯೇ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bengaluru: ಮನೆಯೊಂದಕ್ಕೆ ಬರೋಬ್ಬರಿ 17 ಕೋಟಿ ವಿದ್ಯುತ್ ಬಿಲ್ : ಬಿಲ್ ನೋಡಿ ಶಾಕ್ ಆದ ಗ್ರಾಹಕ !

ಪತ್ತೆಯಾದ ಐದೂ ಜನರ ಅಸ್ಥಿಪಂಜರದ ಮೂಳೆಗಳ ಪರೀಕ್ಷೆ ವೇಳೆ ನಿದ್ರೆ ಮಾತ್ರೆ ಅಂಶಗಳು ಪತ್ತೆಯಾಗಿದೆ ಎಂದು ಚಿತ್ರದುರ್ಗ ಎಸ್‌.ಪಿ ಧರ್ಮೇಂದರ್‌ ಕುಮಾರ್‌ ಮೀನಾ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Earned leave: ಗಳಿಕೆ ರಜೆ ನೀಡಿ ಶಿಕ್ಷಕರ ಅಸಮಾಧಾನ ತಣಿಸಿದ ಸರ್ಕಾರ !!

ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನ ಹಳ್ಳಿ ಮೂಲದ ನಿವೃತ್ತ ಎಂಜಿನಿಯರ್‌ ಜಗನ್ನಾಥ್‌ ರೆಡ್ಡಿ, ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ನರೇಂದ್ರ ರೆಡ್ಡಿ ಹಾಗೂ ಕೃಷ್ಣಾರೆಡ್ಡಿ ಅವರು ಮನೆಯಲ್ಲಿ ಮೃತಪಟ್ಟಿದ್ದು, ಅವರ ಅಸ್ಥಿಪಂಜರಗಳು 2023, ಡಿ.28ರಂದು ಪತ್ತೆಯಾಗಿದ್ದವು.

ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯರಾದ ಡಾ| ವೇಣು ಹಾಗೂ ಬಸವೇಶ್ವರ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞ ಡಾ|ಶ್ರೀಕೃಷ್ಣ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ಕೆಲವರ ದೇಹದಲ್ಲಿ ಪತ್ತೆಯಾಗಿದ್ದ ಚರ್ಮದಲ್ಲೂ ನಿದ್ರೆ ಮಾತ್ರೆಯ ಅಂಶವನ್ನು ಮರಣೋತ್ತರ ಪರೀಕ್ಷೇ ವೇಳೆಯಲ್ಲೇ ವೈದ್ಯರು ಪತ್ತೆ ಮಾಡಿದ್ದರು.

ಅಂತಿಮವಾಗಿ ಅಸ್ಥಿಪಂಜರದಲ್ಲಿ ನಿದ್ರೆಯ ಮಾತ್ರೆಯ ಅಂಶಗಳನ್ನು ಉಲ್ಲೇಖೀಸಲಾಗಿದ್ದರೂ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮೇಲ್ನೋಟಕ್ಕೆ ನಿದ್ರೆ ಮಾತ್ರೆ ಸೇವನೆ ವಿಚಾರ ಹೊರ ಬಂದಿರುವುದರಿಂದ ಈ ಸಾವಿನ ಬಗ್ಗೆ ಇದ್ದ ಹಲವು ಅನುಮಾನಗಳಿಗೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

Leave A Reply

Your email address will not be published.