Bangalore Women Death: ಬಾತ್ ರೂಮ್ ಗೆ ಹೋದ ಯುವತಿ ವಾಪಸ್ ಬಾರದೆ ಅನುಮಾನಾಸ್ಪದ ಸಾವು : ರಕ್ತದ ಮಡುವಿನಲ್ಲಿ ಯುವತಿ ಶವ ಪತ್ತೆ

Bangalore Women Death: ಬಾತ್ ರೂಮ್ ಗೆ ಸ್ನಾನ ಮಾಡಲು ಹೋದ 20 ವರ್ಷದ ಯುವತಿ( young woman) ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವತಿಯ ಸಹೋದರ(Women brother) ಎಷ್ಟು ಹೊತ್ತಾದರೂ ಸಹೋದರಿ ಹೊರಗೆ ಬಾರದೇ ಇದ್ದುದರಿಂದ ಗಾಬರಿಗೊಂಡು ಯುವಕ, ಕೊನೆಗೆ ಬಾತ್ ರೂಂ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ. ಬಳಿಕ ಈ ವಿಷಯವನ್ನು ಪೊಲೀಸರಿಗೆ(Police) ತಿಳಿಸಿದ್ದು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Kitchen Hacks: ಒಂದು ಬಾರಿ ಬಳಸಿದ ಅಡುಗೆ ಎಣ್ಣೆಯನ್ನು ಪುನಃ ಯೂಸ್ ಮಾಡಬಹುದಾ?

ಯುವತಿ ಸ್ನಾನ ಮಾಡುವುದಾಗಿ ಹೇಳಿ ಬಾತ್ ರೂಂ(Bath room) ಒಳಗೆ ಹೋಗಿದ್ದು, ಎಷ್ಟು ಹೊತ್ತಾದರೂ ಸಹೋದರಿ ಹೊರಗೆ ಬಾರದೇ ಇದ್ದುದರಿಂದ ಗಾಬರಿಗೊಂಡು ಯುವಕ, ಕೊನೆಗೆ ಬಾತ್ ರೂಂ(Bath room )ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆದರೆ ಬಾತ್ ರೂಮ್ ನಲ್ಲಿ ಯುವತಿಯ ಆತ್ಮಹತ್ಯೆ ಪತ್ರವನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಕುತ್ತಿಗೆ ಮತ್ತು ಮಣಿಕಟ್ಟಿನ ಮೇಲೆ ಚಾಕುವಿನ ಗಾಯಗಳನ್ನು ಪೊಲೀಸರು(police) ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: Covaxin ನಿಂದ ಕೂಡ ಇದ್ಯಂತೆ ಎಫೆಕ್ಟ್! ಇಲ್ಲಿದೆ ನೋಡಿ ಬಿಗ್ ಶಾಕ್

ಹೆಚ್ಚಿನ ರಕ್ತಸ್ರಾವದಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಆರಂಭದಲ್ಲಿ ಕಂಡುಕೊಂಡರು. ಆದರೆ ಇದು ಆತ್ಮಹತ್ಯೆಯೇ(Sucid) ಅಥವಾ ಕೊಲೆಯೇ(Murder) ಎಂದು ತಿಳಿಯಲು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯೂ ತುಂಬಾ ಧೈರ್ಯವಂತೆಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವಳಲ್ಲ ಎಂದು ತಾಯಿ ಹೇಳಿದ್ದಾರೆ. ಮಗಳು ಪ್ರತಿ ಸಣ್ಣ ವಿಷಯವನ್ನೂ ನನ್ನ ಬಳಿ ಹೇಳುತ್ತಿದ್ದಳು ಎಂದು ಮೃತ ಯುವತಿಯ ತಾಯಿ ತಿಳಿಸಿದ್ದಾರೆ. ಇದೀಗ ಪೊಲೀಸರು(Police)ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.