Health Tips: ನೀವು ಊಟದ ಮೊದಲು ಮತ್ತು ನಂತರ ಚಹಾ/ ಕಾಫಿಯನ್ನು ಕುಡಿಯುತ್ತೀರಾ : ನಿಮಗೆ ಖಂಡಿತ ಅಪಾಯ ಕಾದಿದೆ
Health Tips: ಸಾಮಾನ್ಯವಾಗಿ ಅನೇಕರಿಗೆ ಪ್ರತಿನಿತ್ಯ ಎದ್ದ ತಕ್ಷಣ ಟೀ(Tea) ಅಥವಾ ಕಾಫಿ (coffee)ಕುಡಿಯುವ ಅಭ್ಯಾಸವಿರುತ್ತದೆ. ಇನ್ನು ಕೆಲವರಿಗೆ ಬೆಳಗಿನ ಉಪಹಾರದ ಬಳಿಕ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಹಾಗಾದರೆ ಈ ರೀತಿ ಊಟದ ಬಳಿಕ ಕಾಫಿ(coffee) ಕುಡಿಯುವುದು ಎಷ್ಟರ ಮಟ್ಟಿಗೆ ಸರಿ? ಈ ರೀತಿ ಕುಡಿಯುವುದರಿಂದ ಏನಾದರೂ ತೊಂದರೆಗಳಿವೆಯೇ? ಎಂಬ ಅನುಮಾನ ನಿಮ್ಮಲ್ಲಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.
ಇದನ್ನೂ ಓದಿ: Indian Railway: ಒಂದು ರೈಲ್ವೆ ಟಿಕೆಟ್ – ಬರೀ ಪ್ರಯಾಣ ಮಾತ್ರವಲ್ಲ, ಇಷ್ಟೆಲ್ಲಾ ಫ್ರೀ ಸೇವೆಗಳು ನಿಮ್ಮದಾಗುತ್ತೆ !!
ಕೆಲವರು ದಿನಕ್ಕೆ 3 ಅಥವಾ 4 ಟೀ, ಕಾಫಿ(coffee) ಕುಡಿಯುತ್ತಾರೆ. ಆದರೆ ಕೆಲವರು ಊಟಕ್ಕೆ ಮುಂಚೆ ಮತ್ತು ನಂತರ ಚಹಾ ಮತ್ತು ಕಾಫಿ(coffee) ಕುಡಿಯುತ್ತಾರೆ. ಅಂಥವರಿಗೆ ಶಾಕ್ ಕೊಟ್ಟಿದೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಐಸಿಎಂಆರ್(ACMR) ಇತ್ತೀಚೆಗೆ ಭಾರತೀಯರಿಗೆ 17 ರೀತಿಯ ಆಹಾರ ಪದಾರ್ಥಗಳ ಸೇವನೆ ಕುರಿತು ಸೂಚನೆ ಹೊರಡಿಸಿದೆ. ಊಟದ ಮೊದಲು ಮತ್ತು ನಂತರ ಚಹಾ ಮತ್ತು ಕಾಫಿ(coffee) ಕುಡಿಯುವುದು ಅಪಾಯಕಾರಿ ಎಂದು ಹೇಳಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ – ಎನ್ಐಎನ್ ರಿಸರ್ಚ್ ಡಿಪಾರ್ಟ್ಮೆಂಟ್ನೊಂದಿಗಿನ ವೈದ್ಯಕೀಯ ಸಮಿತಿಯು, ಊಟದ ಸಮಯದಲ್ಲಿ ಚಹಾ ಮತ್ತು ಕಾಫಿ ಕುಡಿಯುವ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: Health Care: ದೇಹದ ಈ ಭಾಗದಲ್ಲಿ ಬೆಳೆಯುವ ಕೂದಲು ಬೇಗ ಬಿಳಿಯಾಗುತ್ತೆ ಅಂತೆ! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ದೇಶದಲ್ಲಿ ಅನೇಕ ಜನರು ಆಗಾಗ್ಗೆ ಚಹಾ ಮತ್ತು ಕಾಫಿ(coffee) ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ ಎಂದು ICMR ಕಂಡುಹಿಡಿದಿದೆ. ಆದರೆ, ಇತ್ತೀಚಿಗೆ ಇವುಗಳನ್ನು ಊಟಕ್ಕೆ ಮುನ್ನ ಅಥವಾ ನಂತರ ಸೇವಿಸುವುದು ತುಂಬಾ ಅಪಾಯಕಾರಿ ಎಂದು ತೀವ್ರ ಎಚ್ಚರಿಕೆಯನ್ನು ನೀಡಿದೆ. ಈ ಕೆಫೀನ್ ಮಾನವನ ಮೆದುಳಿನ ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಎಂದು ICMR ಸ್ಪಷ್ಟಪಡಿಸಿದೆ. ಈ ಸಮಯದಲ್ಲಿ ಚಹಾ(Tea) ಮತ್ತು ಕಾಫಿಯನ್ನು(coffee) ಸಂಪೂರ್ಣವಾಗಿ ನಿಲ್ಲಿಸಲು, ಹೇಳಲಾಗುವುದಿಲ್ಲ. ಆದರೆ ಅವುಗಳಲ್ಲಿರುವ ಕೆಫೀನ್ ಅಂಶದಿಂದ ಸರಿಯಾದ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ.
ನೀವು ಎಷ್ಟು ಕಡಿಮೆ ಚಹಾ ಮತ್ತು ಕಾಫಿ(coffee) ಕುಡಿಯುತ್ತೀರಿ, ಅದು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ಹೆಚ್ಚು ಮುಖ್ಯವಾಗಿ, ಚಹಾ ಮತ್ತು ಕಾಫಿಯನ್ನು ಊಟದ ಮೊದಲು ಅಥವಾ ನಂತರ ಸೇವಿಸಬಾರದು.
ನೀವು ಕಾಫಿ(coffee) / ಟೀ(tea) ಕುಡಿಯಲು ಬಯಸಿದರೆ, ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಒಂದು ಗಂಟೆಯ ನಂತರ ಅದನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಚಹಾ ಮತ್ತು ಕಾಫಿಯಂತಹ(coffee) ಪಾನೀಯಗಳು ಟ್ಯಾನಿನ್ಗಳನ್ನು ಒಳಗೊಂಡಿರುತ್ತವೆ. ಇವುಗಳು ಮಾನವ ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ತಡೆಗೋಡೆಯಾಗಿ ನಿಲ್ಲುತ್ತವೆ. ಇದರಿಂದ ಕಬ್ಬಿಣಾಂಶದ ಕೊರತೆ ಉಂಟಾಗಿ ರಕ್ತಹೀನತೆಯಂತಹ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ ಎಂದು ಸಂಸ್ಥೆ ತಿಳಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ(Blood pressure)ಮತ್ತು ಹೃದಯ ಸಂಬಂಧಿ(Heart Diseases) ಕಾಯಿಲೆಗಳು ಬರಬಹುದು ಎಂದು ಐಸಿಎಂಆರ್ ಎಚ್ಚರಿಸಿದೆ.
ICMR ತನ್ನ ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿಗಳಲ್ಲಿ ಹಾಲು ಇಲ್ಲದೆ ಚಹಾವನ್ನು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುವುದು ಮತ್ತು ಪರಿಧಮನಿಯ ಕಾಯಿಲೆ ಮತ್ತು ಕ್ಯಾನ್ಸರ್(Cancer) ನಂತಹ ಕಾಯಿಲೆಗಳನ್ನು ತಡೆಗಟ್ಟುವಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಿದೆ. ಆಹಾರ ಪದಾರ್ಥಗಳಲ್ಲಿ ಎಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಕಡಿಮೆ ಮಾಡಲು, ಹಣ್ಣುಗಳು(Fruits), ತರಕಾರಿಗಳು(Vegetables), ಧಾನ್ಯಗಳು, ಮಾಂಸ ಮತ್ತು ಸಮುದ್ರಾಹಾರವನ್ನು ಸೇವಿಸಲು ಐಸಿಎಂಆರ್ ಈಗಾಗಲೇ ಶಿಫಾರಸ್ಸು ಮಾಡಿದೆ.