Crime: ಎಣ್ಣೆ ಸಾಲ ಕೊಡಲ್ಲ ಅಂದ ಬಾರ್ ಮಾಲೀಕ, ಮನಸೋ ಇಚ್ಚೆ ಹಲ್ಲೆ, ಕುಡುಕ ಆರೋಪಿ ಅರೆಸ್ಟ್ 

Share the Article

 

Crime: ಮದ್ಯದಂಗಡಿಯಲ್ಲಿ (Bar) ಎಣ್ಣೆ ಸಾಲ ಕೊಡದೆ ಹೋದ ಕಾರಣಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಕುಡಿಯಲು ಎಣ್ಣೆ ಬಾರ್ ಶಾಪ್ ಮಾಲೀಕರಾದ ಮಲ್ಲಿಕಾರ್ಜುನ ಗೌಡರ ಮೇಲೆ ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Pooja Hegde: ಮದುವೆ ಆಗದೆ ತಾಯಿಯಾಗಲಿದ್ದಾರಾ ಪೂಜಾ ಹೆಗ್ಡೆ ? : ಪೂಜಾ ಹೆಗ್ಡೆ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತಾ? : ಇಲ್ಲಿ ನೋಡಿ

ಎಣ್ಣೆ ಗಿರಾಕಿ ಮಾಡಿರುವ ಹಲ್ಲೆ ದೃಶ್ಯಗಳು ಆ ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆರೋಪಿಯು ಪದೇ ಪದೇ ಬಾರ್ ಶಾಪ್‌ನಲ್ಲಿ ಸಾಲ ಕೇಳುತ್ತಿದ್ದ. ಮೊನ್ನೆ ಮದ್ಯದಂಗಡಿ ಮಾಲೀಕರು ಆತನಿಗೆ ಸಾಲ ಕೊಡಲ್ಲ ಎಂದಿದ್ದಕ್ಕೆ ಕಿರಿಕ್ ತೆಗೆದಿದ್ದಾನೆ. ನಂತರ ಬಾರ್ ಮಾಲೀಕರಿಗೆ ಸಾಕಷ್ಟು ಬಾರಿಸಿದ್ದಾನೆ. ಮೇ 9 ರಂದು ನಡೆದಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Bad Dreams: ದಿಂಬಿನ ಕೆಳಗೆ ಇವುಗಳನ್ನು ಇಟ್ಟು ಮಲಗಿದರೆ ಸಾಕು, ಕೆಟ್ಟ ಕನಸುಗಳು ಮಾಯವಾಗುತ್ತೆ!

ಹಲ್ಲೆಗೊಳಗಾಗಿರೋ ಮಲ್ಲಿಕಾರ್ಜುನಗೌಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿ ಚಾಂದ್ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave A Reply

Your email address will not be published.