Cleaning Tips: ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸುಲಭ ಪರಿಹಾರ ಇಲ್ಲಿದೆ!
Cleaning Tips: ಆಹಾರವನ್ನು ತೆರೆದಿಟ್ಟಲ್ಲಿ ಅದರ ಮೇಲೆ ನೊಣಗಳು ಕುಳಿತುಕೊಳ್ಳುವುದು ಖಂಡಿತಾ. ಆ
ಆಹಾರವನ್ನು ಸೇವಿಸುವುದರಿಂದ ಜನರು ವಿವಿಧ ಖಾಯಿಲೆ ಅಂಟಿಕೊಂಡು ಕೊನೆಗೆ ದೊಡ್ಡ ಅಪಾಯದಲ್ಲಿ ಸಿಲುಕುವುದು ಇನ್ನೂ ಖಚಿತ. ಹೌದು, ನೊಣ ಟೈಫಾಯಿಡ್, ಭೇದಿ, ಕಾಲರಾ, ಕ್ಷಯ ಸೇರಿದಂತೆ ವಿವಿಧ ರೋಗ ಹರಡಲು ಕಾರಣವಾಗುತ್ತವೆ. ನೊಣವನ್ನು ರೋಗಾಣುಗಳ ಹೊತ್ತು ತರುವ ಒಂದು ರಾಕ್ಷಸ ಎಂದರೆ ತಪ್ಪಾಗಲಾರದು.
ಮುಖ್ಯವಾಗಿ ನಿಮ್ಮ ಅಡುಗೆ ಮನೆ ಅಶುದ್ಧವಾಗಿದ್ದರೆ ನೊಣಗಳು ಬರುತ್ತವೆ. ಇಂತಹ ನೋಣಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಎಷ್ಟೋ ಸ್ಪ್ರೇ ಬಾಟಲಿಗಳು ಲಭ್ಯವಿವೆ. ಆದರೆ ಇವುಗಳನ್ನು ಬಳಸಿದರೂ, ಕೆಲವು ಗಂಟೆಗಳ ಬಳಿಕ ಮತ್ತೆ ನೊಣಗಳು ನಿಮ್ಮ ಮನೆ ಸುತ್ತ ಹಾರಾಡುತ್ತಿರುತ್ತದೆ. ಅಂತಹ ಸ್ಪ್ರೇ ಮದ್ದಿನಿಂದ ಆರೋಗ್ಯ ಮತ್ತಷ್ಟು ಕೆಡುವುದೇ ಹೆಚ್ಚು. ಅದಕ್ಕಾಗಿ ಇಲ್ಲಿ ತಿಳಿಸುವ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿ. ಇದರಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಮತ್ತು ಹಣವು ಉಳಿತಾಯ ಆಗುತ್ತೆ.
ಇದನ್ನೂ ಓದಿ: PM Modi: ನಮ್ಮ ಪಕ್ಕದ ಮನೆಯೇ ಮುಸ್ಲಿಮರದ್ದು, ಈದ್ ದಿನ ಅವರ ಮನೆಯಲ್ಲೇ ನಮ್ಮ ಊಟ – ಪ್ರಧಾನಿ ಮೋದಿ
ಪುದೀನಾ ಹಾಗೂ ತುಳಸಿ: ತುಳಸಿ ಎಲೆಗಳು ಮತ್ತು ಪುದೀನ ಎಲೆಗಳನ್ನು ಸಮನಾಗಿ ತೆಗೆದುಕೊಂಡು ರುಬ್ಬಿ ಪೇಸ್ಟ್ ಮಾಡಿ. ಈಗ ಅವುಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ, ನೊಣಗಳು ಕಾಣಿಸಿಕೊಂಡಾಗ ಸ್ಪ್ರೇ ಮಾಡಿದರೆ ಸಾಕು ನೊಣ ಮಾಯ.
ಪೇಪರ್ ಟವೆಲ್: ಯಾವುದೇ ದ್ರವವನ್ನು ಮಡಕೆ ಅಥವಾ ಹೂದಾನಿಗಳಲ್ಲಿ ಇರಿಸಿ, ಅದರ ಬಾಯಿಯ ಮೇಲೆ ಕಾಗದದ ಟವಲ್ ಅನ್ನು ಹಾಕಿದರೆ ನೊಣಗಳ ಅದಕ್ಕೆ ಅಂಟಿಕೊಳ್ಳುತ್ತದೆ.
ಲವಂಗ: ನಿಂಬೆ ಅಥವಾ ಮೂಸಂಬಿ ಅಥವಾ ಸೇಬಿನಂತಹ ಸಿಟ್ರಸ್ ಹಣ್ಣುಗಳನ್ನು ತೆಗೆದುಕೊಂಡು ಅದಕ್ಕೆ 8-10 ಲವಂಗಗಳನ್ನು ಸಿಕ್ಕಿಸಿ. ನೊಣಗಳು ಓಡಾಡುವ ಸ್ಥಳದಲ್ಲಿ ಇರಿಸಿ. ಲವಂಗದ ಪರಿಣಾಮದಿಂದಾಗಿ, ನೊಣಗಳು ಮನೆಯಿಂದ ಹೊರಹೋಗುತ್ತವೆ.
ಉಪ್ಪು: ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ನೀರನ್ನು ಕುದಿಸಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅಡುಗೆಮನೆಯ ಮೂಲೆ ಮೂಲೆಯಲ್ಲೂ ಈ ನೀರನ್ನು ಸಿಂಪಡಿಸಿ ಇದು ಸುಲಭ ಉಪಾಯವು ಹೌದು .
ಕಾಳುಮೆಣಸು: ಒಂದು ಲೋಟ ಹಾಲನ್ನು ಸ್ವಲ್ಪ ಕಾಳುಮೆಣಸು ಮತ್ತು ಸಕ್ಕರೆಯೊಂದಿಗೆ ಸ್ವಲ್ಪ ಕುದಿಸಿ, ನಂತರ ಮಿಶ್ರಣವನ್ನು ಅಡುಗೆಮನೆಯ ಮೂಲೆ ಮೂಲೆಗೆ ಹಾಕಿ. ಈ ಮಿಶ್ರಣ ಹಾಲು ಇದ್ದರೆ ಅಡುಗೆ ಮನೆಗೆ ನೊಣ ಬರುವುದಿಲ್ಲ.
ವಿನೆಗರ್: ಸ್ವಲ್ಪ ವಿನೆಗರ್ ತೆಗೆದುಕೊಂಡು ಪ್ಲಾಸ್ಟಿಕ್ ಬೌಲ್ನಲ್ಲಿ ಹಾಕಿಕೊಳ್ಳಿ. ನಂತ್ರ ನೊಣಗಳು ಒಳಗೆ ಬರಲು ಬೌಲ್ನ ಬಾಯಿಗೆ ಚೀಲದಲ್ಲಿ ಸಣ್ಣ ರಂಧ್ರಗಳನ್ನು ಇರಿಸಿ, ಅದಾದ ನಂತರ ನೊಣ ಹೊರಬರಲು ಸಾಧ್ಯವಾಗುವುದಿಲ್ಲ. ಈ ಉಪಾಯದಿಂದ ನೊಣಗಳಿಂದ ಮುಕ್ತಿ ಪ
ಡೆಯಿರಿ.