Health Tip: ಮೀನು ಇಷ್ಟ ಅಂತಾ ಸಿಕ್ಕಾಪಟ್ಟೆ ತಿಂತೀರಾ? ಹಾಗಿದ್ರೆ ಈ ವಿಷ್ಯ ತಿಳಿದಿರಲಿ!
Health Tips: ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮೀನು ಪ್ರಮುಖ ಆಹಾರವಾಗಿದ್ದು, ಮೀನು ಸಾರು, ಮೀನು ಫ್ರೈ, ಮೀನು ಪುಳಿಮುಂಚಿ, ಮೀನಿನ ಬಿರಿಯಾನಿ ಈ ಖಾದ್ಯಗಳು ಇದ್ರೆ ಸಾಕು ಬೇರೇನು ಬೇಡ. ಮೀನು ರುಚಿ ಮಾತ್ರವಲ್ಲ, ಇದು ಆರೋಗ್ಯಕ್ಕೂ ಉತ್ತಮ. ಅದರಲ್ಲೂ ಮಾಂಸಾಹಾರಿಗಳಿಗೆ ಮೀನು ಪಂಚಪ್ರಾಣ. ಹಾಗಾದ್ರೆ ಮೀನು ತಿಂದ್ರೆ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ (Health Tips) ಮತ್ತು ಆರೋಗ್ಯಕ್ಕೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ.
ಇದನ್ನೂ ಓದಿ: Dream Astrology: ಈ 5 ಕನಸುಗಳು ನಿಮಗೆ ಬಿದ್ದರೆ, ನಿಮ್ಮ ಲೈಫೇ ಚೇಂಜ್!
ಹೃದಯದ ಆರೋಗ್ಯಕ್ಕೆ ಮೀನು ದಿ ಬೆಸ್ಟ್ ಅಂತಲೇ ಹೇಳಬಹುದು. ಅದರಲ್ಲೂ ಸಾಲ್ಮನ್, ಟ್ಯೂನ್ ಮತ್ತು ಮ್ಯಾಕೆರೆಲ್‌ನಂತಹ ಕೊಬ್ಬಿನಾಮ್ಲಗಳಿರುವ ಮೀನುಗಳಲ್ಲಿ ಒಮೆಗಾ 3 ಅಂಶವಿರುತ್ತದೆ. ಇವು ಇಪಿಎ ಹಾಗೂ ಡಿಎಚ್‌ಎಗಳಲ್ಲಿ ಸಮೃದ್ಧವಾಗಿದೆ. ಈ ಕೊಬ್ಬಿನಾಂಶವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಅಂಶವನ್ನು ಕಡಿಮೆ ಮಾಡುವ ಮೂಲಕ ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತದೆ. ಮೀನು ತಿನ್ನುವುದರಿಂದ ಹೃದ್ರೋಗ, ಪಾರ್ಶ್ವವಾಯು ಮತ್ತು ಆರಿಥ್ಮಿಯಾದಂತಹ ಅಪಾಯಗಳು ಕಡಿಮೆಯಾಗುತ್ತದೆ. ಜೊತೆಗೆ ಮೆದುಳಿನ ಶಕ್ತಿ ಹೆಚ್ಚುತ್ತದೆಯಂತೆ. ಒಮೆಗಾ 3 ಅಂಶ ವು ನೆನಪಿನ ಶಕ್ತಿ, ಕಲಿಕೆ, ಗಮನಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Viral Video: ಬಸ್ಸಿನಲ್ಲಿ ಜೋಡಿಗಳ ರಾಸಲೀಲೆ – ಕಿಸ್ಸಿಂಗ್, ಟಚ್ಚಿಂಗ್ ನೋಡಿ ಪ್ರಯಾಣಿಕರು ಶಾಕ್ !!
ಇನ್ನು ಮೂಳೆಗಳ ಬಲವರ್ಧನೆ ಮತ್ತು ದೃಷ್ಟಿ ಸುಧಾರಣೆಯಾಗಲು ಸಹಾಯ ಮಾಡುತ್ತದೆ. ಹೌದು, ಮೀನುಗಳು ವಿಟಮಿನ್ ಡಿಯ ನೈಸರ್ಗಿಕ ಮೂಲವಾಗಿದೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಮತ್ತು ಮೂಳೆಯ ಆರೋಗ್ಯಕ್ಕೆ ಬೆಸ್ಟ್ . ಇದು ವಿಟಮಿನ್ ಎ ಅನ್ನು ಕೂಡ ಹೊಂದಿದ್ದು, ಇದು ದೃಷ್ಟಿ ಸುಧಾರಿಸಲು ಉತ್ತಮ. ಇದು ಕಾರ್ನಿಯಾದ ಆರೋಗ್ಯವನ್ನು ಕಾಪಾಡುತ್ತದೆ.
ಮುಖ್ಯವಾಗಿ ಮೀನಿನ ಸೇವನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮೀನಿನಲ್ಲಿ ಸೆಲೇನಿಯಂ ಅಂಶ ಸಮೃದ್ಧವಾಗಿದ್ದು, ಇದು ದೇಹದ ರೋಗನಿರೋಧಕ ರಕ್ಷಣಾ ಕಾರ್ಯಕ್ಕೆ ಪ್ರಮುಖವಾಗಿದೆ. ಮೀನು ಲೀನ್ ಪ್ರೊಟೀನ್‌ಗಳ ಉತ್ತಮ ಮೂಲವಾಗಿದೆ. ಇದು ಅಂಗಾಂಗಗಳನ್ನು ಬಲಪಡಿಸುತ್ತದೆ. ಬಿ ಜೀವಸತ್ವಗಳನ್ನು ಸಹ ಒದಗಿಸುತ್ತದೆ. ಶಕ್ತಿಯ ಚಯಾಪಚಯ ಮತ್ತು ನರಮಂಡಲದ ಕಾರ್ಯವನ್ನು ಬೆಂಬಲಿಸುತ್ತದೆ.
ಆದ್ರೆ ಮೀನು ಸೇವನೆ ಅತಿಯಾದ್ರೂ ಒಳಿತಲ್ಲ ನೆನಪಿರಲಿ. ಹೌದು, ಮೀನಿನ ಅತಿಯಾದ ಪಾದರಸ ಅಂಶದಿಂದ ತೊಂದರೆ ಉಂಟಾಗಬಹುದು. ಕಿಂಗ್ ಮ್ಯಾಕೆರೆಲ್, ಕತ್ತಿಮೀನು ಮತ್ತು ಟೈಲ್ಫಿಶ್‌ನಂತಹ ಮೀನುಗಳಲ್ಲಿ ಪಾದರಸದ ಅಂಶ ಹೆಚ್ಚಿರುತ್ತದೆ. ಆದ್ದರಿಂದ ನರಮಂಡಲದ ಸಮಸ್ಯೆಗಳು, ಮಕ್ಕಳಲ್ಲಿ ಬೆಳವಣಿಗೆಯ ಸಮಸ್ಯೆಗಳು ಮತ್ತು ಅರಿವಿನ ಕುಸಿತಕ್ಕೆ ಕಾರಣವಾಗಬಹುದು.
ಅಲ್ಲದೇ ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಮೀನಿನ ಅಲರ್ಜಿಯು ಕೆಲವೊಮ್ಮೆ ಇದು ಗಂಭೀರ ಅಲರ್ಜಿಗೆ ಕಾರಣವಾಗಬಹುದು. ಇದರ ರೋಗಲಕ್ಷಣಗಳು ಚರ್ಮದ ಕಿರಿಕಿರಿಯಿಂದ ಮಾರಣಾಂತಿಕ ಅನಾಫಿಲ್ಯಾಕ್ಸಿಸ್‌ವರೆಗೆ ಇರಬಹುದು.
ಇನ್ನು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಮೀನಿನ ಸೇವನೆಯ ಬಗ್ಗೆ ಜಾಗರೂಕರಾಗಿರಬೇಕು. ಗರ್ಭಿಣಿ ಮಹಿಳೆಯರಿಗೆ ವಾರಕ್ಕೆ ಸರಾಸರಿ 4.2 ಔನ್ಸ್ ಮತ್ತು ಹಾಲುಣಿಸುವ ಮಹಿಳೆಯರಿಗೆ ವಾರಕ್ಕೆ 7 ಔನ್ಸ್ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಒಟ್ಟಿನಲ್ಲಿ ಪ್ರತಿದಿನ ಮೀನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದರೂ ಕೂಡ ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಹೆಚ್ಚು ಮೀನು ತಿನ್ನುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಡಾ. ಬಕ್ಷಿ ಹೇಳುತ್ತಾರೆ.