Vijay Devarakonda: ದ್ವಿಪಾತ್ರದಲ್ಲಿ ಮಿಂಚಲಿರುವ ನಟ ವಿಜಯ್ ದೇವರಕೊಂಡ; ನಾಯಕಿಯಾಗಿ ರಶ್ಮಿಕಾ ಮಂದಣ್ಣ?
Vijay Devarakonda: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಮೊದಲ ಬಾರಿಗೆ ಡಬಲ್ ರೋಲ್‌ನಲ್ಲಿ ಮಿಂಚಲಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ. ಹೌದು, ವಿಜಯ್ ಅವರು ತಮ್ಮ 14ನೇ ಚಿತ್ರಕ್ಕೆ (VD 14) ಮಥತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ.
ಇದನ್ನೂ ಓದಿ: Prajwal Revanna: ಸಂಸದನ ನಡೆಯಲ್ಲಿ ಇನ್ನಷ್ಟು ಟ್ವಿಸ್ಟ್! ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ?
ಟಾಕ್ಸಿವಾಲಾ ನಿರ್ದೇಶಕರಾದ ರಾಹುಲ್ ಅವರ ಜೊತೆ ವಿಜಯ್ ದೇವರಕೊಂಡ ಮತ್ತೊಮ್ಮೆ ತೆರೆ ಹಂಚಲಿದ್ದಾರೆ. ವಿಜಯ್ ದೇವರಕೊಂಡ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, 1854-78 ರ ಕಾಲಘಟ್ಟದ ಕಥೆ ಇದಾಗಿದ್ದು, ವಿಜಯ್ ಅವರು ಇದರಲ್ಲಿ ತಂದೆ-ಮಗನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Karnataka BJP: ರಾಜ್ಯ ಬಿಜೆಪಿಗೆ ಹೆಚ್ಚಿದ ಆತಂಕ – ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದು ಖಾಲಿ ಇಷ್ಟೇ ಸೀಟಾ?!
ಈ ಚಿತ್ರದ ಪೋಸ್ಟರ್ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, 120 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಲಿದೆ ಈ ಸಿನಿಮಾ ಎನ್ನಲಾಗಿದೆ. ವಿಜಯ್ ಸಕಲ ಸಿದ್ಧತೆಯನ್ನು ತಮ್ಮ ಡಬಲ್ ರೋಲ್‌ಗಾಗಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗಿದೆ. ಸದ್ಯದಲ್ಲೇ ಚಿತ್ರದ ನಾಯಕಿ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ.