Sperms: ವೀರ್ಯ ಸೇವನೆಯಿಂದ ಹೀಗೆಲ್ಲಾ ಆಗುತ್ತಾ?

Sperms: ವೀರ್ಯ ದೇಹಕ್ಕೆ ಯಾವ ರೀತಿ ಪರಿಣಾಮ ಬೀರುತ್ತವೆ ಅನ್ನೋದು ಇನ್ನೂ ಕೂಡಾ ಗೊಂದಲದಲ್ಲಿದೆ. ಹೌದು, ಓರಲ್ ಸೆಕ್ಸ್ (Oral Sx) ಮತ್ತು ವೀರ್ಯದ (Sperms) ಬಗ್ಗೆ ಕೆಲವು ತಪ್ಪು ಕಲ್ಪನೆಗೆ (Myths) ಕಾರಣವಾಗಿವೆ.
ಓರಲ್ ಸೆಕ್ಸ್ ಸಮಯದಲ್ಲಿ ವೀರ್ಯ (swallowing sperm) ಸೇವನೆ ಮಾಡುವವರು ಇದ್ದಾರೆ. ಇದರಿಂದ ದೇಹಕ್ಕೆ ಪೌಷ್ಟಿಕವಾಗಿ ಕೂಡಾ ಪರಿಣಮಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ವೀರ್ಯ ಬಾಯಿಯ ಮೂಲಕ ದೇಹದೊಳಕ್ಕೆ ಹೋದರೆ ನೀವು ಗರ್ಭಿಣಿಯಾಗಬಹುದು ಎಂಬ ಕಲ್ಪನೆ ಕೂಡಾ ಇದೆಯಂತೆ. ಹಾಗಾದ್ರೆ ಈ ಕಲ್ಪನೆ ಯಾಕೆ ಬಂತು ನೋಡೋಣ.

ಸ್ತ್ರೀರೋಗ ತಜ್ಞರು ಹೇಳುವಂತೆ, ವೀರ್ಯವು ಬಾಯಿಗೆ ಹೋದರೆ, ಅದರಿಂದ ಯಾವುದೇ ಪ್ರಯೋಜನ ಅಥವಾ ಹಾನಿ ಎರಡೂ ಇಲ್ಲ. ನೀವು ವೀರ್ಯವನ್ನು ಹೊರ ಹಾಕಲು ಬಯಸುತ್ತೀರಾ ಅಥವಾ ನುಂಗಲು ಬಯಸುತ್ತೀರಾ ಎಂಬುದು ವೈಯಕ್ತಿಕ ಆಯ್ಕೆ. ಆದರೆ ಸಂಗಾತಿಯು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ, ಈ ಪರಿಸ್ಥಿತಿಯಲ್ಲಿ ವೀರ್ಯ ಸೇವಿಸುವುದು ಹಾನಿಕಾರಕ. ಹಾಗೆ ಮಾಡುವುದರಿಂದ ಎಸ್ಟಿಐ (STI) ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಮೌಖಿಕ ಲೈಂಗಿಕತೆಯಲ್ಲಿ ಕಾಂಡೋಮ್ (Condom) ಬಳಕೆ ಮಾಡೋದು ಮುಖ್ಯ.

ಇದನ್ನೂ ಓದಿ: Gastrointestinal Disease: ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ: ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ವಿಶೇಷ ಕ್ರಮ ಜಾರಿ!

ಇನ್ನು ವೀರ್ಯ ಸೇವನೆಯಿಂದ ಯಾವುದೇ ಮಹಿಳೆ ಗರ್ಭಿಣಿಯಾಗುವುದಿಲ್ಲ (pregnant). ಯಾಕೆಂದರೆ ಜೀರ್ಣಾಂಗ ವ್ಯವಸ್ಥೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಪರಸ್ಪರ ನೇರ ಸಂಪರ್ಕವನ್ನು ಹೊಂದಿಲ್ಲ, ಆದ್ದರಿಂದ ನೀವು ವೀರ್ಯ ಸೇವಿಸಿದರೆ, ಅದು ಜೀರ್ಣಕಾರಿ ಪ್ರಕ್ರಿಯೆಯಿಂದ ಹೊರಬರುತ್ತೆ ಅಷ್ಟೇ.

ಇನ್ನು ಕೆಲವರ ಪ್ರಕಾರ ವೀರ್ಯ ದೇಹಕ್ಕೆ ಪೋಷಣೆ ನೀಡುತ್ತದೆ ಎಂಬ ಕಲ್ಪನೆ ಇದೆ. ವೀರ್ಯದಲ್ಲಿ ಅಗತ್ಯ ಪ್ರೋಟೀನ್ (protien) ಅಂಶವನ್ನು ಹೊಂದಿರುತ್ತದೆ. ಹಾಗಂತ ಇದು ದೇಹಕ್ಕೆ ಅಗತ್ಯ ಪೋಷಕಾಂಶ ನೀಡಲ್ಲ. ಕೆಲವರಿಗೆ ಇದರಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಇದೆ. ಇನ್ನು ವೀರ್ಯ ಸೇವನೆಯಿಂದ ಎಸ್ ಟಿಐ ಹರಡಬಹುದು. ಅಲ್ಲದೇ ಹರ್ಪಿಸ್, ಸಿಫಿಲಿಸ್ ಮತ್ತು ಗೊನೊರಿಯಾವನ್ನು ಪಡೆಯಬಹುದು. ಆದ್ದರಿಂದ ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ.

ಇದನ್ನೂ ಓದಿ: ಬಿಜೆಪಿ ಗೆದ್ದರೆ ಅಮಿತ್ ಶಾ ಪ್ರಧಾನ ಮಂತ್ರಿ? ಏನಿದು ಕೊನೇ ಗಳಿಗೆಯಲ್ಲಿನ ಬದಲಾವಣೆ?

ಇನ್ನು ವೀರ್ಯವು ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಎಂಬ ಬಗ್ಗೆ ಹೇಳುವುದಾದ್ರೆ, ವೀರ್ಯವು ನಿಮ್ಮ ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯ ಸುಧಾರಿಸಲು ನೀವು ಇದನ್ನು ಸೇವಿಸುತ್ತಿದ್ದರೆ, ಅದು ಅಲರ್ಜಿ ಪ್ರತಿಕ್ರಿಯೆಗಳು ಮತ್ತು ಎಸ್ಟಿಐ ಸಮಸ್ಯೆ ತಂದೊಡ್ಡುತ್ತದೆ. ಮುಖ್ಯವಾಗಿ ಆರೋಗ್ಯಕರ ಚರ್ಮಕ್ಕಾಗಿ, ಹಣ್ಣುಗಳು, ತರಕಾರಿಗಳು, ಬೀಜಗಳು, ದ್ವಿದಳ ಧಾನ್ಯಗಳು ಮುಂತಾದ ಅನೇಕ ಆರೋಗ್ಯಕರ ಆಹಾರ ಸೇವಿಸಿ.

Leave A Reply

Your email address will not be published.