Amith Shah: ಮೋದಿಗೆ 75 ವರ್ಷ – ಮುಂದಿನ ಪ್ರಧಾನಿ ಬಗ್ಗೆ ಅಮಿತ್ ಶಾ ಹೇಳಿದ್ದೇನು?
Amith Shah: ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ(Narendra Modi) ಬದಲು ಅಮಿತ್ ಶಾ(Amith Shah) ಅವರು ದೇಶದ ಪ್ರಧಾನಮಂತ್ರಿಯಾಗುತ್ತಾರೆ. ಯಾಕೆಂದರೆ ಬಿಜೆಪಿ(BJP) ನಿಯಮದ ಪ್ರಕಾರ 75 ವರ್ಷ ಆದವರಿಗೆ ಅಧಿಕಾರ ನೀಡುವುದಿಲ್ಲ. ಹೀಗಾಗಿ ಮೋದಿ ಬದಲು ಶಾ ಪ್ರಧಾನಿ ಆಗುತ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಈ ಬೆನ್ನಲ್ಲೇ ಕೇಜ್ರಿವಾಲ್ ಹೇಳಿಕೆಗೆ ಅಮಿತ್ ಶಾ ಟಾಂಗ್ ನೀಡಿದ್ದಾರೆ.
ಹೌದು, ಅರವಿಂದ್ ಕೇಜ್ರಿವಾಲ್ ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿಗೆ 75 ವರ್ಷಗಳು ಆದರೂ ಕೂಡ ಅವರೇ ನಮ್ಮ ದೇಶದ ಪ್ರಧಾನಿ ಆಗುತ್ತಾರೆ. ಮೋದಿಯವರು 2029ರ ವರೆಗೆ ಪ್ರಧಾನಿ ಆಗಿ ತಮ್ಮ ಮೂರನೇ ಅವಧಿಯನ್ನು ಸಂಪೂರ್ಣವಾಗಿ ಮುಗಿಸುತ್ತಾರೆ. ಜೊತೆಗೆ ಅವರು ಮುಂದೆಯೂ ನಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Sperms: ವೀರ್ಯ ಸೇವನೆಯಿಂದ ಹೀಗೆಲ್ಲಾ ಆಗುತ್ತಾ?
ಈ ಕುರಿತು ಪ್ರತಿಕ್ರಿಯಿಸಿದ ಶಾ ಅವರು ‘ಮೋದಿಜಿ 75 ನೇ ವರ್ಷಕ್ಕೆ ಕಾಲಿಡುತ್ತಿರುವ ಬಗ್ಗೆ ಸಂತೋಷಪಡುವ ಅಗತ್ಯವಿಲ್ಲ ಎಂದು ನಾನು ಅರವಿಂದ್ ಕೇಜ್ರಿವಾಲ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಹೇಳಲು ಬಯಸುತ್ತೇನೆ. ಮೋದಿಜಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಂವಿಧಾನದಲ್ಲಿ ಬರೆದಿಲ್ಲ, ಅವರು ಮತ್ತೆ ಪ್ರಧಾನಿಯಾಗುತ್ತಾರೆ ಮತ್ತು ಅವಧಿ ಪೂರ್ಣಗೊಳಿಸುತ್ತಾರೆ’ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಹೇಳಿದ್ದೇನು?
ಬಿಜೆಪಿಯವರು ಇಂಡಿಯಾ ಮೈತ್ರಿಕೂಟ ಗೆದ್ದರೆ ಯಾರನ್ನು ಪ್ರಧಾನಿ ಮಾಡುತ್ತೀರಿ ಎಂದು ನಮ್ಮನ್ನು ಕೇಳ್ತಾರೆ. ಆದ್ರೆ, ನನ್ನ ಪ್ರಶ್ನೆ, ಬಿಜೆಪಿ ಗೆಲುವು ಸಾಧಿಸಿದರೆ, ಯಾರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡುತ್ತದೆ? ಯಾಕೆಂದರೆ ಇದೇ ಸೆ.17 ಬಂದ್ರೆ ನರೇಂದ್ರ ಮೋದಿ ಅವರಿಗೆ 75 ವರ್ಷ ಆಗುತ್ತದೆ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ನೀಡುವುದಿಲ್ಲ ಎಂಬ ನಿಯಮವಿದೆ. ಅಂದಮೇಲೆ ಮೋದಿ ಮುಂದಿನ ಬಾರಿಯೂ ಪ್ರಧಾನಿ ಆಗೋದಿಲ್ಲ. ಹಾಗಿದ್ರೆ, ಅವರ ಬದಲಿಗೆ ಅಮಿತ್ ಶಾ ಆಗ್ತಾರೆ ಅನಿಸುತ್ತದೆ ಎಂದು ಬಾಂಬ್ ಸಿಡಿಸಿ ಲೇವಡಿ ಮಾಡಿದ್ದಾರೆ.