Suicide: KAS ಅಧಿಕಾರಿ ಪತ್ನಿ, ಹೈಕೋರ್ಟ್‌ ವಕೀಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Share the Article

Suicide: ಕೆಎಎಸ್‌ ಅಧಿಕಾರಿಯ ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬೆಂಗಳೂರಿನ ಸಂಜಯ್‌ನಗರದ ನಿವಾಸದಲ್ಲಿ ನಡೆದಿದೆ.

ಚೈತ್ರಾಗೌಡ ಎಂಬಾಕೆಯೇ ಮೃತ ಮಹಿಳೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಡೆತ್‌ನೋಟ್‌ ಕೂಡಾ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಸಂಜಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತದೇಹವನ್ನು ಎಂಎಸ್‌ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇದನ್ನೂ ಓದಿ: ಪರ ಪುರುಷರೊಂದಿಗೆ ರೆಡ್ ಹ್ಯಾಂಡ್ ಪತಿ ಕೈಗೆ ಸಿಕ್ಕಿಬಿದ್ದ ವೈದ್ಯೆ ಪತ್ನಿ, ಮುಂದೆ ಆಗಿದ್ದೇನು?

KIADB (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಅಧಿಕಾರಿ ಶಿವಕುಮಾರ್‌ ಪತ್ನಿಯಾಗಿರುವ ಚೈತ್ರಾ ಅವರು ಗಂಡ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಶಿವಕುಮಾರ್‌ ಅವರು ಮನೆಗೆ ಬಂದಾಗ ಪತ್ನಿಯ ಮೃತದೇಹ ಕಂಡು ಬಂದಿತ್ತು. 2016 ರಲ್ಲಿ ಚೈತ್ರಾಳನ್ನು ಶಿವಕುಮಾರ್‌ ಮದುವೆಯಾಗಿದ್ದು, 5 ವರ್ಷದ ಹೆಣ್ಣು ಮಗು ಇದೆ. ಚೈತ್ರಾ ಅವರು ಹೈಕೋರ್ಟ್‌ ವಕೀಲೆಯಾಗಿದ್ದರು.

ಇದನ್ನೂ ಓದಿ: Kodagu: SSLC ವಿದ್ಯಾರ್ಥಿನಿಯ ಭೀಕರ ಹತ್ಯೆ ಪ್ರಕರಣ; ಅಪ್ರಾಪ್ತೆಯ ರುಂಡ ಪತ್ತೆ, ರುಂಡ ಎಲ್ಲಿತ್ತು ಗೊತ್ತೇ?

 

Leave A Reply