Uttar Pradesh: ಕ್ರೇಟಾ ಬದಲು ವ್ಯಾಗನ್-ಆರ್ ಕಾರು ಗಿಫ್ಟ್ ಕೊಟ್ಟ ಮಾವ – ಮದುವೆ ರದ್ದು ಮಾಡಿದ ವರ !!

Uttar Pradesh: ದಿನಗಳಲ್ಲಿ ತಾಳಿ ಕಟ್ಟುವ ಸಮಯದಲ್ಲಿ ಮದುವೆಗಳು ಮುರಿದು ಬೀಳುವಂತ ಪ್ರಕರಣಗಳು ಹೆಚ್ಚಾಗುತ್ತಿವೆ. ವಧು ಅಥವಾ ವರನ ಉದ್ಧಟತನದಿಂದಲೋ ಇಂತಹ ಪ್ರಸಂಗಗಳು ನಡೆದು ಪೋಷಕರಿಗೂ ಮುಜುಗರ ಉಂಟುಮಾಡುತ್ತಿವೆ. ಕೆಲ ದಿನಗಳ ಹಿಂದಷ್ಟೇ ವರನ ಸ್ನೇಹಿತನಿಗೆ ಸಿಹಿ ಬಡಿಸಲೆಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮದುವೆಯೊಂದು ತಿಂತು ಭಾರೀ ಸುದ್ದಿಯಾಗಿತ್ತು. ಇದೀಗ ಇಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ವರದಕ್ಷಿಣೆಯಂತಹ ಸಾಮಾಜಿಕ ಪಿಡುಗುಗಳು ಇಂದು ಕಡಿಮೆಯಾದರೂ ಮತ್ತೆ ಹುಟ್ಟಿಕೊಳ್ಳುತ್ತಿವೆಯೇನೋ ಅನಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದಲ್ಲಿ(Uttar Pradesh) ನಾಚಿಕೆಗೇಡಿನ ಘಟನೆಯೊಂದು ನಡೆದಿದೆ. ವರನೊಬ್ಬ ಹ್ಯುಂಡೈ ಕ್ರೆಟಾವನ್ನು ವರದಕ್ಷಿಣೆಯಾಗಿ ಕೇಳಿದ್ದು, ವಧುವಿನ ಕುಟುಂಬ ಮಾರುತಿ ಸುಜುಕಿ ವ್ಯಾಗನ್-ಆರ್ ನೀಡಿದ ಕಾರಣ ಮದುವೆಯನ್ನೇ ನಿಲ್ಲಿಸಲಾಗಿದೆ.

ಇದನ್ನೂ ಓದಿ: kawasaki ninja 400: ಇತಿಹಾಸದ ಪುಟ ಸೇರಿದ ರೈಡರ್ಗಳ ನೆಚ್ಚಿನ ಬೈಕ್ ಕವಾಸಕಿ ನಿಂಜಾ 400 : ಭಾರತ ಸೇರಿದಂತೆ ವಿಶ್ವದಾದ್ಯಂತ ಮಾರಾಟ ನಿಲ್ಲಿಸಿದ ಕಂಪನಿ

ಅಮೀರ್ ಆಲಂ ಎಂಬ ವರನ ಕುಟುಂಬವು ವಧುವಿನ ಕುಟುಂಬದವರಿಗೆ ಹ್ಯುಂಡೈ ಕ್ರೆಟಾ(Hyundai Creta)ಬೇಕಿಂದು ಒತ್ತಾಯಿಸಿದ್ದರು. ಆದರೆ ಕಾರಣಾಂತರಗಳಿಂದ ವಧುನಿನ ಕಡೆಯವರು ಕುಟುಂಬವು ಮಾರುತಿ ಸುಜುಕಿ ವ್ಯಾಗನ್ – ಆರ್(Wagon R) ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ವರನ ಕುಟುಂಬ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ವಧುವಿನ ಮನೆಗೆ ಮದುವೆ ಮೆರವಣಿಗೆ ಮೂಲಕ ಭೇಟಿ ನೀಡುವುದನ್ನು ನಿಲ್ಲಿಸಿ, ಕೊನೆಯ ಕ್ಷಣದಲ್ಲಿ ಮದುವೆಯನ್ನು ರದ್ದುಗೊಳಿಸಿದ್ದಾರೆ. ಮದುವೆಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ ಬಳಿಕ, ಕಾರಿನ ಕಾರಣದಿಂದಾಗಿ ವರನು ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ತಿಳಿದು ವಧುವಿನ ಕಡೆಯವರು ಆಘಾತಕ್ಕೊಳಗಾಗಿದ್ದಾರೆ. ಕಾರಿನ ಕಾರಣಕ್ಕೆ ಹೀಗಾಯಿತಲ್ಲಾ ಎಂದು ಹೆಣ್ಣಿನ ಕಡೆಯವರು ಆಘಾತಗೊಂಡಿದ್ದಾರೆ.

ಈ ಕುರಿತು ಸ್ವತಃ ನೊಂದ ಮಧುಮಗಳೇ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾಳೆ. ಮದುವೆಯಾಗಬೇಕ್ಕಿದ್ದ ಯುವತಿಯು ಕಣ್ಣೀರಿಡುತ್ತಾ ಇಡೀ ವಿಷಯವನ್ನು ವಿವರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಕಳೆದ ಎರಡು ದಿನಗಳಿಂದ ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಕೂಡ ವರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಸಮಯದಲ್ಲಿ ಪವನ್ ಕಲ್ಯಾಣ್ ಬಗ್ಗೆ ಚಿರಂಜೀವಿ ಸೆನ್ಸೇಷನಲ್ ಕಾಮೆಂಟ್!

ಸದ್ಯ ವರನು ದೊಡ್ಡ ಕಾರನ್ನು ಒತ್ತಾಯಿಸಿ, ಉಡುಗೊರೆ (ವರದಕ್ಷಿಣೆ) ಸಿಗದಿದ್ದಾಗ ಮದುವೆಯನ್ನು ರದ್ದುಗೊಳಿಸಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

https://x.com/TrueStoryUP/status/1786971054176608292?t=BT-FlY68nzmvM-ZJlChHSA&s=08

Leave A Reply

Your email address will not be published.