Puttur: ಮದ್ಯ ಸೇವಿಸಿ ನೆರೆಮನೆಗೆ ತೆರಳಿ ಗಲಾಟೆ ಯತ್ನ; ಸಂಕೋಲೆ ಕಟ್ಟಿ ಎಳೆತರುವಾಗ ಯುವಕ ಸಾವು
Puttur: ಮೇ.10 (ನಿನ್ನೆ) ರಂದು ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನೆರೆಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದುದ್ದನ್ನು ಮನೆಗೆ ಕರೆತರಲು ಆತನ ತಾಯಿ, ನೆರೆಮನೆಯಾತ ಕುತ್ತಿಗೆಗೆ ಸಂಕೋಲೆಯನ್ನು ಹಾಕಿ ಎಳೆದುಕೊಂಡು ಬರುತ್ತಿದ್ದ ಭರದಲ್ಲಿ ಯುವಕ ಮೃತಪಟ್ಟಿದ್ದು ಈ ಕುರಿತು ಕೇಸು ದಾಖಲಾಗಿದ್ದು, ಇಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಚೇತನ್ (33 ವರ್ಷ) ಸಾವಿಗೀಡಾಗಿದ್ದು, ಕಾಣುಮೂಲೆ ನಿವಾಸಿ ಮೃತ ಯುವಕನ ತಾಯಿ, ನೆರೆಮನೆಯ ಯೂಸುಫ್ ಬಂಧನ ಮಾಡಲಾಗಿದೆ.
ಮೇ.9 ರಂದು ರಾತ್ರಿ ಚೇತನ್ ಕುಡಿದು ಬಂದಿದ್ದು, ಮನೆಯಲ್ಲಿ ಗಲಾಟೆ ಮಾಡಿದ್ದ. ನಂತರ ತಡರಾತ್ರಿ ನೆರೆಮನೆಯ ಯೂಸುಫ್ ಅವರ ಮೆನಗೆ ತೆರಳಿದ್ದು, ಅಲ್ಲಿ ಹೋಗಿ ಕಿಟಕಿ ಗಾಜನ್ನು ಒಡೆದು ಹಾಕಿದ್ದು. ಈ ಕುರಿತು ಯೂಸುಫ್ ಚೇತನ್ ತಾಯಿಗೆ ಫೋನ್ ಮಾಡಿ ಹೇಳಿದ್ದರು.
ಇದನ್ನೂ ಓದಿ: Mangaluru: ವಿಮಾನ ಪ್ರಯಾಣಿಕನ ಅನುಚಿತ ವರ್ತನೆ; ಸಮುದ್ರಕ್ಕೆ ಹಾರುವುದಾಗಿ ಬೆದರಿಕೆ
ಚೇತನ್ ತಾಯಿ ಉಮಾವತಿ, ಯೂಸುಫ್ ಅವರ ಮನೆಗೆ ಬಂದು ಚೇತನ್‌ನನ್ನು ಕರೆದುಕೊಂಡು ಹೋಗಲು ಎಷ್ಟೇ ಪ್ರಯತ್ನ ಮಾಡಿದರೂ ಆತ ಬರಲೊಪ್ಪಲಿಲ್ಲ ಎನ್ನಲಾಗಿದ್ದು, ಕೊನೆಗೆ ಚೇತನ್ ದೇಹಕ್ಕೆ ಉಮಾವತಿ, ಯೂಸುಫ್ ಸಂಕೋಲೆ ಕಟ್ಟಿ, ಇಬ್ಬರೂ ಎಳೆದುಕೊಂಡು ಬಂದಿದ್ದು, ಈ ವೇಳೆ ಚೇತನ್ ಕೊಸರಾಟ ನಡೆಸಿದ್ದು, ಸಂಕೋಲ್ ಕುತ್ತಿಗೆಗೆ ಬಿಗಿದು ಚೇತನ್ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ.
ಮಲಗಿದ್ದ ಸ್ಥಿತಿಯಲ್ಲೇ ಇದ್ದ ಕಾರಣ ಮನೆ ಮಂದಿ ಚೇತನ್‌ನನ್ನು ಪುತ್ತೂರಿನ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲಿ ಆತ ಮೃತ ಹೊಂದಿದ್ದ. ಪೊಲೀಸರು ಮನೆ ಮಂದಿಯಲ್ಲಿ ಕೇಳಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಅನುಮಾನದಿಂದ ಪೊಲೀಸರು ವಿಚಾರಿಸಿದಾಗ ಸಂಕೋಲೆ ಕಟ್ಟಿ ಎಳೆದು ತಂದ ವಿಚಾರ ತಿಳಿದಿದೆ.
ಸುಮೊಟೋ ಪ್ರಕರಣ ದಾಖಲು ಮಾಡಿದ್ದು, ಚೇತನ್ ತಾಯಿ ಉಮಾವತಿ, ನೆರೆಮನೆಯ ಯೂಸುಫ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮೃತದೇಹವನ್ನು ಮಂಗಳೂರು ದೇರಳಕಟ್ಟೆಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ.
ಇದನ್ನೂ ಓದಿ: ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಟಿ ಜ್ಯೋತಿ ರೈ ಆರ್ಥಿಕ ಸಹಾಯ