Shivamogga: ಶಿವಮೊಗ್ಗದಲ್ಲಿ ಭೀಕರ ಕೊಲೆ; ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಜೋಡಿ ಕೊಲೆ

Share the Article

Shivamogga: ಶಿವಮೊಗ್ಗದ ಲಷ್ಕರ್‌ ಮೊಹಲ್ಲಾ ಸರ್ಕಲ್‌ ಬಳಿ ಬುಧವಾರ ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳನ್ನು ನಡುರಸ್ತೆಯಲ್ಲಿ ಹತ್ಯೆಗೈದ ಘಟನೆಯೊಂದು ನಡೆದಿದೆ.

ತುಂಗಾನಗರದ ಸೊಹೈಲ್‌(35), ದೊಡ್ಡಪೇಟೆ ಮೊಹಮ್ಮದ್‌ ಗೌಸ್‌ (30) ಹತ್ಯೆಯಾದವರು ಎಂದು ಗುರುತಿಸಲಾಗಿದೆ.

ರೌಡಿ ಶೀಟರ್‌ ಯಾಸೀನ್‌ ಕುರೇಶಿ ಮೇಲೆ ದಾಳಿ ಮಾಡಲೆಂದು ಬಂದ ತಂಡ ಯಾಸೀನ್‌ ಗೆ ಚಾಕುವಿನಿಂದ ಇರಿದಿದ್ದು, ಇದಕ್ಕೆ ಪ್ರತಿದಾಳಿಯಾಗಿ ಯಾಸಿನ್‌ ಕುರೇಶಿ ಗ್ಯಾಂಗ್‌ ದಾಳಿಗೆ ಬಂದಿದ್ದ ಇಬ್ಬರು ರೌಡಿಶೀಟ್‌ಗಳನ್ನು ಮನಬಂದಂತೆ ದಾಳಿ ಮಾಡಿದ್ದಾರೆ.

ಬ್ಯಾಟ್‌, ಲಾಂಗು, ಮಚ್ಚುಗಳಿಂದ ಕೊಚ್ಚಿ ನಂತರ ತಲೆಯ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.  ಹತ್ಯೆ ಮಾಡಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಯಾಸೀನ್‌ ಕುರೇಶಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಜ್ಯೋತಿ ರೈ ಖಾಸಗಿ ವಿಡಿಯೋ ವೈರಲ್ ಮಾಡಿದ್ಯಾರು? ಈ ಬಗ್ಗೆ ನಟಿ ಹೇಳಿದ್ದೇನು?

Leave A Reply