Tumkur: 7 ಬೋರು ಕೊರೆಸಿದರೂ ನೀರು ಕೊಡದ ಭೂಮಿ, ಹತಾಶ ರೈತನಿಂದ ಆತ್ಮಹತ್ಯೆ !
Tumkur: ತೋವಿನಕೆರೆ (ತುಮಕೂರು): ಎಷ್ಟೇ ಬೋರು ಕೊರೆಸಿದರೂ ಕೊಳವೆ ಬಾವಿಯಲ್ಲಿ ನೀರು ಸಿಗದೆ ಕಂಗಾಲಾಗಿದ್ದ ರಾಜಣ್ಣ (38) ಎಂಬ ರೈತ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೋರು ಕೊರೆಸಲು ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿದ್ದ ರಾಜಣ್ಣ ಅದನ್ನು ತೀರಿಸಲಾಗದೆ, ಅತ್ತ ಬೋರಲ್ಲಿ ನೀರು ಕೂಡಾ ಸಿಗದೇ ಹತಾಶರಾಗಿ ಸಾವಿನ ದಾರಿ ಕಂಡುಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಚಿಕ್ಕಣ್ಣನಹಳ್ಳಿ ಜಮೀನಿನಲ್ಲಿ ತೋಟದಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ತೋವಿನಕೆರೆ ಗ್ರಾಮದ ರೈತ ರಾಜಣ್ಣ ಕಳೆದ ಆರು ವರ್ಷದಲ್ಲಿ ಏಳು ಕೊಳವೆ ಬಾವಿ ಕೊರೆಸಿದ್ದರು. ತೀರ ಇತ್ತೀಚೆಗೆ ಹತ್ತು ದಿನಗಳ ಅಂತರದಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದು ಅಲ್ಲಿ ಕೂಡ ನಿರೀಕ್ಷಿತ ನೀರು ಬರದೆ ರೈತ ಕಂಗಾಲಾಗಿದ್ದರು.
ಅಲ್ಲದೆ, ಸಾಲ ನೀಡಿದ್ದ ವ್ಯಕ್ತಿಗಳು ಸಾಲ ಮರುಪಾವತಿ ಮಾಡಲು ಕಳೆದ ಮೂರು ದಿನಗಳಿಂದ ಹಣ ಹಿಂದಿರುಗಿಸುವಂತೆ ಮನೆಗೆ ಬಂದು ಒತ್ತಡ ಹೇರಿದ್ದರು. ಅತ್ತ ಭೂಮಿಯು ತನ್ನ ಪಾಲಿಗೆ ಒಲಿಯದೆ ಇತ್ತ ಇರುವ ಬೆಳೆಯು, ಸುಟ್ಟು ಹೋಗುತ್ತಿರುವಾಗ ಅನ್ಯ ದಾರಿ ಕಾಣದೆ ರೈತರ ರಾಜಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ.. ಇದೀಗ ಕಂದಾಯ ಇಲಾಖೆಯ ರಶ್ಮಿ ಮಧು ರಾಜ್ಯಗಳು ಜಮೀನಿಗೆ ಭೇಟಿ ನೀಡಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ರೈತರಿಗೆ ಸಿಹಿಸುದ್ದಿ ; ಸಚಿವ ಕೃಷ್ಣ ಬೈರೇಗೌಡ