PM Modi: ನನಗೆ ಮತ್ತು ಯೋಗಿಗೆ ಮಕ್ಕಳಿಲ್ಲ, ನಿಮ್ಮ ಮಕ್ಕಳಿಗಾಗಿ ದುಡಿಯುತ್ತೇವೆ – ಮುಂದಿನ ಪ್ರಧಾನಿ ಸುಳಿವು ನೀಡಿದ್ರಾ ಮೋದಿ !!

Share the Article

PM Modi: ನನಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Adityhyanath) ಗೆ ಮಕ್ಕಳಿಲ್ಲ, ಹೀಗಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ಮುಂದೆಯೂ ದುಡಿಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ. ಈ ಮೂಲಕ ಮುಂದಿನ ಪ್ರಧಾನಿ ಯಾರೆಂಬ ಸುಳಿವನ್ನೂ ಕೂಡ ಮೋದಿ(PM Modi) ನೀಡಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: Job Alert: ಉದ್ಯೋಗ ಹುಡುಕುತ್ತಾ ಇದ್ದೀರಾ? ಈ ವಾರವೇ ಇಲ್ಲಿಗೆ ಅಪ್ಲೈ ಮಾಡಿ

ಹೌದು, ಉತ್ತರ ಪ್ರದೇಶದ(UP) ಎಟಾವಾದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಎಸ್‌ಪಿ-ಕಾಂಗ್ರೆಸ್ ಮೈತ್ರಿ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ಎರಡೂ ಪಕ್ಷಗಳು ತಮ್ಮ ಮಕ್ಕಳ ರಾಜಕೀಯ ಉಳಿವಿಗಾಗಿ ಚುನಾವಣೆ ಎದುರಿಸುತ್ತಿದ್ದರೆ, ಮೋದಿ-ಯೋಗಿ ನಿಮ್ಮ ಮಕ್ಕಳ ಏಳಿಗೆಗೆ ಚುನಾವಣೆ ಎದುರಿಸುತ್ತಿದ್ದಾರೆ. ನಾನು ಚಿಕ್ಕಂದಿನಲ್ಲಿ ಚಾಯ್‌ವಾಲಾ ಆಗಿದ್ದರೂ, ಕುಟುಂಬದವರಿಗೇ ಪ್ರಧಾನಿ ಹುದ್ದೆ ದೊರಕಬೇಕು ಎಂಬ ಸಂಕೋಲೆ ಕಳಚಿ ಉನ್ನತ ಸ್ಥಾನಕ್ಕೇರಿದ್ದೇನೆ’ ಎಂದರು.

ಇದನ್ನೂ ಓದಿ: monkey Viral Video: ಮೀನುಗಾರನ ದೋಣಿ ಏರಿದ ವಿಚಿತ್ರ ಜೀವಿಯ ವಿಡಿಯೋ ವೈರಲ್ – ನೀಲ ಮುಖದ ಈ ಭೀಕರ ಪ್ರಾಣಿ ಯಾವುದು ಗೊತ್ತೇ ?

ಅಲ್ಲದೆ ನನಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಮಕ್ಕಳಿಲ್ಲ, ಹೀಗಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅದೇ ರೀತಿ 2047ರಲ್ಲಿ ನಿಮ್ಮ ಮಕ್ಕಳೂ ಪಿಎಂ, ಸಿಎಂ ಆಗಬೇಕು. ಇದೇ ನನ್ನ ಇಚ್ಛೆ’ ಎಂದು ಜನತೆಗೆ ಕರೆ ನೀಡಿದರು.

Leave A Reply

Your email address will not be published.